ಪಾವಗಡ: ಇಷ್ಟು ತಿಂಗಳು ಕೊರೊನಾದ ಭೀತಿಯ ನಡುವೆ ತಡವಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಈಗ ಗರಿಗೆದರಿ ಹಳ್ಳಿ ಜನರಲ್ಲಿ ನಿದ್ದೆಗೆಡಿಸಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಡಿ 22 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಗಳು ಬಲುು ಜೋರಾಗಿದೆ.
ತಾಲ್ಲೂಕಿನಾದ್ಯಂತ ಹಳ್ಳಿ ಪಾಲಿಟಿಕ್ಸ್ ನ ಜಿದ್ದಾ ಜಿದ್ದಿನಿಂದ ಕೂಡಿದೆ.ಸ್ಥಾನ ಭದ್ರತೆಗೆ ಕಾಂಗ್ರೆಸ್, ಜೆಡಿಎಸ್ , ಬಿಜೆಪಿ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಗಳ ನಡುವೆ ತಯಾರಿ ಬಲು ಜೋರಾಗಿಯೇ ನಡೆಯುತ್ತಿದೆ.
ಪಾವಗಡ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಪೈಕಿ ವೈ.ಎನ್ ಹೊಸಕೋಟೆ ಪಂಚಾಯಿತಿ ಹೊರತುಪಡಿಸಿ ಉಳಿದ 33 ಪಂಚಾಯಿತಿಗಳ ಹಳ್ಳಿ ಪಾಲಿಟಿಕ್ಸ್ನಲ್ಲಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗಳು ನಾನಾ ನೀನಾ ಎಂಬ ಸೆಣಸಾಟ ನಡೆಸಿದರೆ .. ಗ್ರಾಮ ಪಂಚಾಯತಿ ಚುನಾವಣೆ ಮೂಲಕ ಬಿಜೆಪಿ ಮುಂದಿನ ಸಾರ್ವತ್ರಿಕ ಚುನಾವಣೆಯ ಭದ್ರ ನೆಲೆಗಟ್ಟಿಗಾಗಿ ರಣ ತಂತ್ರ ರೂಪಿಸುತ್ತಿದೆ.
ಈ ಹಿಂದೆ ಕೆಲ ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಕುಟುಂಬಸ್ಥರು, ಉನ್ನತ ವರ್ಗದವರು, ಅನಕ್ಷರಸ್ಥರು ಮಾತ್ರ ಚುನಾವಣೆಯ ಸ್ಪರ್ಧೆಗೆ ಬಿಂಬಿತವಾಗಿದ್ದ ಗ್ರಾ.ಪಂ ಚುನಾವಣೆಯಲ್ಲಿಂದು ಸುಮಾರು 60 ರಿಂದ 70 ಪರ್ಸೆಂಟ್ ನಷ್ಟು ಮಂದಿ ವಿದ್ಯಾವಂತ ಯುವಕರು ಸ್ಪರ್ಧೆಗಿಳಿದು ಅದೃಷ್ಟ ಪರೀಕ್ಷಿಸುತ್ತಿರುವುದು ಹಳ್ಳಿ ರಾಜಕೀಯದಲ್ಲಿ ಸಾಕಷ್ಟು ಕುತೂಹಲಾ ಕೆರಳಿಸಿದೆ.
ಇನ್ನು ಕೆಲವರು ಮಾತ್ರ ಅಪ್ಪ ಅಮ್ಮ ಚಿಕ್ಕಪ್ಪ ದೊಡ್ಡಪ್ಪ ಎಂಬ ಸೆಂಟಿಮೆಂಟಲ್ ಡೈಲಾಗ್ ಗಳನ್ನು ಹೇಳಿಕೊಂಡು ಬಡ ಮತದಾರ ರನ್ನ ಖೆಡ್ಡಾಕ್ಕೆ ಕೆಡವೋ ಬೆಣ್ಣೆ ಸವರು ಮಾತುಗಳನ್ನಾಡುತ್ತ ನಾನು ಗೆದ್ದರೆ ಇಡಿ ಸಮಾಜವೇ ಬದಲಾಗುತ್ತೆ ಎನ್ನುತ್ತಿದ್ದಾರೆ.
ಈಗಾಗಲೇ ಪಾವಗಡ ತಾಲ್ಲೂಕಿನ ಪ್ರತಿಹಳ್ಳಿಗಳಲ್ಲೂ ಕೈ ಪಾಳೆಯದ ರಾಜಕೀಯ ದುರೀಣ ವೆಂಕಟರವಣಪ್ಪ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ್ ನೇತೃತ್ವದಲ್ಲಿ ಸೂಕ್ತ ಪಕ್ಷದ ಬೆಂಬಲಿತ ಪರ ಆಭ್ಯರ್ಥಿಗಳ ಆಯ್ಕೆ ಗೊಳಿಸಿ ಗೆಲ್ಲಿಸಿಕೊಳ್ಳುವ ಸೂಚನೆಯ ತಂತ್ರಗಳನ್ನ ಹೆಣೆದು ಈ ಭಾರಿ ಮೂವತ್ತು ಪಂಚಾಯಿತಿಗಳಲ್ಲಿ ನಮ್ಮದೇ ಪಕ್ಷದ ಬೆಂಬಲಿತ ಆಭ್ಯರ್ಥಿಗಳು ಬಲ ಸಾಧಿಸಲಿದ್ದಾರೆ ಎಂದು ಪ್ರಚಾರ ನಡೆಸುತ್ತಿದ್ದಾರೆ.
