ಮತದಾನ ಜಾಗೃತಿ ಜಾಥಾ ಉದ್ದೇಶ ಶೇಕಡ 100% ಕಡ್ಡಾಯ ಮತದಾನ.
ಪಾವಗಡ : ಶೇಕಡ 100% ಮತದಾನ ವಾಗುವ ಉದ್ದೇಶದಿಂದಾಗಿ ಮಂಗಳವಾರ ತಾಲ್ಲೂಕು ಮಟ್ಟದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಜಾನಕಿ ರಾಮ್ ತಿಳಿಸಿದರು.
ಪಟ್ಟದ ಗುರುಭವನ ಆವರಣದಲ್ಲಿ ಜಿಲ್ಲಾಡಳಿತ ,ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲ್ಲೂಕು ಆಢಳಿತ,ತಾಲ್ಲೂಕು ಪಂತಾಯಿತಿ,ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಡೋಲು ಹೊಡೆಯುವ ಮೂಲಕ ತಹಶಿಲ್ದಾರ್ ಸಂತೋಷ್ ಕುಮಾರ್, ತಾ.ಪಂ ಇ.ಒ ಜಾನಕಿರಾಮ್. ಬಿ.ಇ.ಒ ಇಂದ್ರಣಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ತಾ.ಪಂ ಇ.ಒ ಜಾನಕಿರಾಮ್
ಮಾತನಾಡಿ, ಏಪ್ರಿಲ್ 24ರ ವರೆಗೆ ಸ್ವೀಪ್ ಸಮಿತಿ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುವುದೆಂದು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮನೆ ಮನೆಗೆ ಭೇಟಿ ನೀಡಿ ಮತದಾನ ಜಾಗೃತಿ ಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಕಳೆದ ಭಾರಿ ಲೋಕಸಭಾ ಚುನಾವಣೆಯಲ್ಲಿ ಶೇಕಡ 66% ಮತದಾನವಾಗಿದ್ದು.
ಈ ಭಾರಿ 100% ನಷ್ಟು ಮತದಾನ ಆಗುವಂತೆ ಮತದಾನ ಜಾಗೃತಿಯನ್ನು ಪ್ರತಿ ಗ್ರಾ.ಪಂ, ಹಳ್ಳಿ,ಹಾಗೂ ಕಡಿಮೆ ಮತದಾನವಾಗಿರುವ ಬೂತ್ ಗಳಲ್ಲಿ ಮನೆ ಮನೆಗೆ ಹೋಗುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ತಾಲ್ಲೂಕಿನಲ್ಲಿ ಒಟ್ಟು 2,07,65೦
ಪುರುಷ,10570 ಮಹಿಳಾ96569 ಹಾಗು ಬೂತ್ 241ಗಳಿದ್ದು ಅದರಲ್ಲಿ ಕಳೆದ ಬಾರಿ 17 ಬೂತ್ ಗಳಲ್ಲಿ ಕಡಿಮೆ ಮತದಾನವಾಗಿದ್ದು, ಈ ಬಾರಿ ಎಲ್ಲಾ ಬೂತ್ ಗಳಲ್ಲು ಶೇ 100% ರಷ್ಟು ಮತದಾನ ಮಾಡುವಂತೆ ಸ್ವೀಪ್ ಸಮಿತಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಂಗವಿಕಲ ಮತದಾರರಿಗೆ ಮತ್ತು ವಯೋವೃದ್ಧರಿಗೆ
ಮತದಾನ ಮಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದೆಂದರು.
ಪಟ್ಟಣದ ಶಾಲೆಯ ಮಕ್ಕಳು ಮತದಾನ ಜಾಗೃತಿ ಬಿತ್ತಿ ಚಿತ್ರಗಳನ್ನು ಹಿಡಿದು ಮೆರವಣಿಯಲ್ಲಿ ಸಾಗಿ ಮತದಾನ ಜಾಗೃತಿ ಬಗ್ಗೆ ಮತ ಚಲಾಯಿಸಿ ಸಂವಿಧಾನ ಉಳಿಸಿ, ನಿಮ್ಮ ಮತ, ನಿಮ್ಮ ಆಯ್ಕೆ, ನಿಮ್ಮ ಭವಿಶ್ಯ, ಸದೃಡ ರಾಷ್ಟ್ರವು ನಿಮ್ಮ ಮತದಿಂದ ಪ್ರಾರಂಭವಾಗುತ್ತದೆ. ಮತದಾನವು ಹಕ್ಕು ಸೌಲತ್ತಲ್ಲ. ಚುನಾವಣ ಪರ್ವ, ದೇಶದ ಪರ್ವ, ಉತ್ತಮ ನಾಳೆಗಾಗಿ ಮತ ಚಲಾಯಿಸಿ, ಘೊಷವಾಕ್ಯಗಳನ್ನು ಕೂಗಿದರು.
ನಂತರ ಮೆರವಣಿಗೆ ಶನಿಮಹಾತ್ಮ ಸರ್ಕಲ್ ಬಳಿ ವಿದ್ಯಾರ್ಥಿಗಳು ಕೈ ಕೈ ಹಿಡಿದು ಮಾನವ ಸರಪಳಿ ರಚಿಸಿ ಜಾಗೃತಿಗೊಳಿಸಿದರು ಮತದಾನ ಪ್ರತಿಜ್ಞೆಯನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು, ಮಕ್ಕಳು ಸೇರಿದಂತೆ ಪಠಿಸಿದರು
ಕಾರ್ಯಕ್ರಮದಲ್ಲಲ್ಲಿ ತಾಲ್ಲೂಕು ಪಂಚಾಯತಿ ಯೋಜನಾಧಿಕಾರಿ ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ರಂಗನಾಥ್ ಜೆಬಿ ಮತ್ತು
ತಾಲ್ಲೂಕು ಪಂಚಾಯಿತಿಯ ಸಿಬ್ಬಂದಿಗಳಾದ , ಮಜೀಜ್ ಖಾನ್. ಗಂಗಾಧರ್,ಎಂ. ವಸತಿ ಕುಮಾರ್, ಮನೋಹರ ಭಾಗವಹಿಸಿದ್ದರು.
.ಪೊಲೀಸ್ ವೃತ್ತ ನಿರೀಕ್ಷರು ಸುರೇಶ್ BEO ಇಂದ್ರಾಣಮ್ಮ ,ಪುರಸಭೆ ಮುಖ್ಯ ಆಡಳಿತಾಧಿಕಾರಿ ಶಂಶುಧ್ದೀನ್ ,AEE ಸುರೇಶ್, ಮಲ್ಲಿಕಾರ್ಜುನ, ದೈಹಿಕ ಶಿಕ್ಷಣ ದ ಪರಿವೀಕ್ಷಕ ಬಸವರಾಜು. ಸಮಾಜಕಲ್ಯಾಣ ಅಧಿಕಾರಿ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು,ತಾಲ್ಲೂಕು ಆಡಳಿ, ತಾಲ್ಲೂಕು ಪಂಚಾಯತ್ ಸಿಬ್ಬಂದಿ ಕಾರ್ಯಕರ್ತರು, NRLM ಕೃಷ್ಣಮೂರ್ತಿ, ರಮೇಶ ಬಾಬು & ಗ್ರಾಪಂ ಸಿಬ್ಬಂದಿಗಳು ವಿವಿಧ ಶಾಲಾವಿದ್ಯಾರ್ಥಿಗಳು ಹಾಜರಿದ್ದರು.
ವರದಿ. ಶ್ರೀನಿವಾಸಲು. A