ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೇಂದ್ರ ವಲಯ ಅಪಾರ ಪೊಲೀಸ್ ಅಧೀಕ್ಷಕರು ಎಂ.ಎಲ್ ಪುರುಷೋತ್ತಮ್ ರವರ ಅಧ್ಯಕ್ಷತೆಯಲ್ಲಿ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಫಸ್ಟ್ ಸ್ಟೆಪ್ಸ್ ಬೇಬಿ ವೇರ್ ಗಾರ್ಮೆಂಟ್ಸ್ ಕಾರ್ಮಿಕರಿಗೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳ ಬಗ್ಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಮಹಿಳೆಯರ ಸುರಕ್ಷ ತೆ ಹಾಗೂ ರಕ್ಷ ಣೆಗಾಗಿ ಹಲವಾರು ಕಾನೂನುಗಳಿದ್ದು ಇವುಗಳ ಸದುಪಯೋಗ ಪಡೆದುಕೊಳ್ಳುವ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗ ಬೇಕಿದೆ.
ಮಹಿಳಾ ರಕ್ಷಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷವಾ,ಗಿ ಮಹಿಳೆಯರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದೆ
ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಕಾನೂನು ಸಲಹೆ ನೀಡಲಾಗುತ್ತಿದೆ. ಕಾನೂನಿನ ಸಲಹೆ ಅವಶ್ಯಕತೆ ಇರುವವರು ಉಚಿತ ಕಾನೂನು ನೆರವು ಪಡೆದುಕೊಳ್ಳುವ ಮೂಲಕ ಮಹಿಳೆಯರು ತಮ್ಮ ಸುರಕ್ಷ ತೆಯನ್ನು ಪಡೆದುಕೋಳ್ಳಬೇಕಾಗಿದೆ ಎಂದು ಅತ್ತಿಬೆಲೆ ಠಾಣೆಯ ಇನ್ಸ್ ಪೆಕ್ಟರ್ ವಿಶ್ವನಾಥ್ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅನೇಕ ದೌರ್ಜನ್ಯ ಹಾಗೂ ಅನ್ಯಾಯಗಳು ನಡೆಯುತ್ತಿದ್ದರೂ ಯಾರೊಬ್ಬರು ಧ್ವನಿ ಎತ್ತದ ಕಾರಣ ವರದಿಯಾಗುತ್ತಿಲ್ಲ.
ಅಲ್ಲೊಂದು ಇಲ್ಲೊಂದೂ ಘಟನೆಗಳು ಮಾತ್ರ ಬೆಳಕಿಗೆ ಬರುತ್ತಿವೆ. ಮಹಿಳೆಯರಿಗೆ ಅನ್ಯಾಯವಾದಾಗ ಪ್ರತಿಭಟಿಸುವಂತ ಮತ್ತು ಸಮೀಪದ ಪೊಲೀಸ್ ಠಾಣೆಗೆ ಬಂದು ತಿಳಿಸುವಂತ ಕಾರ್ಯವನ್ನು ಮಹಿಳೆಯರು ಮಾಡಬೇಕು.ಎಂದರು.
ಮಹಿಳೆಯರ ರಕ್ಷ ಣೆಗಾಗಿ ಪೋಲಿಸರು ಸರ್ಪಕಾವಲಿನಂತೆ ದಿನನಿತ್ಯ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಕೆಲಸ ಮಾಡುವ ಕಾರ್ಖಾನೆಗಳ ಮುಂಭಾಗದಲ್ಲಿ ಮಹಿಳಾ ಸಹಾಯವಾಣಿ ಪೊಲೀಸ್ ಠಾಣೆ ನಂಬರ್ ಗಳನ್ನು ಕೂಡಲೇ ಹಾಕಬೇಕು. ಮಹಿಳೆ ನನ್ನ ಕುಟುಂಬ ಚೆನ್ನಾಗಿ ಬದುಕಬೇಕು ಎಂದು ಛಲ ತೊಟ್ಟರೆ ಬದಲಾಯಿಸುವ ಶಕ್ತಿ ಮಹಿಳೆಗಿದೆ ಕುಟುಂಬದ ತಪ್ಪುಗಳನ್ನು ಸರಿ ಮಾಡಿಕೊಂಡು ಹೋಗುವುದೇ ಜೀವನ ಎಂದು ತಿಳಿಸಿದರು.
ಅಪಾರ ಪೊಲೀಸ್ ಅಧೀಕ್ಷಕರು ಎಂ.ಎಲ್ ಪುರುಷೋತ್ತಮ್.
ಮಹಿಳಾ ಕಾನೂನುಅರಿವು ಕಾರ್ಯಕ್ರಮದಲ್ಲಿ ಅತ್ತಿಬೆಲೆ ಇನ್ಸ್ ಪೆಕ್ಟರ್ ಕೆ.ವಿಶ್ವನಾಥ್, ಸಬ್ ಇನ್ಸ್ ಪೆಕ್ಟರ್ ಎಲ್.ನಾರಾಯಣ್ ರಾವ್, ಪೊಲೀಸ್ ಸುರೇಶ್ ಎಂ,ಎನ್, ಮಹಿಳಾ ನಾಯಕಿ ಮಮತಾ ಯಜಮಾನ, ನಾಗರತ್ನ, ವಿಜಯ್ ಕುಮಾರಿ, ಸರಸ್ವತಿ, ಗಾರ್ಮೆಂಟ್ಸ್ ನಾ ಗ್ರೂಪ್ ಹೆಡ್ ಪ್ರಶಾಂತ್ ಜಿ.ಪಿ, ರೋಶಿತ್ ಮತ್ತು ಗಣೇಶ್ ಬಾಬು ಎಚ್ಆರ್ ಮ್ಯಾನೇಜರ್ ಉಪಸ್ಥಿತರಿದ್ದರು.:
ವರದಿ ಹರೀಶ್ ಗುರುಮೂರ್ತಿ ಆನೇಕಲ್.