ಸಾರ್ವಜನಿಕರ ದೂರುಗಳನ್ನು ಆಲಿಸಿದ ಲೋಕಾಯುಕ್ತ ಎಸ್ ಪಿ ಲಕ್ಷ್ಮಿ ನಾರಾಯಣ
ಪಾವಗಡ: ಅಧಿಕಾರಿಗಳು ವಿನಾಕಾರಣ ಸಾರ್ವಜನಿಕರಿಗೆ ಕೆಲಸಗಳನ್ನು ಮಾಡಿಕೊಡದೆ ಅಲೆಸಬಾರದೆಂದು ಲೋಕಾಯುಕ್ತ ಎಸ್ ಪಿ ಲಕ್ಷ್ಮಿ ನಾರಾಯಣ ತಿಳಿಸಿದರು.
ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಬುಧವಾರ ತುಮಕೂರು ಲೋಕಾಯುಕ್ತ ಅಧಿಕಾರಿಗಳಿಂದ ಏರ್ಪಡಿಸಿದ್ದ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲವೆಂದು, ಹಕ್ಕು ಪತ್ರ ಖಾತೆಗೆ ಸಂಬಂಧಿಸಿದಂತೆ ಕೆಲಸಗಳನ್ನು ಮಾಡಿಕೊಡಲು ವಿನಾಕಾರಣ ಅಲೆಸಲಾಗುತ್ತದೆ ಎಂದು ಸಾರ್ವಜನಿಕರಿಂದ ದೂರನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು.
ಅದೇ ರೀತಿ ಸರ್ವೆ ಇಲಾಖೆಯಲ್ಲಿ ಶುಲ್ಕ ಪಾವತಿ ಮಾಡಿಸಿಕೊಂಡರು ತಿಂಗಳಗಟ್ಟಲೆ ಕೆಲಸ ಮಾಡಿಕೊಡದೆ ಅಲೆಸುತ್ತಾರೆ ಎಂಬುದರ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ ಎಂದರು.
ಲೋಕಾಯುಕ್ತಾ ಎಸ್ಪಿ ಲಕ್ಷ್ಮೀನಾರಾಯಣ್ ಪ್ರತಿಕ್ರಿಯಿಸಿ, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸಬೇಕು. ಕೆಲಸ ಮಾಡಿಕೊಡಲು ಸಾಧ್ಯವಾಗದಿದ್ದರೆ ಹಿಂಬರಹ ನೀಡಿ ನ್ಯಾಯಾಲಯ, ಇತರೆ ಪ್ರಾಧಿಕಾರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ಲೋಕಾಯುಕ್ತ ಜನರ ಸಮಸ್ಯೆಗೆ ಸ್ಪಂದಿಸಿ , ಸಮಸ್ಯೆಗೆ ಪರಿಹಾರ ನೀಡಲು, ಹಾಗೂ ಉತ್ತಮ ಆಡಳಿತ ನಡೆಸಲು ನೆರವಾಗುವ ಸಂಸ್ಥೆ ಎಂದರು.
ತಹಶೀಲ್ದಾರ್ ಕಛೇರಿಗೆ ಸಂಬಂಧಿಸಿದ 05
ಪೊಲೀಸ್, 04 ತಾಲ್ಲೂಕು ಪಂಚಾಯಿತಿ 11
ಎ.ಡಿಎಲ್.ಅರ್. 01 ಪುರಸಭೆಗೆ 03
ಅಬಕಾರಿ 01 ತುಮಕೂರು ವಾಲ್ಮೀಕಿ ಸಂಘ 01 ಒಟ್ಟು 25 ಅರ್ಜಿಗಳನ್ನು ವಿವಿದ ಇಲಾಖೆಗಳ ವಿರುದ್ದ ದೂರನ್ನು ಪಡೆದುಕೊಳ್ಳಲಾಯಿತು.
ಈ ವೇಳೆ ಡಿವೈಎಸ್ಪಿ ರಾಮಕೃಷ್ಣ ಹಾಗೂ ಇನ್ಸ್ಪೆಕ್ಟರ್ ಮಹಮದ್ ಸಲೀಂ, ಶಿವರುದ್ರಪ್ಪ ಪೊಲೀಸ್ ನಿರೀಕ್ಷಕರು .
ಎಸ್. ಐ ಸುರೇಶ್ ತಹಶಿಲ್ದಾರ್ ವರದರಾಜು, ಇ.ಒ ಜಾನಕೀರಾಮ್, ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಪ್, ಸಿ.ಪಿ.ಐ ಸುರೇಶ್, ಗಿರೀಶ್, ಬಿ.ಇಒ ಇಂದ್ರಾಣಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಅರ್.ಐ ನಾರಯಣ್ ಗೌಡ, ಪಿ.ಡ್ಬೂಡಿ ಎಇಇ ಅನಿಲ್ ಕುಮಾರ್, ಸಿ.ಡಿ.ಪಿಒ ಸುನಿತಾ, ಕೃಷಿ ಅಧಿಕಾರಿ ಅಜಯ್ ಕುಮಾರ್ ಸೇರಿದಂತೆ ತಾಲ್ಲುಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.