IMG 20260416 WA0012

ಪಾವಗಡ : ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ….!

DISTRICT NEWS ತುಮಕೂರು

ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ: ವಕೀಲ ರಮೇಶ್ ಆರೋಪ.

ಪಾವಗಡ : ತಾಲ್ಲೂಕಿನ ಜನತೆಗಾಗಿ ದೊಡ್ಡಮಟ್ಟದ

ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ: ವಕೀಲ ರಮೇಶ್ ಆರೋಪ.

ಪಾವಗಡ : ತಾಲ್ಲೂಕಿನ ಜನತೆಗಾಗಿ
ದೊಡ್ಡಮಟ್ಟದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆ ಇದ್ದರೂ ಜನತೆಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಹೋಗಬೇಕಾಗಿದೆ ಎಂದು ಅಟ್ರಾಸಿಟಿ ಕಮಿಟಿಯ ಸದಸ್ಯ ಹಾಗೂ ವಕೀಲರಾದ ರಮೇಶ್ ಆರೋಪಿಸಿದ್ದಾರೆ.

ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ಮಂಗಳವಾರ ಕರ್ನಾಟಕ ಮಾದರ ಮಹಾಸಭಾ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವಿ ವೈ ರವರಿಗೆ ಮನವಿ ಪತ್ರ ಸಲ್ಲಿಸಿ ವಕೀಲ ರಮೇಶ್ ಮಾತನಾಡಿ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೂಲ ಸೌಕರ್ಯವಿಲ್ಲದೆ ಬಳಲುತ್ತಿದ್ದು ಕನಿಷ್ಠ ಔಷಧಿಗಳು ಇಲ್ಲದಾಗಿದೆ. ಎಂದು ಆರಂಭಿಸಿದರು.

ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇರುವುದಿಲ್ಲ. ಆಸ್ಪತ್ರೆಯಲ್ಲಿ ಕಲುಷಿತ ನೀರು ಕುಡಿದು ಅನೇಕ ರೋಗಿಗಳು ಅಸ್ವಸ್ತಗೊಂಡ ಉದಾರಣೆಗಳಿವೆ ಎಂದರು.

ಮೂಲ ಔಷಧಿ ಇಲ್ಲದೆ ಗರ್ಭನಿರೋಧಕ ಶಸ್ತ್ರ ಚಿಕಿತ್ಸಾ ಶಿಬಿರಗಳು ರದ್ದಾಗಿರುವ ನಿದರ್ಶನವಿದೆ ಎಂದರು.
ಬಿಸಿಲಿನ ಬೇಗೆಯಲ್ಲಿ ಬಳಲುತ್ತಿರುವ ಪಾವಗಡ ಬಡಜನರಿಗೆ ಆಸ್ಪತ್ರೆಯ ಆಡಳಿತವು ಶಾಪವಾಗಿ ಪರಿಣಮಿಸಿದೆ. ಹೀಗೆ ಹಲವು ತಿಂಗಳಿನಿಂದ ಅವ್ಯವಸ್ಥೆ ಇನ್ನು ಅನೇಕ ಸಾರ್ವಜನಿಕರು ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು ರವರನ್ನು ಪ್ರಶ್ನಿಸಿದರೆ, ಸರ್ಕಾರದಿಂದ ಔಷಧಿ ಸರಬರಾಜಾಗುತ್ತಿಲ್ಲವೆಂಬ ಉತ್ತರ ನೀಡುತ್ತಾರೆ. ಹಾಗಾದರೆ ಆಸ್ಪತ್ರೆಯಲ್ಲಿ ಸಂಗ್ರಹವಾಗುತ್ತಿರುವ ABARK, ARS ಹಣ ಏನಾಗುತ್ತಿದೆ ಎಂಬುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿರುವ ಜನರೆ ಹೆಚ್ಚು ಇರುವ ಪಾವಗಡ ತಾಲ್ಲೂಕಿನ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚಾಗಿರುತ್ತದೆ ಎಂದರು.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಬಡ ರೋಗಿಗಳಿಗೆ ಅಗತ್ಯವಾದ ಔಷಧಿಗಳು, ಇಂಜೆಕ್ಷನ್ ಗಳನ್ನು ಆಸ್ಪತ್ರೆಯಲ್ಲಿ ನೀಡುವಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾದರ ಮಹಾಸಭಾ ಅಧ್ಯಕ್ಷ ನರಸಿಂಹಪ್ಪ, ಕೃಷ್ಣಾಪುರ ರಾಮಕೃಷ್ಣ, ಓಬಳೇಶ್, ಮಂಜುನಾಥ್, ನರಸಿಂಹಪ್ಪ, ಕನ್ನಮೆಡಿ ಕೃಷ್ಣಮೂರ್ತಿ, ನಾಗೇಶ್, ಮಂಜುನಾಥ್, ಮುರಳಿ,
ಪ್ರಕಾಶ್, ನಾಗಭೂಷಣ, ನರಸಿಂಹಪ್ಪ, ಗೋಪಾಲ್ ಮಲ್ಲಿಕಾರ್ಜುನ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು

ಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆ ಇದ್ದರೂ ಜನತೆಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಹೋಗಬೇಕಾಗಿದೆ ಎಂದು ಅಟ್ರಾಸಿಟಿ ಕಮಿಟಿಯ ಸದಸ್ಯ ಹಾಗೂ ವಕೀಲರಾದ ರಮೇಶ್ ಆರೋಪಿಸಿದ್ದಾರೆ.

ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ಮಂಗಳವಾರ ಕರ್ನಾಟಕ ಮಾದರ ಮಹಾಸಭಾ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವಿ ವೈ ರವರಿಗೆ ಮನವಿ ಪತ್ರ ಸಲ್ಲಿಸಿ ವಕೀಲ ರಮೇಶ್ ಮಾತನಾಡಿ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೂಲ ಸೌಕರ್ಯವಿಲ್ಲದೆ ಬಳಲುತ್ತಿದ್ದು ಕನಿಷ್ಠ ಔಷಧಿಗಳು ಇಲ್ಲದಾಗಿದೆ. ಎಂದು ಆರಂಭಿಸಿದರು.

ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇರುವುದಿಲ್ಲ. ಆಸ್ಪತ್ರೆಯಲ್ಲಿ ಕಲುಷಿತ ನೀರು ಕುಡಿದು ಅನೇಕ ರೋಗಿಗಳು ಅಸ್ವಸ್ತಗೊಂಡ ಉದಾರಣೆಗಳಿವೆ ಎಂದರು.

ಮೂಲ ಔಷಧಿ ಇಲ್ಲದೆ ಗರ್ಭನಿರೋಧಕ ಶಸ್ತ್ರ ಚಿಕಿತ್ಸಾ ಶಿಬಿರಗಳು ರದ್ದಾಗಿರುವ ನಿದರ್ಶನವಿದೆ ಎಂದರು.
ಬಿಸಿಲಿನ ಬೇಗೆಯಲ್ಲಿ ಬಳಲುತ್ತಿರುವ ಪಾವಗಡ ಬಡಜನರಿಗೆ ಆಸ್ಪತ್ರೆಯ ಆಡಳಿತವು ಶಾಪವಾಗಿ ಪರಿಣಮಿಸಿದೆ. ಹೀಗೆ ಹಲವು ತಿಂಗಳಿನಿಂದ ಅವ್ಯವಸ್ಥೆ ಇನ್ನು ಅನೇಕ ಸಾರ್ವಜನಿಕರು ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು ರವರನ್ನು ಪ್ರಶ್ನಿಸಿದರೆ, ಸರ್ಕಾರದಿಂದ ಔಷಧಿ ಸರಬರಾಜಾಗುತ್ತಿಲ್ಲವೆಂಬ ಉತ್ತರ ನೀಡುತ್ತಾರೆ. ಹಾಗಾದರೆ ಆಸ್ಪತ್ರೆಯಲ್ಲಿ ಸಂಗ್ರಹವಾಗುತ್ತಿರುವ ABARK, ARS ಹಣ ಏನಾಗುತ್ತಿದೆ ಎಂಬುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿರುವ ಜನರೆ ಹೆಚ್ಚು ಇರುವ ಪಾವಗಡ ತಾಲ್ಲೂಕಿನ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚಾಗಿರುತ್ತದೆ ಎಂದರು.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಬಡ ರೋಗಿಗಳಿಗೆ ಅಗತ್ಯವಾದ ಔಷಧಿಗಳು, ಇಂಜೆಕ್ಷನ್ ಗಳನ್ನು ಆಸ್ಪತ್ರೆಯಲ್ಲಿ ನೀಡುವಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾದರ ಮಹಾಸಭಾ ಅಧ್ಯಕ್ಷ ನರಸಿಂಹಪ್ಪ, ಕೃಷ್ಣಾಪುರ ರಾಮಕೃಷ್ಣ, ಓಬಳೇಶ್, ಮಂಜುನಾಥ್, ನರಸಿಂಹಪ್ಪ, ಕನ್ನಮೆಡಿ ಕೃಷ್ಣಮೂರ್ತಿ, ನಾಗೇಶ್, ಮಂಜುನಾಥ್, ಮುರಳಿ,
ಪ್ರಕಾಶ್, ನಾಗಭೂಷಣ, ನರಸಿಂಹಪ್ಪ, ಗೋಪಾಲ್ ಮಲ್ಲಿಕಾರ್ಜುನ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *