IMG 20211117 WA0073

Colorathon : ಸೀಸನ್-13, ಭಾರತದ ಅತಿದೊಡ್ಡ ಆನ್‌ಲೈನ್ ಚಿತ್ರಕಲೆ ಕಾರ್ಯಕ್ರಮ ಆರಂಭ…!

BUSINESS

Colorathon (ಕಲರಾಥಾನ್) ಸೀಸನ್-13, ಭಾರತದ ಅತಿದೊಡ್ಡ ಆನ್‌ಲೈನ್ ಚಿತ್ರಕಲೆ ಕಾರ್ಯಕ್ರಮ

ಹೊಸದಿಲ್ಲಿ, ಲಕ್ನೋ, ಚೆನ್ನೈ, ಬೆಂಗಳೂರು, ಮತ್ತು ಹೈದರಾಬಾದ್‌ ನಗರಗಳು ಸೇರಿದಂತೆ ದೇಶದಾದ್ಯಂತ 1 ಲಕ್ಷಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುವ ಅತಿದೊಡ್ಡ ಚಿತ್ರಕಲೆ ಉತ್ಸವ ಇದಾಗಿದೆ. ಈ ಬಾರಿ ಇದು ಸಂಪೂರ್ಣ ದೇಶವನ್ನು ಒಳಗೊಳ್ಳಲಿದೆ.

ಈ ವರ್ಷ 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

Colorothon – Draw your imagination (ನಿಮ್ಮ ಕಲ್ಪನೆಗೆ ಬಣ್ಣತುಂಬಿ) ಎಂಬುದು ಬ್ರೀಥ್ ಎಂಟರ್‌ಟೈನ್‌ಮೆಂಟ್ ಮತ್ತು ಕಿಡ್ಸ್‌ಚೌಪಲ್‌ನ ಜಂಟಿ ಅಭಿಯಾನವಾಗಿದೆ. ಇದು ಚಿತ್ರಕಲೆಗೆ ಮರು ಜೀವ ತುಂಬುವ ಮತ್ತು ಸಾಧ್ಯವಾದಷ್ಟು ಸೃಜನಶೀಲತೆಯಿಂದ ಕಾಗದದ ಮೇಲೆ ಕಲಾವಿದರ ಕಲ್ಪನೆಯನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳಿಗೆ ಶಿಕ್ಷಣದ ಏಕತಾನತೆಯ ದಿನಚರಿಯಿಂದ ಮುಕ್ತಿ ನೀಡಲು ನೆರವಾಗುತ್ತದೆ. ಈ ವಯಸ್ಸಿನ ಹೆಚ್ಚಿನ ಸಂಖ್ಯೆಯ ಮಂದಿ ಆನ್‌ಲೈನ್‌ನಲ್ಲಿ ಚಿತ್ರಿಸುವ ಎಕ್ಸ್ಲೂಸಿವ್ ವಲ್ಡ್ ರೆಕಾರ್ಡ್ ಮಾಡಲಿದ್ದಾರೆ. ನವೆಂಬರ್ 14 ರ ಮಕ್ಕಳ ದಿನಾಚರಣೆಯಂದು ಸ್ಪರ್ಧೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತವೆ ಮತ್ತು ಅರ್ಜಿಗಳನ್ನು KidsChaupal ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಜನಪ್ರಿಯವಾಗಿರುವ ಹಾಗೂ ಎಲ್ಲರಿಗೂ ತಿಳಿದಿರುವಂತೆ, Colorothon ನ ಮೊದಲ ಹನ್ನೆರಡು ಸೀಸನ್‌ಗಳನ್ನು ಆಫ್‌ಲೈನ್‌ನಲ್ಲಿ ನಡೆಸಲಾಯಿತು. ಸಾಂಕ್ರಾಮಿಕ ರೋಗವು ಈ ವರ್ಷ ಕಲಾವಿದರ ಉತ್ಸಾಹವನ್ನು ಕುಗ್ಗಿಸುವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಕಿಡ್ಸ್‌ಚೌಪಾಲ್ ಇನ್ನೊಂದು ಹೆಜ್ಜೆ ಮುಂದೆ ಇಟ್ಟು ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಸಲು ಮುಂದಾದರು. 15 ವರ್ಷದ ಬಹುಮುಖ ಪ್ರತಿಭೆಯ ಕಲಾವಿದೆ ಮತ್ತು ಪ್ರದರ್ಶಕಿ, ಕಿಡ್ಸ್‌ಚೌಪಾಲ್‌ನ ಬ್ರಾಂಡ್ ಅಂಬಾಸಿಡರ್ ತಿಸ್ಯಾ ಸಿಂಗ್ ಈ ವರ್ಷ ಕಲರ್‌ಥಾನ್‌ನ ಮುಂದಾಳತ್ವ ವಹಿಸಿದ್ದಾರೆ. ಕಿಡ್ಸ್‌ಚೌಪಲ್‌ನ ಸಹ-ಸಂಸ್ಥಾಪಕರು, ಶ್ರೀ. ಧೀರಜ್ ಸಿಂಗ್, ಶ್ರೀ. ಆಶಿಶ್ ಶ್ರೀವಾಸ್ತವ ಮತ್ತು ಶ್ರೀ. ದೇವೇಂದ್ರ ಜೈಸ್ವಾಲ್ ಅವರು ತಮ್ಮ ಸೃಜನಶೀಲತೆಯನ್ನು ಹೊರಹಾಕಲು ಮಕ್ಕಳಿಗೆ ಪ್ಯಾನ್ ಇಂಡಿಯಾ ಕಾರ್ಯಕ್ರಮವನ್ನು ರೂಪಿಸಿ ಕೊಟ್ಟಿದ್ದಾರೆ. ದೇಶಾದ್ಯಂತದ ಮಕ್ಕಳು ಪಾಲ್ಗೊಳ್ಳುವಂತೆ ಮಾಡಲು, ದೇಶದ ಮೂಲೆ ಮೂಲೆಗಳನ್ನು ತಲುಪುವ ಅಡಚಣೆ ನಿವಾರಣೆಗಾಗಿ, ಅವರ ಅಪ್ಲಿಕೇಶನ್ ಎಲ್ಲಾ ಮಕ್ಕಳಿಗೆ ಈವೆಂಟ್‌ನಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.

