ಆನೇಕಲ್: ಬಿದರಗುಪ್ಪೆ ಗ್ರಾಮಪಂಚಾಯತಿ ವ್ಯಾಪ್ತಿಯ ಎಂಟು ಹಳ್ಳಿಗಳ ಜನರ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಸಾಯಿ ಆಸ್ಪತ್ರೆ, ಬೆಂಗಳೂರು ಡೈರಿ ಸಹಯೋಗದೊಂದಿಗೆ ಬಿದರಗುಪ್ಪೆ ಗ್ರಾಮ ಪಂಚಾಯತಿ ಆಯೋಜಿಸಿತ್ತು.
ಗ್ರಾಮ ಪಂಚಾಯತಿ ವ್ಯಪ್ತಿಯ ಜನರು ಬಂದು ಆರೋಗ್ಯ ತಪಾಸಣೆ ಕೈಗೊಂಡರು.ಶಿಬಿರದಲ್ಲಿ ಪಾಲ್ಗೊಂಡಿದ್ದ ಬಮುಲ್ ಅಂಜಿನಪ್ಪನರು ಕೊವಿಡ್ ಸಂಕಷ್ಟ ಸಮಯದಲ್ಲಿ ಆರೋಗ್ಯ ತಪಾಸಣೆ ಬಹಳ ಮುಖ್ಯ ಎಂದರು. ಗ್ರಾಮಪಂಚಾಯತಿ ಸದಾ ಜನೋಪಯೋಗಿ ಕೆಲಸ ಮಾಡುತ್ತಿದೆ. ಹಿಂದೆ ಎಂದೂ ಕಾಣದ ಅಭಿವೃದ್ಧಿ ಯನ್ನು ಪಂಚಾಯತಿ ವ್ಯಾಪ್ತಿಯಲ್ಲಿ ಕಾಣುತ್ತಿದ್ದೇವೆ ಎಂದು ತಿಳಿಸಿದರು.
ಪಂಚಾಯತಿ ಅಧ್ಯಕ್ಷ ರಾದ ರಾಜೇಶ್ ಅವರು ಮಾತನಾಡಿ ಎಂಟು ಹಳ್ಳಿಗಳ ಜನರು ಈ ಶಿಬಿರದ ಉಪಯೋಗ ಪಡೆದು ಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಆಸ್ಪತ್ರೆ, ಹಾಗೂ ಪಂಚಾಯತಿ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು.
ಉಪಾಧ್ಯಕ್ಷ ರಾದ, ನಿರ್ಮಲಾ ರಾಮಮೂರ್ತಿ ವಿಜಯಕುಮಾರ್ ಸೂಗೂರು, ಅನುಪಮಾನಾರಾಯಣ್ , ಸರಸ್ಪತಮ್ಮ ಶ್ರೀನಿವಾಸ್.ಕೈಲಾಶ್ ,ಆನಂದ್ ಶಿಬಿರದಲ್ಲಿ ಭಾಗವಹಿಿಸಿದ್ದರು.