ಪಾವಗಡದ ಲೋಕೋಪಯೋಗಿ ಇಲಾಖೆಗೆ ನೂತನವಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಅನಿಲ್ ಕುಮಾರ್ ರವರು ಅಧಿಕಾರ ಸ್ವೀಕಾರ ಮಾಡಿದರು.
ಹತ್ತು ವರ್ಷಗಳ ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಅಧಿಕಾರಿ ಅನಿಲ್ ಕುಮಾರ್ ರವರು ಚಳ್ಳಕೆರೆಯಲ್ಲಿ ಎ.ಇ.ಇ ಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಪಾವಗಡದ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರ ಸ್ವೀಕರಿಸಿರುವುದು ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಎ .ಇ.ಇ ಅನಿಲ್ ಕುಮಾರ್ ರವರು ಲೋಕೋಪಯೋಗಿ ಇಲಾಖೆಯಲ್ಲಿನ ಕಾಮಗಾರಿಗಳು ಅತಿ ಗುಣಮಟ್ಟದಿಂದ ಕೂಡಿರುವಂತೆ ಎಚ್ಚರವಹಿಸುತ್ತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೇನೆ.ಇನ್ನು ಮುಂದೆಯೂ ಅದೇ ರೀತಿ ಮುಂದುವರೆಯುತ್ತೇನೆ ಎಂದರು. ರೈತರು, ಜನಸಾಮಾನ್ಯರು ರಸ್ತೆಗಳನ್ನ ಕತ್ತರಿಸುವುದಾಗಲಿ, ಅತಿಕ್ರಮಣ ಮಾಡುವುದು ಕಂಡು ಬಂದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಇಲಾಖಾಧಿಕಾರಿಗಳು, ಗುತ್ತಿಗೆದಾರರು ಮತ್ತು ಹಿತೈಷಿಗಳು ಅನಿಲ್ ಕುಮಾರ್ ರವರಿಗೆ ಶುಭಾ ಹಾರೈಸಿದರು.
ವರದಿ: ನವೀನ್ ಕಿಲಾರ್ಲಹಳ್ಳಿ*