ತುಮಕೂರು : – ರಾಜ್ಯದಾದ್ಯಂತ ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲವ್ಯವಸ್ಥೆಯನ್ನು ಮಾಡಿಕೊಂಡಿದ್ದು.
ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ನಕಲು ಹಾವಳಿ ಹೆಚ್ಚಾಗಿದೆ. ಖಾಸಗಿ ಶಾಲೆಗಳು ಶೇಕಡ 100% ರ ಫಲಿತಾಂಶ ಪಡೆಯಲು ಮಾಸ್ ಕಾಫಿ ಮಾಡಿಸಲು ಮುಂದಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ಸ್ಥಳೀಯ ಮಟ್ಟದಲ್ಲಿ ಈ ವಿಷಯ ಚರ್ಚಿತ ಅಂಶವಾಗಿದೆ. ಖಾಸಗಿ ಶಾಲೆಗಳ ಈ ಆಟಗಳಿಗೆ ಸ್ಥಳಿಯ BEO ಮತ್ತು DDPI ಸಾಥ್ ನೀಡುತ್ತಾರಂತೆ.
ಶಾಲಾ ಮುಖ್ಯು ಉಪಾಧ್ಯಾಯರ ಮೀಟಿಂಗ್ ಗಳಲ್ಲಿ ಇವರು ಹೇಳುವುದು ಒಂದೇ ಅಂಶವಂತೆ ಮಾಧ್ಯಮ ಗಳಲ್ಲಿ ಸುದ್ದಿ ಯಾಗದಂತೆ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಿ. ಎನ್ನುತ್ತಾರೆಯೆ ಹೊರತು, ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಎಂಬ ಮಾತುಗಳನ್ನು ಹೇಳುವುದಿಲ್ಲ ವಂತೆ. ಇಂತಹ ವ್ಯವಸ್ಥೆ ಯಲ್ಲಿ ಇಂದು SSLC ಪರೀಕ್ಷೆಗಳು ನಡೆಯುತ್ತಿವೆ.
ಸದ್ಯ ನಕಲು ಹಾವಳಿ ಹೆಚ್ಚಾಗಿದ್ದು, ಕಳೆದ ವರ್ಷ ಕೆಲ ಜಿಲ್ಲೆಗಳಲ್ಲಿ ಪರೀಕ್ಷೆ ನಕಲು ಮಾಡಿಸಿ ಕೆಲ ಶಿಕ್ಷಕರು ಸಸ್ಪೆಂಡ್ ಆಗಿದ್ದು ಕೆಲವು ದಿನ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ಹಿನ್ನಲೆ ನಕಲನ್ನು ತಡೆಯುವ ಉದ್ದೇಶದಿಂದ ಪರೀಕ್ಷೆಯನ್ನು ಸುಸೂತ್ರವಾಗಿ, ಪಾರದರ್ಶಕವಾಗಿ ನಡೆಸಲು ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ವೆಬ್ ಕ್ಯಾಸ್ಟ್ ಪದ್ಧತಿ ಅಳವಡಿಸಿಕೊಳ್ಳಲು ಆದೇಶ ಹೊರಡಿಸಿದೆ. ಪ್ರಸ್ತುತ PUC ಪರೀಕ್ಷೆಗಳು ಈ ಪದ್ದತಿ ಯಲ್ಲಿ ನಡೆಯುತ್ತಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ, ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಪರಿಷತ್ತಿನ ಸದಸ್ಯರಾದ ವೈ ಎ ನಾರಾಯಣಸ್ವಾಮಿ ಅವರು ಗುರುವಾರ ತುಮಕೂರಿನಲ್ಲಿ ಸುದ್ದಿಗೋಷ್ಠಿ ಕರೆದು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿಸಿ ಕ್ಯಾಮೆರಾ ಅಳವಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು ನಾರಾಯಣಸ್ವಾಮಿಯವರ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಖಾಸಗಿ ಶಾಲೆಗಳ ಲಾಬಿ ಗೆ ಇಲ್ಲಿ ಕೆಲಸ ಮಾಡಿದಂತೆ ಕಾಣುತ್ತಿದೆ. ಜವಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ಪತ್ರ ಬರೆಯುವುದು ಎಷ್ಟು ಸರಿ ಎಂಬ ಚರ್ಚೆ ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುತ್ತಿದೆ.
ವಿಧಾನಪರಿಷತ್ತಿನ ಚುನಾವಣೆ ಹತ್ತಿರವಿರುವಾಗ ಶಿಕ್ಷಕರನ್ನು ಓಲೈಸುವ ಉದ್ದೇಶದಿಂದಾಗಿ ಇಲಾಖೆಯ ಆದೇಶವನ್ನು ವಿರೋಧಿಸಿರುವುದು ಹಾಗೂ ಸರ್ಕಾರ ಆದೇಶ ತಡೆ ಹಿಡಿಯುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ನೀಡಿರುವುದು ಎಷ್ಟು ಸರಿ.