ಸೀ ಒನ್, ಡೂ ಒನ್ ನಿಂದ ಸಿಮ್ಯುಲೇಟ್, ಮಾಸ್ಟರ್, ಹೀಲ್’ವರೆಗೆ: ಮುಂದುವರಿದ ಶಸ್ತ್ರಚಿಕಿತ್ಸಾ ತರಬೇತಿಯಲ್ಲಿ ಬೆಂಗಳೂರು ತನ್ನ ಪಾತ್ರವನ್ನು ಬಲಪಡಿಸುತ್ತದೆ
ವಿಕಸನಗೊಳ್ಳುತ್ತಿರುವ ಸರ್ಜಿಕಲ್ ಶಿಕ್ಷಣವನ್ನು ಬೆಂಬಲಿಸಲು ಬೆಂಗಳೂರಿನಲ್ಲಿ ಗ್ಲೋಬಲ್ ಸರ್ಜಿಕಲ್ ಇನ್ ಸ್ಟಿಟ್ಯೂಟ್ ಆರಂಭ
ಬೆಂಗಳೂರು, ಏಪ್ರಿಲ್ 15, 2026: ಜಗತ್ತಿನಾದ್ಯಂತ ಆರೋಗ್ಯ ರಕ್ಷಣಾ ವ್ಯವಸ್ಥೆಗಳು ರೋಗಿಗಳ ಸುರಕ್ಷತೆ, ಶಸ್ತ್ರಚಿಕಿತ್ಸೆಗಳ ನಿಖರತೆ ಮತ್ತು ವೈದ್ಯಕೀಯ ಫಲಿತಾಂಶಗಳನ್ನು ಸುಧಾರಣೆ ಮಾಡುವತ್ತ ಗಮನಹರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಜನ್ ಗಳು ಅಂದರೆ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡುವ ವಿಧಾನವನ್ನು ಬಲಪಡಿಸುವತ್ತ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ, ಬೆಂಗಳೂರಿನ ಗ್ಲೋಬಲ್ ಸರ್ಜಿಕಲ್ ಇನ್ ಸ್ಟಿಟ್ಯೂಟ್ (GSI) ಆರಂಭವಾಗಿದ್ದು, ರಚನಾತ್ಮಕ, ಸಿಮ್ಯುಲೇಶನ್ ನೇತೃತ್ವದ ಕಲಿಕೆಯ ಮೂಲಕ ಶಸ್ತ್ರಚಿಕಿತ್ಸಾ ಶಿಕ್ಷಣವನ್ನು ಮುನ್ನಡೆಸುವತ್ತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಜಾಗತಿಕ ವೈದ್ಯಕೀಯ ಕಾರ್ಯಪಡೆ ಕ್ಷೇತ್ರಕ್ಕೆ ಭಾರತವು ಬಹಳ ಹಿಂದಿನಿಂದಲೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದು, ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದೆನಿಸಿದೆ. ಸಾವಿರಾರು ಭಾರತೀಯ ತರಬೇತಿ ಹೊಂದಿದ ವೈದ್ಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಮತ್ತು ದೇಶವು ವೈದ್ಯಕೀಯ ಮೌಲ್ಯ ಪ್ರಯಾಣದ ಆದ್ಯತೆಯ ತಾಣವಾಗಿ ಮುಂದುವರಿದಿದೆ. ಈ ಸದೃಢವಾದ ಅಡಿಪಾಯದ ಜೊತೆಗೆ ವಿಕಸನಗೊಳ್ಳುತ್ತಿರುವ ಜಾಗತಿಕ ಅಭ್ಯಾಸಗಳಿಗೆ ಅನುಗುಣವಾಗಿ ಹ್ಯಾಂಡ್ಸ್ಆನ್ ಶಸ್ತ್ರಚಿಕಿತ್ಸಾ ತರಬೇತಿಯನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವನ್ನು ಹೆಚ್ಚಿಸುತ್ತಿದೆ.
ಸಾಂಪ್ರದಾಯಿಕವಾಗಿ ಶಸ್ತ್ರಚಿಕಿತ್ಸಾ ಶಿಕ್ಷಣವು ಶಿಷ್ಯವೃತ್ತಿ ಆಧಾರಿತ ವಿಧಾನವನ್ನು ಅನುಸರಿಸುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ “ಒಂದನ್ನು ವೀಕ್ಷಿಸಿ, ಒಂದನ್ನು ಮಾಡಿ, ಒಂದನ್ನು ಕಲಿಸಿ’’ ಎಂದು ವಿವರಿಸಲಾಗುತ್ತದೆ. ಈ ಮಾದರಿಯು ನುರಿತ ಶಸ್ತ್ರಚಿಕಿತ್ಸಕರ ಪೀಳಿಗೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು ಸುರಕ್ಷಿತ ಮತ್ತು ನಿಯಂತ್ರಿತ ವಾತಾವರಣದಲ್ಲಿ ವೈದ್ಯಕೀಯ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸಲು ಪೂರಕವಾದ ವಿಧಾನವಾಗಿ ಸಿಮ್ಯುಲೇಶನ್ ಆಧಾರಿತ ತರಬೇತಿಯನ್ನು ಹೆಚ್ಚು ಹೆಚ್ಚು ಸಂಯೋಜನೆ ಮಾಡಲಾಗುತ್ತದೆ.
ಗ್ಲೋಬಲ್ ಸರ್ಜಿಕಲ್ ಇನ್ ಸ್ಟಿಟ್ಯೂಟ್ ಅನ್ನು ಬಹು ವಿಶೇಷ ತರಬೇತಿ ಸೌಲಭ್ಯವಾಗಿ ಸ್ಥಾಪಿಸಲಾಗಿದೆ. ಇದು ನೈಜ-ಪ್ರಪಂಚದ ಕ್ಲಿನಿಕಲ್ ಎಕ್ಸ್ ಪೋಸರ್ ಗಿಂತ ಮೊದಲು ಸಿಮ್ಯುಲೇಶನ್ ಮೂಲಕ ಕೌಶಲ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ. ರಚನಾತ್ಮಕ ಕಲಿಕೆಯ ಮಾರ್ಗದ ಮೂಲಕ ತಾಂತ್ರಿಕ ಪ್ರಾವೀಣ್ಯತೆ ಮತ್ತು ಆತ್ಮವಿಶ್ವಾಸ ಎರಡನ್ನೂ ನಿರ್ಮಾಣ ಮಾಡುವಲ್ಲಿ ಶಸ್ತ್ರಚಿಕಿತ್ಸಕರನ್ನು ಬೆಂಬಲಿಸುವುದು ಇದರ ಪ್ರಮುಖ ಗುರಿಯಾಗಿದೆ.
ಈ ಉಪಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ನ ಅಧ್ಯಕ್ಷ ಮತ್ತು ಸಿಇಒ ಡಾ.ಬಿ.ಎಸ್.ಅಜಯ್ ಕುಮಾರ್ ಅವರು, “ಭಾರತವು ವೈದ್ಯಕೀಯ ಕ್ಷೇತ್ರದಲ್ಲಿ ಶ್ರೇಷ್ಠತೆಯ ಬಲವಾದ ಪರಂಪರೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಆರೋಗ್ಯ ರಕ್ಷಣೆ ವಿಕನಸಗೊಳ್ಳುತ್ತಿರುವಂತೆ ತರಬೇತಿಗೆ ನಮ್ಮ ವಿಧಾನವೂ ಸಹ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಮ್ಯುಲೇಶನ್ ಆಧಾರಿತ ಕಲಿಕೆಯು ವೈದ್ಯರು ರಚನಾತ್ಮಕವಾದ ವಾತಾವರಣದಲ್ಲಿ ತಮ್ಮ ಕೌಶಲ್ಯಗಳನ್ನು ಪರಿಷ್ಕರಿಸಲು ಅನುವು ಮಾಡಿಕೊಡುವ ಮೂಲಕ ಶಸ್ತ್ರಚಿಕಿತ್ಸಾ ಸಿದ್ಧತೆಯನ್ನು ಹೆಚ್ಚಿಸಲು ಅವಕಾಶವನ್ನು ಕಲ್ಪಿಸುತ್ತದೆ. ಗ್ಲೋಬಲ್ ಸರ್ಜಿಕಲ್ ಇನ್ ಸ್ಟಿಟ್ಯೂಟ್ ನಂತಹ ಉಪಕ್ರಮಗಳು ಅಸ್ತಿತ್ವದಲ್ಲಿರುವ ತರಬೇತಿ ವ್ಯವಸ್ಥೆಗಳಿಗೆ ಪೂರಕವಾಗಿ ಮತ್ತು ಹೆಚ್ಚು ಸಾಧನೆ ಮಾಡಿದ ಶಸ್ತ್ರಚಿಕಿತ್ಸಕರ ವಿಶಿಷ್ಟ ಅಧ್ಯಾಪಕರ ನೇತೃತ್ವದ ಸುಧಾರಿತ ರೋಗಿಯ ಆರೈಕೆ ಫಲಿತಾಂಶಗಳು ಮತ್ತು ತರಬೇತಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿವೆ’’ ಎಂದು ತಿಳಿಸಿದರು.
