IMG 20230515 WA0041

ಪಾವಗಡ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಹಜ…!

DISTRICT NEWS ತುಮಕೂರು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಹಜ . ಮಾಜಿ ಶಾಸಕ ತಿಮ್ಮರಾಯಪ್ಪ.

ಪಾವಗಡ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸೋಲಬಹುದು ಯಾರು ಬೇಕಾದರೂ ಗೆಲ್ಲಬಹುದು ಅದಕ್ಕೆ ಜನಗಳ ಮನ್ನಣೆ ಅತಿ ಮುಖ್ಯವೆಂದು. ಶಾಸಕ ತಿಮ್ಮರಾಯಪ್ಪ ತಿಳಿಸಿದರು.

ಸೋಮವಾರ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿರುವ ಜೆಡಿಎಸ್ ಪಕ್ಷ ಕಚೇರಿಯಲ್ಲಿ  ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜೆಡಿಎಸ್ ಪಕ್ಷ ಸೋತ ಮಾತ್ರಕ್ಕೆ, ಮುಖಂಡರು, ಕಾರ್ಯಕರ್ತರು, ಎದೆಗುಂದ ಬೇಕಿಲ್ಲ ,

ಜನರ ತೀರ್ಪಿಗೆ ನಾನು ಬದ್ಧನಾಗಿದ್ದೇನೆ ಎಂದರು.

IMG 20230515 WA0042

ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಹಾಕಿದ್ದಾರೆ, ಅವರಿಗೆ ನಾನು ಚಿರಋಣಿಯಾಗಿರುತ್ತೇನೆಂದು,  ಈಗ ಜೆಡಿಎಸ್ ಪಕ್ಷ ವಿರೋಧ ಪಕ್ಷ ಸ್ಥಾನದಲ್ಲಿ ಇರುವುದರಿಂದ 

  ಯಾರಿಗೆ ಅನ್ಯಾಯವಾದರೂ ಹೋರಾಟದ ಮೂಲಕ ನ್ಯಾಯ ಕೊಡಿಸಲಾಗುವುದು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್ ಸಿ ಅಂಜಿನಪ್ಪ, ಮಾತನಾಡಿ.

ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ  ಒಳ್ಳೆಯ ಜನಬೆಂಬಲವಿತ್ತು, ಆದರೆ ಒಂದೇ ರಾತ್ರಿಯಲ್ಲಿ ವಾಮಮಾರ್ಗದ ಮೂಲಕ ಪ್ರತಿಸ್ಪರ್ಧಿ ಗೆಲುವು ಸಾಧಿಸಿದ್ದಾರೆ.

.

 ಪಾವಗಡ ಕ್ಷೇತ್ರದಲ್ಲಿ ಜನಗಳ ಸ್ಪಂದನೆ ನೋಡಿದಾಗ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿತ್ತು. 

 ಜನಗಳ ಮನ್ನಣೆ ಗಳಿಸಿ ಶಾಸಕರಾಗಿ ಗೆದ್ದವರು ಅಭಿವೃದ್ದಿ ಕೆಲಸ ಮಾಡಬೇಕೆ ವಿನಹ ದ್ವೇಷದ ರಾಜಕಾರಣ ಮಾಡಬಾರದೆಂದು ಕಿವಿ ಮಾತನ್ನು ಹೇಳಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಆರಂಭದಿಂದಲೂ ಒಳ್ಳೆಯ ಮನ್ನಣೆ ಸಿಗುತ್ತಿತ್ತು.

ಹಣ ಬಲದ ಮೂಲಕ ಪ್ರತ್ಯರ್ಥಿ ಜಯಗಳಿಸಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ  ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ಎಸ್ ಕೆ ರೆಡ್ಡಿ, ಎನ್ ಎ ಈರಣ್ಣ, ಚನ್ನಕೇಶವರೆಡ್ಡಿ ಮಾತನಾಡಿದರು.

ಮುಖಂಡ ಗೋವಿಂದಬಾಬು, ಅಕ್ಕಲಪ್ಪ ನಾಯ್ಡು, ಜಿ ಎ ವೆಂಕಟೇಶ್, ರಾಮಾಂಜಿ, ಬ್ರಹ್ಮೇಂದ್ರ ಕುಮಾರ್, ಅಂಜನ್ ಕುಮಾರ್, ಗಂಗಾಧರ ನಾಯ್ಡು,ಶಕುಂತಲ ಬಾಯಿ, ರಂಗಮ್ಮ, ನಾಗರತ್ನಮ್ಮ, ಶಿವಕುಮಾರ್ ಉಪಸ್ಥಿತರಿದ್ದರು.