IMG 20260414 WA0001

Karnataka : ಹ್ಯಾಪಿಯೆಸ್ಟ್ ಪರ್ಲ್ಸ್‌ನ ಡೆಂಟಲ್ ಕ್ಲಿನಿಕ್ ಆರಂಭ….!

BUSINESS

*ಹ್ಯಾಪಿಯೆಸ್ಟ್ ಪರ್ಲ್ಸ್‌ನ ಡೆಂಟಲ್ ಕ್ಲಿನಿಕ್ ಉದ್ಘಾಟನೆ: ಹ್ಯಾಪಿಯೆಸ್ಟ್ ಹೆಲ್ತ್‌ನಿಂದ ದಂತ ಚಿಕಿತ್ಸಾ ವಿಭಾಗ ವಿಸ್ತರಣೆ‍*

ಬೆಂಗಳೂರು: ಹ್ಯಾಪಿಯೆಸ್ಟ್ ಹೆಲ್ತ್ ವೈಟ್‌ಫೀಲ್ಡ್‌ನ ಮಿರಾಯಾ ರೋಸ್ ಕಾಂಪ್ಲೆಕ್ಸ್‌ನಲ್ಲಿ ತನ್ನ ಎರಡನೇ ‘ಹ್ಯಾಪಿಯೆಸ್ಟ್ ಪರ್ಲ್ಸ್’ ಡೆಂಟಲ್ ಕ್ಲಿನಿಕ್ ಪ್ರಾರಂಭಿಸಿದೆ.