GSI ನ ವಿಧಾನದ ಮೂಲತತ್ತ್ವವೆಂದರೆ ಅಂತಾರಾಷ್ಟ್ರೀಯ ಅಭ್ಯಾಸಗಳೊಂದಿಗೆ ಹೊಂದಿಕೆಯಾಗುವ ಪ್ರಗತಿಶೀಲ ಐದು-ಹಂತದ ತರಬೇತಿ ಮಾರ್ಗ:
ಮೂಲಭೂತ ಮೋಟಾರ್ ಕೌಶಲ್ಯ ಮತ್ತು ಕೈ-ಕಣ್ಣಿನ ಸನ್ವಯಕ್ಕಾಗಿ ಬಾಕ್ಸ್ ತರಬೇತುದಾರರು
ಸಂಕೀರ್ಣ ಶಸ್ತ್ರಚಿಕಿತ್ಸಾ ಸನ್ನಿವೇಶಗಳನ್ನು ಪುನರಾವರ್ತನೆ ಮಾಡಲು ವರ್ಚುವಲ್ ರಿಯಾಲಿಟಿ ಸಿಮ್ಯುಲೇಟರ್ ಗಳು
ಅಂಗಾಂಶ ನಿರ್ವಹಣಾ ಅನುಭವಕ್ಕಾಗಿ ಪ್ರಾಣಿ ಪ್ರಯೋಗಾಲಯಗಳು
ಅಂಗರಚನಾ ವಾಸ್ತವಿಕತೆಗಾರಿ ಶವ ಪ್ರಯೋಗಾಲಯಗಳು
ಅಂತಿಮ ಹಂತವಾಗಿ ಮೇಲ್ವಿಚಾರಣೆಯು ಶಸ್ತ್ರಚಿಕಿತ್ಸಾ ಕೊಠಡಿಗಳ ಸ್ಥಾಪನೆ
ಈ ಹಂತ ಹಂತವಾದ ಪ್ರಗತಿಯನ್ನು ಶಸ್ತ್ರಚಿಕಿತ್ಸಕರು ಸಿಮ್ಯುಲೇಟೆಡ್ ಪರಿಸರದಿಂದ ಕ್ಲಿನಿಕಲ್ ಅಭ್ಯಾಸಕ್ಕೆ ಹೆಚ್ಚಿನ ವಿಶ್ವಾಸ ಮತ್ತು ಸಾಮರ್ಥ್ಯದೊಂದಿಗೆ ಪರಿವರ್ತನೆಗೊಳ್ಳಲು ಬೆಂಬಲ ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಸಿಮ್ಯುಲೇಶನ್ ಆಧಾರಿತ ತರಬೇತಿಯನ್ನು ಬೆಂಬಲಿಸುವ ಮತ್ತು ಸುಧಾರಿತ ದಕ್ಷತೆ, ವರ್ಧಿತ ಕೌಶಲ್ಯ ಧಾರಣ ಮತ್ತು ಶಸ್ತ್ರಚಿಕಿತ್ಸೆಯೊಳಗಿನ ದೋಷಗಳನ್ನು ಕಡಿಮೆ ಮಾಡುವ ಸಾಧ್ಯತೆಗಳ ಪ್ರಯೋಜನಗಳನ್ನು ಸೂಚಿಸುವ ನಿಟ್ಟಿನಲ್ಲಿ ಬೆಳೆಯುತ್ತಿವೆ. ಇದರ ಪರಿಣಾಮವಾಗಿ ಅನೇಕ ಸಂಸ್ಥೆಗಳು ಸಾಂಪ್ರದಾಯಿಕ ವಿಧಾನಗಳ ಜೊತೆಗೆ ತಮ್ಮ ಬೋಧನಾ ಚೌಕಟ್ಟಿನಲ್ಲಿ ಸಿಮ್ಯುಲೇಶನ್ ಅನ್ನು ಹೆಚ್ಚಾಗಿ ಸೇರ್ಪಡೆ ಮಾಡಿಕೊಳ್ಳುತ್ತಿವೆ.
ಈ ಬಗ್ಗೆ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS)ನ ಉಪಕುಲಪತಿ ಡಾ.ಭಗವಾನ್ ಬಿ.ಸಿ. ಅವರು, “ವೈದ್ಯಕೀಯ ಶಿಕ್ಷಣವು ವಿಕಸನಗೊಳ್ಳುತ್ತಲೇ ಇರುವುದರಿಂದ ಸ್ಥಾಪಿತ ತರಬೇತಿ ವಿಧಾನಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಸಂಯೋಜನೆ ಮಾಡುವ ಸಮತೋಲಿತ ವಿಧಾನವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಸಾಂಪ್ರದಾಯಿಕ ಕ್ಲಿನಿಕಲ್ ತರಬೇತಿಯ ಜೊತೆಗೆ ಬಳಸಿದಾಗ ಸಿಮ್ಯುಲೇಶನ್ ಆಧಾರಿತ ಕಲಿಕೆಯು ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸುತ್ತದೆ. ಇಂತಹ ಉಪಕ್ರಮಗಳು ಆರೋಗ್ಯ ಶಿಕ್ಷಣದ ಒಟ್ಟಾರೆ ಗುಣಮಟ್ಟವನ್ನು ಬಲಪಡಿಸಲು ಕೊಡುಗೆ ನೀಡುತ್ತವೆ ಮತ್ತು ಅಂತಿಮವಾಗಿ ರೋಗಿಗಳ ಆರೈಕೆಗೆ ಪ್ರಯೋಜನವನ್ನು ನೀಡುತ್ತವೆ’’ ಎಂದು ಅಭಿಪ್ರಾಯಪಟ್ಟರು.
ವೈದ್ಯಕೀಯ ಕ್ಷೇತ್ರ ಮುಂದುವರಿದಂತೆ ತರಬೇತಿ ಗುಣಮಟ್ಟವನ್ನು ನಿರಂತರವಾಗಿ ಸುಧಾರಣೆ ಮಾಡುವ ಎಲ್ಲಾ ಸಂಸ್ಥೆಗಳಲ್ಲಿ ಸಾಮೂಹಿಕ ಪ್ರಯತ್ನಗಳು ನಡೆಯುತ್ತಿವೆ. GSI ನಂತಹ ಉಪಕ್ರಮಗಳು ಈಗಾಗಲೇ ಅಸ್ತಿತ್ವದಲ್ಲಿರುವ ಬಲವಾದ ಅಡಿಪಾಯಗಳಿಗೆ ಪೂರಕವಾಗಿ ಹೆಚ್ಚು ರಚನಾತ್ಮಕ ಮತ್ತು ಭವಿಷ್ಯಕ್ಕೆ ಸಿದ್ಧವಾದ ಶಸ್ತ್ರಚಿಕಿತ್ಸಾ ಶಿಕ್ಷಣ ವ್ಯವಸ್ಥೆಗಳೊಂದಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ವಿಶಾಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
