IMG 20240322 WA0017

ಪಾವಗಡ : ಡಾಕ್ಟರ್ ಸುಧಾ ಮೂರ್ತಿ ಮಹಿಳೆಯರಿಗೆಲ್ಲಾ ಆದರ್ಶ….!

DISTRICT NEWS ತುಮಕೂರು

ಡಾಕ್ಟರ್ ಸುಧಾ ಮೂರ್ತಿ ಮಹಿಳೆಯರಿಗೆಲ್ಲಾ ಆದರ್ಶ.
ಸಿ.ಡಿ.ಪಿ.ಓ ಸುನಿತಾ.

ಪಾವಗಡ : ಮಹಿಳೆ ಎಂದರೆ ಕೇವಲ ಅಡುಗೆ ಮನೆಗೆ ಸೀಮಿತವಲ್ಲ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆಂದು. ಸಿ.ಡಿ.ಪಿ.ಓ ಸುನಿತಾ. ತಿಳಿಸಿದ್ದಾರೆ.

ಪಟ್ಟಣದ ತುಮಕೂರು ರಸ್ತೆಯಲ್ಲಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಶಿಶು ಅಭಿವೃದ್ಧಿ ಇಲಾಖೆವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಹಿಳೆ ರಾಷ್ಟ್ರೀಯ ಶಕ್ತಿ ಎಂದು ನಿರೂಪಿಸಿ, ಸುಧಾ ಮೂರ್ತಿ ಅವರಂತೆ ಉನ್ನತ ಮಟ್ಟಕ್ಕೆ ಬೆಳೆದು ಅನೇಕ ಜನರಿಗೆ ಉದ್ಯೋಗ ಕಲ್ಪಿಸುವಂಥವರಾಗಬೇಕು, ಅದೇ ರೀತಿ ಅನೇಕ ಮಕ್ಕಳನ್ನ ದತ್ತು ಪಡೆದುಕೊಂಡು ಅವರನ್ನು ಪೋಷಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಅವರನ್ನ ತಾವೆಲ್ಲರೂ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ದೇಶಿಸಿ, ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸತ್ಯ ಲೋಕೇಶ್ ಮಾತನಾಡಿ ಹೆಣ್ಣೊಂದು ಕಲಿತರೆ ಶಾಲೆ ಎಂದು ತೆರದಂತೆ. ಹೆಣ್ಣು ಶಿಕ್ಷಣವನ್ನು ಪಡೆದುಕೊಂಡರೆ ಇಡೀ ಕುಟುಂಬವನ್ನೇ ನಿಭಾಯಿಸುತ್ತಾಳೆ. ಇಂದು ಮಹಿಳೆಯರು ಈ ಎಲ್ಲಾ ರಂಗಗಳಲ್ಲೂ ಮೇಲುಗೈಯನ್ನು ಸಾಧಿಸುತ್ತಿದ್ದಾರೆ. ಮಹಿಳೆಯರಿಗಾಗಿ ಮೀಸಲಿರುವ ಮಹಿಳಾ ದಿನಾಚರಣೆಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎ.ಸಿ.ಡಿ.ಪಿ ರಕೀಬುಲ್ಲಾ. ರೊಪ್ಪ ಗ್ರಾಮ ಪಂಚಾಯಿತಿಯ ಪಿ.ಡಿ.ಓ ವಿಜಯ್ ಕುಮಾರ್, ಮೇಲ್ವಿಚಾರಕರಾದ ಜಯಲಕ್ಷ್ಮಿ, ವಿಜಯಲಕ್ಷ್ಮಿ, ಸುಧಾ, ಭಾಗ್ಯಮ್ಮ, ಮಮತಾ, ಪೋಷಣ್ ಅಭಿಯಾನದ ಮಂಜುಳಾ, ವೇಣು, ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಕೋಟೆ ಪ್ರಭಾಕರ್, ಅಕ್ಷಯ್, ಅಂಗನವಾಡಿ ಸಂಘಟನೆಯ ಅಧ್ಯಕ್ಷರಾದ ಸುಶೀಲಮ್ಮ, ಪ್ರದಾನ ಕಾರ್ಯದರ್ಶಿ ಶಿವಗಂಗಮ್ಮ, ಉಪಾಧ್ಯಕ್ಷ ರಮೀಜ, ಗುಲ್ಜಾರ್, ಸೇರದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಚೇರಿಯ ಸಿಬ್ಬಂದಿ ಹಾಜರಿದ್ದರು

ವರದಿ. ಶ್ರೀನಿವಾಸಲು. A