ಸುಮಾರು 4,500 ಚದರ ಅಡಿ ವಿಸ್ತೀರ್ಣದಲ್ಲಿ ವಿನ್ಯಾಸಗೊಳಿಸಲಾದ ಈ ಕ್ಲಿನಿಕ್, ಸುಧಾರಿತ ದಂತ ತಂತ್ರಜ್ಞಾನ, ಅನುಭವಿ ವೈದ್ಯರು ಮತ್ತು ‘ಅತಿಥಿಗಳಿಗೆ ಆದ್ಯತೆ’ ಎನ್ನುವ ತತ್ವದೊಂದಿಗೆ ಸಮಗ್ರ ಮತ್ತು ಉತ್ತಮ ಗುಣಮಟ್ಟದ ಮೌಖಿಕ ಆರೋಗ್ಯ ರಕ್ಷಣೆ ನೀಡಲಿದ್ದು, ಡಾ. ವಿಕ್ರಮ್ ಶೆಟ್ಟಿ ಅವರ ನೇತೃತ್ವ ಹಾಗೂ ಹಿರಿಯ ತಜ್ಞರಾದ ಹ್ಯಾಪಿಯೆಸ್ಟ್ ಪರ್ಲ್ಸ್ ನಿರ್ದೇಶಕ ಡಾ. ಅಚ್ಯುತ್ ಎಂ. ಬಾಳಿಗಾ ಮತ್ತು ಉಪ ನಿರ್ದೇಶಕರಾದ ಡಾ. ಸ್ಯಾಮ್ಯುಯೆಲ್ ಶಡ್ರಕ್ ಸುರೇಂದರ್ ಅವರ ಮಾರ್ಗದರ್ಶನದಲ್ಲಿ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ಇಲ್ಲಿ ಐದು ಡೆಂಟಲ್ ಚೇರ್‌ಗಳು ಮತ್ತು ಕೋನ್ ಬೀಮ್ ಕಂಪ್ಯೂಟೆಡ್ ಟೊಮೊಗ್ರಫಿ (CBCT) ಯಂತ್ರವಿದ್ದು, ಒಂದೇ ಸೂರಿನಡಿ ನಿಖರವಾದ ರೋಗನಿರ್ಣಯ ಮತ್ತು ಸಂಪೂರ್ಣ ಚಿಕಿತ್ಸೆ ಲಭ್ಯವಿವೆ.
ಈ ಕುರಿತು ಮಾತನಾಡಿದ ಹ್ಯಾಪಿಯೆಸ್ಟ್ ಪರ್ಲ್ಸ್‌ನ ಯುನಿಟ್ ಹೆಡ್ ಡಾ. ವಿಕ್ರಮ್ ಶೆಟ್ಟಿ , ಈ ಕ್ಲಿನಿಕ್‌ನಲ್ಲಿ, ಸಮಸ್ಯೆಗಳಾಗದಂತೆ ಮುನ್ನೆಚ್ಚರಿಕೆ (preventive), ಮಕ್ಕಳ ದಂತವೈದ್ಯಕೀಯ, ಹಲ್ಲು ಸರಿಪಡಿಸುವ ಮತ್ತು ಬದಲಿಸುವ ಚಿಕಿತ್ಸೆಗಳು (ರಿಸ್ಟೋರೇಟಿವ್ ಮತ್ತು ಪ್ರಾಸ್ಥೆಟಿಕ್ ಚಿಕಿತ್ಸೆಗಳು), ಅಲೈನರ್‌ಗಳು, ಆರ್ಥೋಡಾಂಟಿಕ್ ಚಿಕಿತ್ಸೆ, ಹಲ್ಲಿನ ಇಂಪ್ಲಾಂಟ್‌ಗಳು ಮತ್ತು ಬಾಯಿ ಶಸ್ತ್ರಚಿಕಿತ್ಸೆ, ಲೇಸರ್ ಚಿಕಿತ್ಸೆಗಳು ಸೇರಿದಂತೆ ಸಮಗ್ರ ಸೇವೆಗಳು ಲಭ್ಯವಿವೆ. ಇದರಿಂದ ಅತಿಥಿಗಳು ಒಂದೇ ಸ್ಥಳದಲ್ಲಿ ಎಲ್ಲ ಸೇವೆಗಳನ್ನೂ ಸುಲಭವಾಗಿ ಪಡೆಯಬಹುದು.
ಅತಿಥಿಗಳ ಕ್ಷೇಮ ಮತ್ತು ವೈದ್ಯಕೀಯ ನಿಖರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಿನನಿತ್ಯದ ತಪಾಸಣೆಯಿಂದ ಹಿಡಿದು ಸುಧಾರಿತ ಶಸ್ತ್ರಚಿಕಿತ್ಸೆಯವರೆಗೆ ಎಲ್ಲಾ ಸೇವೆಗಳನ್ನೂ ಸುಗಮವಾಗಿ ಒದಗಿಸಲು ಡಿಜಿಟಲ್ ವ್ಯವಸ್ಥೆಗಳು ಮತ್ತು ಉತ್ತಮ ಗುಣಮಟ್ಟದ ಉಪಕರಣಗಳನ್ನು ಒಳಗೊಂಡಿದೆ. ಸೋಂಕು ನಿಯಂತ್ರಣ, ಸ್ವಚ್ಛತೆ ಮತ್ತು ಅಂತರರಾಷ್ಟ್ರೀಯ ಮಾನದಂಡಗಳ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದರಿಂದ ಅತಿಥಿಗಳಿಗೆ ಸುರಕ್ಷಿತ ವಾತಾವರಣ ನಿರ್ಮಾಣವಾಗುತ್ತದೆ. ಭಾರತದ ನಗರಗಳಲ್ಲಿ, ವಿಶೇಷವಾಗಿ ವೈಟ್‌ಫೀಲ್ಡ್‌ನಂತಹ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಮೌಖಿಕ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಮತ್ತು ಉತ್ತಮ ದಂತ ಸೇವೆಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಲಿನಿಕ್ ಆರಂಭಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಅಶೋಕ್ ಸೂಟಾ ಮಾತನಾಡಿ, “ನಾವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಆರೈಕೆಯನ್ನು ಒಟ್ಟುಗೂಡಿಸುವ ವಿಶ್ವಾಸಾರ್ಹ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಎರಡನೇ ಡೆಂಟಲ್ ಕ್ಲಿನಿಕ್ ಪ್ರಾರಂಭವು ಹೆಚ್ಚು ಜನರಿಗೆ ವಿಶ್ವದರ್ಜೆಯ ಆರೈಕೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಪ್ರಮುಖ ಹೆಜ್ಜೆಯಾಗಿದೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *