IMG 20211011 WA0005

ಪಾವಗಡ: ಪುಟ್ಟ ಕಂದಮ್ಮಲ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ*.

DISTRICT NEWS ತುಮಕೂರು

*ಪುಟ್ಟ ಕಂದಮ್ಮಲ ಹೃದಯ ಶಸ್ತ್ರ ಚಿಕಿತ್ಸೆಗೆ ಹೆಲ್ಪ್ ಸೊಸೈಟಿ ಸಹಾಯ ಹಸ್ತ*.
ಪಾವಗಡ. ಅ 10 ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಕಂದಮ್ಮಲ ನೆರವಿಗೆ ಧಾವಿಸಿ ಎಂದು ಸಂಘ ಸಂಸ್ಥೆಗಳ ಮನವಿ ಹಾಗೂ ಮನಕಲುಕುವ ವರದಿ ಪ್ರಸಾರದ ಹಿನ್ನಲೆಯಲ್ಲಿ ಇಂದು ಸಮಾಜ ಸೇವಕರು, ಸಾವಿರಾರು ಜನರ ಕಷ್ಟಗಳಿಗೆ ನೆರವಿನ ಮಹಾಪೂರವೆ ಹರಿಸುತ್ತಿರುವ ಹೃದಯವಂತ *ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್* ರವರು ಹೊಸ ಬಸ್ ನಿಲ್ದಾಣದಲ್ಲಿ ಸಂಘ ಸಂಸ್ಥೆಗಳ ಉಪಸ್ಥಿತಿಯಲ್ಲಿ ಕಂದಮ್ಮಲ ಪೋಷಕರಿಗೆ 10000 ₹(ಹತ್ತು ಸಾವಿರ) ರೂಪಾಯಿಗಳನ್ನು ನೀಡಿ ಮಾನವೀಯತೆಗೆ ಮುನ್ನಡಿ ಬರೆದು ಸಾಕ್ಷಿಯಾದರು.
ಪಾವಗಡ ತಾಲ್ಲೂಕಿನ ನೀಲಮ್ಮನಹಳ್ಳಿಯ ಶಶಿಕಲಾ ಎಂಬ 6 ವರ್ಷದ ಕಂದಮ್ಮಲಿಗೆ ಹೃದಯ ಸಂಬಂಧಿತ ಹಾಗೂ ಶ್ವಾಸ ಕೋಶ ಕಾಯಿಲೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಗಾಗಿ ಹಣಕಾಸಿನ ಸಮಸ್ಯೆ ಬಗ್ಗೆ ಸಂಘ ಸಂಸ್ಥೆಗಳಲ್ಲಿ ವಿನಂತಿ ಮಾಡಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆರವು ಎಂಬ ವರದಿ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ಪಟ್ಟಣದ ಸಹೃದಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದ ಎಲ್ಲಾ ಕಚೇರಿ, ಅಂಗಡಿ ಮಾಲೀಕರಲ್ಲಿ, ಬೀದಿ ಬದಿ ವ್ಯಾಪಾರಿಗಲ್ಲಿ,ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದನ್ನು ಸ್ಮರಿಸಬಹುದಾಗಿದೆ.

*ದೇಣಿಗೆ ಹಣ ಪೋಷಕರಿಗೆ ಹಸ್ತಾಂತರ* :
ಪಟ್ಟಣದ ಸಹೃದಯ ಜೀವಿಗಳು ಸಂಗ್ರಹಿಸಿದ್ದ ಒಟ್ಟು 84000 ₹ ರೂಗಳ ದೇಣಿಗೆ ಹಣವನ್ನು ಇಂದು ಪುಟ್ಟ ಕಂದಮ್ಮಲ ಪೋಷಕರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘದ ಅಧ್ಯಕ್ಷ ಗೋವರ್ಧನ್, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಬೀದಿ ಬದಿ ವ್ಯಾಪಾರಿಗಳ ಮಹಿಳಾ ಅಧ್ಯಕ್ಷ ಶಶಿಕಲಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಗೋಪಾಲ, ನರಸಿಂಹ ಮೂರ್ತಿ ಮಾರುತಿ ಕ್ಲಿನಿಕ್ ನಾಗೇಂದ್ರ, ಗೋಬಿ ರವಿ, ಕಾಳೆ ರಂಗ , ನ್ಯೂಸ್ ಫಸ್ಟ್ ಅನಿಲ್, ಸಾಯಿ,. ರಮೇಶ್ ಹಾಗೂ ಜಯಕರ್ನಾಟಕ ಸಂಘದ ಪದಾಧಿಕಾರಿಗಳು, ಕ ರ.ವೆ ಪದಾಧಿಕಾರಿಗಳು, ಬೀದಿ ಬದಿ ಸಂಘದ ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವರದಿ: ಶ್ರೀನಿವಾಸುಲು