ಪಾವಗಡ : ಮೀನು ಸಾಕಾಣಿಕೆ ಕೆರೆಗಳ ಟೆಂಡರ್ ಅವದಿಯು ಮುಗಿದಿರುವ ಕೆರೆಗಳನ್ನು ಸಾರ್ವಜನಿಕರ ಉಪಯೋಗಕ್ಕಾಗಿ ನೀಡಬೇಕು ಇಲ್ಲವೆ ಶೀಘ್ರವಾಗಿ ಮರು ಟೆಂಡರ್ ಕರೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷರಾದ ಪೂಜಾರಪ್ಪನ ಅವರ ನೇತೃತ್ವದಲ್ಲಿ ಇಲಾಖೆಯ ಪೂತಪ್ಪ ನವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷರಾದ ಪೂಜಾರಪ್ಪನವರು ಮಾತನಾಡುತ್ತಾ, ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಬ್ಯಾಡನೂರು ಗ್ರಾಮದ ಶಂಕರಲಿಂಗನ ಸ್ವಾಮಿ ಕೆರೆಯನ್ನು ಸಂಚಲಪ್ಪ ಎಂಬ ವ್ಯಕ್ತಿಗೆ ಮೀನು ಸಾಕಾಣಿಗಾಗಿ ಐದು ವರ್ಷಗಳ ಕಾಲ ಗತ್ತಿಗೆ ಅಧಾರದ ಮೇಲೆ ನೀಡಲಾಯಿತು. ಕೋವಿಡ್ -19 ವೈರಸ್ ನ ಹಿನ್ನೆಲೆಯಲ್ಲಿ ಗುತ್ತಿಗೆದಾರ ಹಿತವನ್ನು ಗಮನದಲ್ಲಿಟ್ಟುಕೊಂಡು ಎರಡು ವರ್ಷಗಳ ಕಾಲ ಹೆಚ್ಚುವರಿಯಾಗಿ ನೀಡಲಾಗಿತ್ತು. ಈಗ ಅವದಿಯು ಸಂಪೂರ್ಣವಾಗಿ ಮುಕ್ತವಾಗಿರುವುದರಿಂದ ಕೂಡಲೇ ಮೀನುಗಾರಿಕೆ ಇಲಾಖೆಯ ಹೊಸದಾಗಿ ಟೆಂಡರನ್ನು ಕರೆಯಬೇಕು ಅಲ್ಲಿಯವರೆಗೂ ಗ್ರಾಮಸ್ಥರ ವಶಕ್ಕೆ ಕೆರೆಯನ್ನು ನೀಡಬೇಕು.ಇಲ್ಲದಿದ್ದರೆ ಬ್ಯಾಡನೂರು ಗ್ರಾಮದ ಸುತ್ತಮುತ್ತಲಿನ ಸುಮಾರು 7 ಹಳ್ಳಿಗಳ ಜನರು 1- 7 – 2021 ರಂದು ಕೆರೆಯ ಹತ್ತಿರ ಸೇರಿ ಉಗ್ರ ಹೋರಾಟ ಮಾಡುವುದರೊಂದಿಗೆ ಗ್ರಾಮದ ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ ಗುರುಮೂರ್ತಿ, ರಂಗನಾಥ್, ನಾಗರಾಜ ,ತಿಪ್ಪೇಸ್ವಾಮಿ, ಓಬಳನರಸಿಂಹಪ್ಪ ,ದೇವರಾಜ್, ಬಸವರಾಜಪ್ಪ, ಪುಲಿಯಪ್ಪ ,ಬಿಎಲ್ ಅಭಿಲಾಶ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ: ಬುಲೆಟ್ ವೀರಸೇನಯಾದವ್