IMG 20260321 WA0000

ಪಾವಗಡ: ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹತ್ಯೆ….!

DISTRICT NEWS ತುಮಕೂರು

ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹತ್ಯೆ…..

ಪಾವಗಡ : ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ತಮ್ಮ ಕಛೇರಿಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡದ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ

ಸ್ಥಳಕ್ಕೆ ಪಾವಗಡ ಸಿ.ಬಿ.ಪಿ ಕೆ.ಸುರೇಶ್ ರವರು ಬಂದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರತಿ ನಿತ್ಯ ಕಚೇರಿ ಸಮಯದ ನಂತರ ಮನೆಗೆ ತೆರಳುತಿದ್ದ ಮಲ್ಲಿಕಾರ್ಜುನ ರವರು ಇಂದು ತಡವಾದರು ಕಚೇರಿಯಲ್ಲಿ ಒಂಟಿಯಾಗಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ ಸಿಬ್ಬಂದಿ ಕರೆದರು ಬರದೆ ರೂಮ್ ಲಾಕ್ ಮಾಡಿಕೊಂಡಿದ್ದಾರೆ ಅನುಮಾನ ಬಂದು ಹಿಂಬದಿಯ ಕಿಟಕಿಯಲ್ಲಿ ನೋಡಿದಾಗ ಮಲ್ಲಿಕಾರ್ಜುನ್ ರವರು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದಾಗಿ ಗೊತ್ತಾಗಿದೆ

ಆತ್ಮಹತ್ಯೆ ಗೂ ಮುನ್ನ ತಮ್ಮ ಮೊಬೈಲ್ ಅಲ್ಲಿ ವಿಡೀಯೋ ಮಾಡಿ ತಮ್ಮ ಸಹದ್ಯೂಗಿಗಳಿಗೆ ಕಾಲುಹಿಸಿದ್ದಾರೆಇನ್ನು ಒಂದು ವಾರದಲ್ಲಿ ಇವರ ಸೇವಾ ಅವಧಿ ಮುಕ್ತಾಯಗೊಳ್ಳಬೇಕಿತ್ತು

ಇನ್ನು ವಿಡೀಯೋ ದಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ಧೆಶಕ ಕೃಷ್ಣಪ್ಪ ಕಿರುಕುಳ ಎಂದು ವಿಡೀಯೋ ದಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳಕ್ಕೆ ಪಾವಗಡ ಸಿ.ಪಿ.ಐ ಕೆ.ಸುರೇಶ್ ಹಾಗೂ ಅಡಿಷನಲ್ ಎಸ್.ಪಿ. ಪುರುಷೋತ್ತಮ್ ಬೇಟಿ ನೀಡಿ ಪರಿಶಿಲಿಸಿದ್ದಾರೆ.

ವರದಿ : ಶ್ರೀನಿವಾಸಲು ಎ