IMG 20210119 WA0010

ಪಾವಗಡ: ವೇಮನ ಜಯಂತಿ ಆಚರಣೆ….!

DISTRICT NEWS ತುಮಕೂರು

ಪಾವಗಡ.ಮಹಾಯೋಗಿ ವೇಮನ ಜಯಂತಿ” ತಹಶೀಲ್ದಾರ್ ಕಚೇರಿಯಲ್ಲಿ  ಆಚರಿಸಲಾಯಿತು.

ವೇಮನ ಅವರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ನಂತರ ಮಾತಾನಾಡಿ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಬೆಳ್ಳಿ ಬೆಟ್ಲು ಚಂದ್ರ ಶೇಖರ ರೆಡ್ಡಿ ಮಾತನಾಡಿ .ಕೋವಿಡ್ ವೈರಸ್‌ನಿಂದ ಲಾಕ್‌ಡೌನ್‌ ಆದೇಶದಲ್ಲಿದ್ದು, ವೇಮನ ಜಯಂತಿ ಅದ್ಧೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗದ ಕಾರಣ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸರಳವಾಗಿ ಆಚರಣೆ ಮಾಡಲಾಗಿದೆ

ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಹಾಗೂ ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿತು. ಅದೇ ರೀತಿ ರಾಜ್ಯದಲ್ಲಿ 85 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇದ್ದೇವೆ ನಮ್ಮ ರೆಡ್ಡಿ ಜನಾಂಗಕ್ಕೆ ನಿಗಮ ಮಂಡಳಿ ಸ್ಥಾಪನೆಗೆ ರಾಜ್ಯಸರ್ಕಾರ ಮುಂದಾಗಬೇಕು

ರಾಜ್ಯ ಸರ್ಕಾರ ರೆಡ್ಡಿ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ

ವೇಮನ ಅವರು ರೆಡ್ಡಿ ಸಮುದಾಯದವರಿಗೆ ಮಾತ್ರವಲ್ಲದೆ ಎಲ್ಲ ಸಮುದಾಯದ ಏಳ್ಗೆಗಾಗಿ ತಮ್ಮ ಸಾಹಿತ್ಯ ರಚನೆಯ ಮೂಲಕ ಮಹಾನ್ ಸಂದೇಶ ನೀಡಿದ್ದಾರೆ. ಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರು ಸಹ ಆದರ್ಶ ಮಹಿಳೆಯಾಗಿ ಒಂದು ಶಕ್ತಿ ರೂಪವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಈ ಇಬ್ಬರ ಜನ್ಮದಿನವನ್ನು ಹಬ್ಬವಾಗಿ ಆಚರಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ. ತಹಶೀಲ್ದಾರ್ ನಾಗರಾಜು. ಗ್ರೇಟ್ 2 ತಹಶೀಲ್ದಾರ್ ಮೂರ್ತಿ. ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ. ಆರ್.ಐ. ರಾಜ್ ಗೋಪಾಲ್. ವಿ ಎ. ರಾಜೇಶ್. ಗಿರೀಶ್. ಆರ್ ಆರ್ ಟಿ ಶಿರಸ್ತೇದಾರರು ಚಂದ್ರ ಶೇಖರ ರೆಡ್ಡಿ. ಕ್ಯಾತಗಾನ ಚೆಲ್ಲು. ಶ್ರೀಕಾಂತ್ ರೆಡ್ಡಿ. ಧನಂಜಯ ರೆಡ್ಡಿ ‌. ಮಂಜುನಾಥ್ ರೆಡ್ಡಿ. ಪುರುಷೋತ್ತಮ ರೆಡ್ಡಿ. ಶಂಕರ್ ರೆಡ್ಡಿ. ನಾರಾಯಣ ರೆಡ್ಡಿ.ರಾಮಾಂಜಿನರೆಡ್ಡಿ. ಹಾಗೂ ತಾಲ್ಲೂಕಿನ ರೆಡ್ಡಿ ಜನಾಂಗದ ಮುಖಂಡರು ಇನ್ನೂ ಮುಂತಾದವರು ಉಪಸ್ಥಿತರಿದ್ದರು