IMG 20210712 WA0008

ಪಾವಗಡ.ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ‘ ಕೈ’ ಪ್ರತಿಭಟನೆ….!

DISTRICT NEWS ತುಮಕೂರು

ಪಾವಗಡ.ಪೆಟ್ರೋಲ್-ಡಿಸೇಲ್ ಬೆಲೆ ಹಾಗೂ ದಿನ ನಿತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನೆ;
ಕೆ ಪಿ ಸಿ ಸಿ ಅಧ್ಯಕ್ಷರಾದ ಡಿ_ಕೆ_ಶಿವಕುಮಾರ್ ರವರ ಹಾಗೂ ಮಾಜಿ ಡಿಸಿಎಂ ಡಾ_ಜಿ_ಪರಮೇಶ್ವರ್ ರವರ ಆದೇಶದ ಮೇರೆಗೆ ಹಾಗೂ ಪಾವಗಡ ಶಾಸಕರಾದ ವೆಂಕಟರಮಣಪ್ಪ ನವರ ಮಾರ್ಗದರ್ಶನದಲ್ಲಿ.ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಹೆಚ್_ವಿ_ವೆಂಕಟೇಶ್ ರವರ ನೇತೃತ್ವದಲ್ಲಿ, ಪಾವಗಡ ಪಟ್ಟಣದ ಶ್ರೀ ಶನಿಮಹಾತ್ಮ ಸರ್ಕಲ್ ಮುಖಾಂತರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದ ವರೆಗೆ ಎತ್ತಿನ ಗಾಡಿ ಹಾಗೂ ಸೈಕಲ್ ರಿಕ್ಷಾವನ್ನು ಏರಿ ಪ್ರತಿಭಟನೆ ನಡೆಸಿದರು ಪೆಟ್ರೋಲ್ ಮತ್ತು ಡೀಸೆಲ್ ದರ,ಅಡುಗೆ ಅನಿಲ ದರ ಅಗತ್ಯ ವಸ್ತುಗಳ ದರಗಳ ಹೆಚ್ಚಳವನ್ನು ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ, ಜನತೆಯ ಪರವಾಗಿ ಪ್ರತಿಭಟನೆ ನಡೆಸಲಾಯಿತು
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಸಂಕಷ್ಟದಲ್ಲಿ ಆಂಬುಲೆನ್ಸ್ ಗಳಿಗೂ ಪೆಟ್ರೋಲ್ ಹಾಕದ ಸ್ಥಿತಿ ನಿರ್ಮಾಣವಾಗಿದೆ ಎಂದು ವೆಂಕಟರಮಣಪ್ಪ ಮಾತನಾಡಿ ಪೆಟ್ರೊಲ್ ಡೀಸೆಲ್ ಬೆಲೆ ಹೇರಿಕೆಯಿಂದ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಹೇರಿಕೆಯಾಗುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರಕಾರದ ಕೆಟ್ಟ ನೀತಿಗಳನ್ನು ಮತ್ತು ಜನ ವಿರೋಧಿ ನೀತಿಯಿಂದ ಬಡವರು ಸಂಕಷ್ಟದಲ್ಲಿದ್ದು ಆದಷ್ಟು ಬೇಗ ಬೆಲೆ ಇಳಿಸಬೇಕೆಂದು ಆಗ್ರಹಿಸಿದರು ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡುತ್ತೇವೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಮಧ್ಯಮ, ಬಡ ವರ್ಗದವರಿಗೆ ಸಮಸ್ಯೆ ತಂದೊಡ್ಡಿದೆ. ತೈಲ ಬೆಲೆ ಏರಿಕೆ ಮಾಡುವ ಮೂಲಕ ಕೋವಿಡ್ ಸಂಕಷ್ಟದಲ್ಲಿಯೂ ಬದುಕನ್ನು ಇನ್ನಷ್ಟು ದುಸ್ತರ ಮಾಡಿದೆ. ಕಚ್ಚಾತೈಲದ ಬೆಲೆ ಇಕೆಯಾದರೂ ಟ್ಯಾಕ್ಸ್ ಹೆಚ್ಚಿಸಿ, ಅದರ ಲಾಭ ಗ್ರಾಹಕರಿಗೆ ಸಿಗದ ಹಾಗೆ ವಂಚಿಸಿದೆ’ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಹೆಚ್ ವಿ ವೆಂಕಟೇಶ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದು ಅಡುಗೆ ಅನಿಲ, ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಗಳನ್ನು ಕೂಡಲೇ ಕಡಿಮೆಗೊಳಿಸಬೇಕು ಸಿಎಂ ಯಡಿಯೂರಪ್ಪ ಅವರ ಇಡೀ ಕುಟುಂಬ ಹಗಲು ದರೋಡೆಯಲ್ಲಿ ನಿರತವಾಗಿದೆ ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿರುವ ಏಕೈಕ ಸರ್ಕಾರವೆಂದರೆ ಅದು ದೇಶದಲ್ಲಿ ಯಡಿಯೂರಪ್ಪನ ಸರ್ಕಾರವಾಗಿದೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನು ನರೇಂದ್ರಮೋದಿ ನಡೆಸುತ್ತಿಲ್ಲ ಭ್ರಷ್ಟಾಚಾರದ ವಿರುದ್ಧ ಎಂದು ಹೇಳುವ ನರೇಂದ್ರ ಮೋದಿ ರಾಜ್ಯದಲ್ಲಿ ಹಗಲು ದರೋಡೆ ನಡೆಸಿ ನಿರಂತರವಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯ ಸಚಿವರ ಹಾಗೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುವ ಭರವಸೆ ನೀಡಿದ್ದ ಬಿಜೆಪಿ, ನರಕ ದರ್ಶನದ ಮಾಡಿಸುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ತುಘಲಕ್‌ ಸರ್ಕಾರಗಳು ಜನರನ್ನು ಆಪತ್ತಿಗೆ ದೂಡುತ್ತಿವೆ ಎಂದು ಹೇಳಿದರು. ..
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಸುದೇಶ್ ಬಾಬು ಪುರಸಭಾ ಅಧ್ಯಕ್ಷರಾದ ರಾಮಾಂಜಿನಪ್ಪ ಮಾಜಿ ಪುರಸಭಾ ಅಧ್ಯಕ್ಷರಾದ ಶಂಕರ್ ರೆಡ್ಡಿ ,ಗುರ್ರಪ್ಪ, ಪುರಸಭಾ ಸದಸ್ಯರಾದ ರವಿ, ರಾಜೇಶ್ . ಸುಬ್ರಹ್ಮಣ್ಯಂ. ಮಹಮದ್ ಇಮ್ರಾನ್. ವೇಲುರಾಜ್. ವೆಂಕಟರವಣಪ್ಪ. ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುಜಿತ್,ಮಹೇಶ್ ಜಿಲ್ಲಾ ಪಂಚಾಯಿತಿ ಸದಸ್ಯ ಪಾಪಣ್ಣ. ಮುಖಂಡರಾದ ಪ್ರಮೋದ್ ಕುಮಾರ್. ,ಷಾ ಬಾಬು, ಶಂಭು. ಶ್ರೀನಿವಾಸ. ಟಾಕೀಸ್ ಗಂಗಾಧರ್. ಕನಿಕರ ಬಡೆ ಅನಿಲ್. ಅಲಿ ,ಹರೀಶ್ ಪಾಪಣ್ಣ ವಿ ಹೆಚ್ ಪಾಳ್ಯ,ಹನುಮೇಶ್,ರಾಜವಂತಿ ಮಂಜುನಾಥ್,ಕಾರ್ಯಕರ್ತರು ಸೇರಿ ಇನ್ನು ಅನೇಕ ಮುಖಂಡರುಗಳು ಭಾಗವಹಿಸಿದ್ದರು

ವರದಿ ಬುಲೆಟ್ ವೀರಸೇನಯಾದವ್.