ಅಂಗನವಾಡಿಗಳು ಕಲಿಕೆಗೆ ಉತ್ತೇಜನ ನೀಡುವ ಕೇಂದ್ರಗಳ ಮಗನ. ಸಿ ಡಿ ಪಿ ಓ ಸುನಿತಾ ಡಿ ಜಿ
ಪಾವಗಡ: ಅಂಗನವಾಡಿ ಕೇಂದ್ರಗಳನ್ನು ಕೇವಲ ಪೋಷಣೆ ಕೇಂದ್ರಗಳಾಗುವ ಬದಲಾಗಿ ಮಕ್ಕಳಿಗೆ ಕಲಿಕೆಗೆ ಉತ್ತೇಜನ ನೀಡುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳಬೇಕೆಂದು ಸಿ ಡಿ ಪಿ ಓ ಸುನಿತಾ ಡಿ ಜಿ ತಿಳಿಸಿದ್ದಾರೆ.
ಪಟ್ಟಣದ ಗುರುಭವನದಲ್ಲಿ ಬುಧುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಂಡಿದ್ದ ಪೋಶನ್ ಭಿ ಪಡಾಯಿ ಭಿ ಯೋಜನೆಯ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪೋಶನ್ ಭಿ ಪಡಾಯಿ ಭಿ ಯೋಜನೆಯು ಭಾರತ ಸರ್ಕಾರದ ಒಂದು ಉಪಕ್ರಮವಾಗಿದ್ದು, ಇದು 6 ವರ್ಷದೊಳಗಿನ ಮಕ್ಕಳ ಪೌಷ್ಟಿಕಾಂಶದ ಜೊತೆಗೆ ಆರಂಭಿಕ ಬಾಲ್ಯದ ಶಿಕ್ಷಣ ಮತ್ತು ಆರೈಕೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು.
ಅಂಗನವಾಡಿಗಳನ್ನು ಉತ್ತಮ ಗುಣಮಟ್ಟದ ಕಲಿಕಾ ಕೇಂದ್ರಗಳಾಗಿ ಪರಿವರ್ತಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ ಎಂದರು.
ಈ ಯೋಜನೆಯು ಅಂಗನವಾಡಿ ಕಾರ್ಯಕರ್ತರ ಕೌಶಲ್ಯವನ್ನು ಹೆಚ್ಚಿಸುತ್ತದೆ ಮತ್ತು ಅಂಗನವಾಡಿಗಳಲ್ಲಿ ಆಟದ ಉಪಕರಣಗಳು, ಉತ್ತಮ ಮೂಲಸೌಕರ್ಯಗಳನ್ನು ಒದಗಿಸುತ್ತದೆ, ಜೊತೆಗೆ ಮಕ್ಕಳ ಭಾವನಾತ್ಮಕ ಮತ್ತು ಅರಿವಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಎಂದು.
ಯೋಜನೆಯ ಪ್ರಮುಖ ಉದ್ದೇಶ
ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕಾಂಶದ ಜೊತೆಗೆ ಗುಣಮಟ್ಟದ ಆರಂಭಿಕ ಶಿಕ್ಷಣವನ್ನು ಒದಗಿಸುವುದು ಎಂದರು.
ಪೌಷ್ಟಿಕಾಂಶ ಮತ್ತು ಶಿಕ್ಷಣ ಸೇವೆಗಳನ್ನು ಒದಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತರ ಸಾಮರ್ಥ್ಯವನ್ನು ಹೆಚ್ಚಿಸಲು ತರಬೇತಿ ನೀಡಲಾಗುವುದು ಎಂದರು.
ಶಾಲಾಪೂರ್ವ ಶಿಕ್ಷಣ, ಶಾಲಾ ಪೂರ್ವ ಚಟುವಟಿಕೆಗಳು ಪೌಷ್ಟಿಕಾಂಶ ಮತ್ತು ವಿಕಲಚೇತನ ಮಕ್ಕಳ ಆರೈಕೆ ಮತ್ತು ಹಾರೈಕೆದಾರರ ತರಬೇತಿಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ದಿನಗಳ ಕಾಲ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿಯರಾದ ಜಯಲಕ್ಷ್ಮಿ,ವಿಜಯಲಕ್ಷ್ಮಿ,ಭಾಗ್ಯಲಕ್ಷ್ಮಿ, ಮಮತಾ, ಆರ್ಥಿಕ ಸಾಕ್ಷರತಾ ಕೇಂದ್ರದ ಸಿಬ್ಬಂದಿ ನಾಗಲಕ್ಷ್ಮಿ ನಿವೃತ್ತ ಮೇಲ್ವಿಚಾರಕಿಯಾದ ಮಣಿ ಪೋಶನ್ ಸಂಯೋಜಕರಾದ ಮಂಜುಳಾ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಶ್ರೀನಿವಾಸಲು ಎ
