IMG 20211007 WA0041

ಪಾವಗಡ: ಭದ್ರಾ ಮೇಲ್ದಂಡೆ ಯೋಜನೆ ತಾರತಮ್ಯ ನಿವಾರಣೆಗೆ ಆಗ್ರಹ….!

DISTRICT NEWS ತುಮಕೂರು

ಭದ್ರಾ ಮೇಲ್ದಂಡೆ ಯೋಜನೆ ತಾರತಮ್ಯ ನಿವಾರಣೆಗೆ ಆಗ್ರಹ….!

ಪಾವಗಡ: – ಭದ್ರಾ ಮೇಲ್ದಂಡೆ ಯೋಜನೆಯ ನೀರು ಹಂಚಿಕೆಯಲ್ಲಿ ತಾಲ್ಲೂಕಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಬೃಹತ್ ಬೈಕ್ ರಾಲಿ ಹಾಗೂ ಸಹಿ ಸಂಗ್ರಹ ಈ ಕಾರ್ಯಕ್ರಮ ನಡೆಯಿತು

ಪ್ರತಿಭಟನೆಯಲ್ಲಿ ಪಾಲ್ಗೊಂಡು  ಮಾತನಾಡಿದ ನಿಡಿಗಲ್ ವಾಲ್ಮೀಕಿ ಸಂಸ್ಥಾನದ ಪೀಠಾಧ್ಯಕ್ಷರಾದ ಸಂಜಯ್ ಕುಮಾರ ಸ್ವಾಮೀಜಿ ಯವರು ಗಡಿ ಭಾಗವಾದ ಪಾವಗಡವನ್ನು ಎಲ್ಲಾ ಸರ್ಕಾರಗಳು ಕಡೆಗಣಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು

ಗುರುವಾರ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸಮಾಜಸೇವಕ ನೇರಳೆ ಕುಂಟೆ ನಾಗೇಂದ್ರ ಅವರ ನೇತೃತ್ವದಲ್ಲಿ ಬೃಹತ್ ಬೈಕ್ ರಾಲಿ ಹಾಗೂ ಸಹಿ ಸಂಗ್ರಹ ಕಾರ್ಯ ಮಾಡಲಾಯಿತು

ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ನಾಗೇಂದ್ರರವರು ಎತ್ತಿನಹೊಳೆ ಯೋಜನೆಯಲ್ಲಿ ಪಾವಗಡ ತಾಲ್ಲೂಕಿನ ಮೂಗಿಗೆ ತುಪ್ಪ ಸವರಿದ್ದು ಭದ್ರಾ ಮೇಲ್ದಂಡೆ ಯೋಜನೆಯ ನೀರು ಹಂಚಿಕೆಯಲ್ಲಿ ತಾಲ್ಲೂಕಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ 1ಲಕ್ಷ ಸಹಿ ಸಂಗ್ರಹ ಹಾಗೂ ಬೈಕ್ ರಾಲಿ ನಡೆಸಿದರು

IMG 20211007 WA0042

ಪಾವಗಡ ತಾಲ್ಲೂಕಿಗೆ 4ಟಿಎಂಸಿ ನೀರು ಹಂಚಿಕೆಯಾಗಿದ್ದು ಆದರೆ ಕೇವಲ 1/2 ಟಿಎಂಸಿ ನೀರು ಬಿಡುವುದಾಗಿ ಸರ್ಕಾರ ಹೇಳಿದ್ದು ಪಾವಗಡ ತಾಲ್ಲೂಕಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ .ಪಕ್ಕದ ಶಿರಾ ಹಿರಿಯೂರು ತಾಲ್ಲೂಕುಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿಬಿಡುತ್ತಿದ್ದು ಯಾವುದೇ ನದಿ ನೀರಿನ ಮೂಲವಿಲ್ಲದ ಪಾವಗಡ ತಾಲ್ಲೂಕಿಗೆ ತೀವ್ರ ಅನ್ಯಾಯವಾಗಿದೆ ಎಂದು ತಿಳಿಸಿದರು

ಬರಪೀಡಿತ ತಾಲೂಕಾದ ಪಾವಗಡಕ್ಕೆ 4ಲಕ್ಷ ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಲು ತಾಲ್ಲೂಕಿನ 4ಹೋಬಳಿಗಳಲ್ಲಿ 1ಲಕ್ಷ ಸಹಿ ಸಂಗ್ರಹ ಕಾರ್ಯ ಮಾಡಲಾಗುತ್ತಿದ್ದು ಈಗಾಗಲೇ ವೈ ಎನ್ ಹೊಸಕೋಟೆ ನಿಡಿಗಲ್ ನಾಗಲಮಡಿಕೆ ಹೋಬಳಿ ಗಳಲ್ಲಿ ಎಂಬತ್ತು ಸಾವಿರ ಸಹಿ ಸಂಗ್ರಹ ಮಾಡಿದ್ದುಉಳಿದ ಇಪ್ಪತ್ತು ಸಾವಿರ ಸಹಿಗಳನ್ನು ಇಂದಿನಿಂದ ಕಸಬಾ ಹೋಬಳಿ ವ್ಯಾಪ್ತಿಯ ವೆಂಕಟಾಪುರ ದೊಮ್ಮತಮರಿ ವಿರಪಸಮುದ್ರ ಇತ್ಯಾದಿ ಗ್ರಾಮಗಳಿಗೆ ಬೈಕ್ ರಾಲಿ ಮುಖಾಂತರ ತೆರಳಿ ಸಹಿ ಸಂಗ್ರಹಿಸುವ ಕಾರ್ಯ ಮಾಡಲಾಯಿತು

ಈ ಬಗ್ಗೆ ಸರ್ಕಾರ ಸರಿಯಾದ ರೀತಿಯಲ್ಲಿ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ತಿಳಿಸಿದರು .

ಈ ಕಾರ್ಯಕ್ರಮದ ಬಗ್ಗೆ ವಿ.ಸಿ ಚನ್ನಕೇಶವರೆಡ್ಡಿ ಮಾತನಾಡುತ್ತಾ ಪಾವಗಡ ತಾಲ್ಲೂಕಿಗೆ ಮಂಜೂರಾಗಿರುವ ನೀರನ್ನು ಹರಿಬಿಡಬೇಕು ಹಾಗೂ ರೈತರ ಹಿತವನ್ನು ಸರ್ಕಾರ ಕಾಪಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾನಂ ವೆಂಕಟಸ್ವಾಮಿ ಮಾನಂಶಶಿಕಿರಣ್ ಪೂಜಾರಪ್ಪ ದಲಿತ ಮುಖಂಡ ಎಸ್ ಹನುಮಂತರಾಯಪ್ಪ ವೆಂಕಟಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಂಜನೇಯಲು ಮತ್ತಿತರರು ಭಾಗವಹಿಸಿದ್ದರು

ವರದಿ: ಶ್ರೀನಿವಾಸುಲು