” ದೇಶಾದ್ಯಂತದ ಭಾರತೀಯರು ಚಿತ್ರಕಲೆಯ ಕಲರ್‌ಥಾನ್ ದಿನದ ಆಚರಣೆಯಲ್ಲಿ ಪಾಲ್ಗೊಳ್ಳುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಕಲೊರೊಥಾನ್‌ನ ಸಂಸ್ಥಾಪಕ ಟ್ರಸ್ಟಿ ಕಿಶೋರ್ ಜೋಸೆಫ್ ಹೇಳಿದರು.

ಉನ್ನತ ಸ್ಥರದ ಮುನ್ನೂರು ವರ್ಣಚಿತ್ರಗಳನ್ನು Colorothon ನ ಚಾರಿಟಿ ಪಾಲುದಾರರಿಗೆ ದಾನ ಮಾಡಲಾಗುವುದು. ನಮ್ಮ ಯುವ ಪ್ರತಿಭೆಗಳು ಉದ್ಯಮಿಗಳಾಗಲು shop.kidschaupal.com ನ ಪ್ರತಿ ವಿಭಾಗದಲ್ಲಿ ಅಗ್ರ ಇನ್ನೂರು ವರ್ಣಚಿತ್ರಗಳನ್ನು ಖರೀದಿಸಲು ಅವಕಾಶವಿರುತ್ತದೆ.

ಈ ವರ್ಷದ ಅತಿ ಹೆಚ್ಚು ಮಂದಿ ಪಾಲುಗೊಳ್ಳುವುದರ ಜೊತೆಗೆ, ಕಾರ್ಯಕ್ರಮ ಯುವ ಸೃಜನಶೀಲ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಲಿದೆ. ಇದು ಸೃಜನಶೀಲತೆ ಮತ್ತು ಕಲೆಯಿಲ್ಲದ ಜೀವನವು ಎಂದಿಗೂ ವರ್ಣಮಯವಾಗಿರಲು ಸಾಧ್ಯವಿಲ್ಲ ಎಂಬುದನ್ನು ಸಾರಿ ಹೇಳಿ ಹೆಚ್ಚು ಜನ ಪಾಲ್ಗೊಳ್ಳುವಂತೆ ಮಾಡುತ್ತದೆ.

ಕಾರ್ಯಕ್ರಮದ ವಿವರ:

• ಪ್ರವೇಶ ಉಚಿತ

• ಅವಧಿ – ಮಕ್ಕಳ ದಿನಾಚರಣೆ, ನವೆಂಬರ್ 14 ರಿಂದ ಡಿಸೆಂಬರ್ 15 ರವರೆಗೆ

• ಮೂರು ವಿಭಿನ್ನ ವಯಸ್ಸಿನ ವಿಭಾಗಗಳು – ಆರ್ಟ್ ಟ್ರೀಟ್ (LKG ನಿಂದ 2 ನೇ ಗ್ರೇಡ್); ಆಲ್ ಎಬೌಂಟ್ ಶೇಡ್ಸ್ (3 ರಿಂದ 7 ನೇ ಗ್ರೇಡ್); ಕ್ರಿಯೇಟಿವ್ ಸ್ಟ್ರೀಕ್ (8 ರಿಂದ 12 ನೇ ತರಗತಿ)

• ಸಲ್ಲಿಕೆ ವಿಧಾನ: A3/A4 ಡ್ರಾಯಿಂಗ್ ಶೀಟ್ ಅಥವಾ ಕ್ಯಾನ್ವಾಸ್ ಯಾವುದಾದರೂ

• ಪ್ರತಿ ಸಲ್ಲಿಕೆಗೆ E- ಪ್ರಮಾಣಪತ್ರ, ಎಕ್ಸ್ಲೂಸಿವ್ ವಲ್ಡ್ ರೆಕಾರ್ಡ್ ನಿಂದ ಮೆಚ್ಚುಗೆ ಪತ್ರ.

• 600 ಅತ್ಯುತ್ತಮ ವರ್ಣಚಿತ್ರಗಳನ್ನು (ಪ್ರತಿ ವಿಭಾಗದಲ್ಲಿ 200) ಕಿಡ್ಸ್‌ಚೌಪಲ್ ಇ-ಕಾಮರ್ಸ್ ವೆಬ್‌ಸೈಟ್-shop.kidschaupal.com ನಲ್ಲಿ ಹರಾಜಿಗೆ ಆಯ್ಕೆ ಮಾಡಲಾಗುತ್ತದೆ

• ಮೆಗಾ ಈವೆಂಟ್‌ನಲ್ಲಿ ಪ್ರತಿಷ್ಠಿತ ತೀರ್ಪುಗಾರರಿಂದ ಆಯ್ಕೆಯಾದ 15 ಅತ್ಯುತ್ತಮ ಪೇಂಟಿಂಗ್‌ಗಳಿಗೆ (ಪ್ರತಿ ವಿಭಾಗದಲ್ಲಿ 5) ಬಹುಮಾನ ನೀಡಲಾಗುತ್ತದೆ.