ಇತ್ತ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ .ಆಂಜಿನಪ್ಪ ಮತ್ತು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪರ ಸಂಘಟನೆಯ ಸಮಾಲೋಚನೆ ತಂಡ ಹಗಲು ಇರುಳೆನ್ನದೆ ಹಳ್ಳಿಗಳಲ್ಲಿ ಮತದಾರರ ಮನಗೆಲ್ಲುತ್ತ ಸಾಗುತ್ತಿದೆ. ಇನ್ನು ಹೇಗಾದರೂ ಮಾಡಿ ಚುನಾವಣೆ ತಳಹದಿಯಾಗಿ ಕೇಸರಿಯ ಪತಾಕೆ ಹಾರಿಸಲೇಬೇಕೆಂಬ ತಂತ್ರದ ಮಂತ್ರದ ಹಿಂದೆ ಬಿದ್ದಿರುವ ಬಿಜೆಪಿ ಸಂಸದ ನಾರಾಯಣ ಸ್ವಾಮಿಯವರ ಮಾರ್ಗದರ್ಶನದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ರವಿಶಂಕರ್ ನಾಯ್ಕ್ ಮತ್ತು ಕಾರ್ಯಕರ್ತರು ಹಳ್ಳಿ ಹಳ್ಳಿಗೂ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತ ಬಿಜೆಪಿ ಬೆಂಬಲಿತ ಆಭ್ಯರ್ಥಿಗೆ ಮತ ನೀಡಿ ಮತದಾರ ರ ಬದುಕಿನ ಪಥ ಬದಲಾಗುತ್ತೆ ಎನ್ನುತ್ತಿದ್ದಾರೆ.
*ಎಚ್.ವಿ.ವೆಂಕಟೇಶ್*
*ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ*
ತಾಲ್ಲೂಕಿನ 33 ಪಂಚಾಯಿತಿ ಚುನಾವಣೆ ಪೈಕಿ 30 ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಲಿದ್ದಾರೆ.
ಮತ್ತೊಂದು ಕಡೆ ಪಕ್ಷೇತರವಾಗಿ ಸ್ಪರ್ದಿಸಿರುವ ಯುವ ಉತ್ಸಾಹಿ ಅಭ್ಯರ್ಥಿಗಳು ಕೈಯಲ್ಲಿ ಪ್ರಣಾಳಿಕೆ ಪತ್ರಗಳನ್ನಿಡಿದು ಹಳ್ಳಿಯ ಗಲ್ಲಿ ಗಲ್ಲಿಯಲ್ಲಿ ಮತದಾರನ ಮನವೊಲಿಸೋ ಪ್ರಯತ್ನ ಮಾಡುತ್ತಿದ್ದಾರೆ.ಇನ್ನೊಂದಷ್ಟು ಮಂದಿ ಸಾಮಾಜಿಕ ಜಾಲತಾಣದ ಪ್ರಚಾರ ತಂತ್ರದ ಮೊರೆಹೋಗಿರೋದು ನೋಡುಗರನ್ನ ಗಮನಸೆಳೆಯುತ್ತಿದೆ.
ಗೆದ್ದ ಅಭ್ಯರ್ಥಿಗಳು ಬಡವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ.
*ಆರ್.ಸಿ.ಅಂಜಿನಪ್ಪ*
*ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ*
ಪಾವಗಡ ತಾಲ್ಲೂಕಿನ 33 ಪಂಚಾಯಿತಿಗಳ 526 ಸ್ಥಾನಗಳಿಗೆ ಚುನಾವಣೆ ನಡೆಯುತ್ತಲಿದ್ದು. ಅದರಲ್ಲಿ 87284 ಪುರುಷ ಮತದಾರಿದ್ದರೆ 82264 ಮಹಿಳೆಯರು ಇತರೆ 5 ಸೇರಿದಂತೆ ಒಟ್ಟು 1.69.553 ಮಂದಿ ಹಳ್ಳಿ ಚುನಾವಣೆಯ ಮತದಾರರು ಭವಿಷ್ಯ ಹೇಳಲಿದ್ದಾರೆ.
ಗ್ರಾ.ಪಂ ಪಂಚಾಯಿತಿ ಚುನಾವಣೆಯೆಂದರೆ ಐದು ವರ್ಷಕ್ಕೊಮ್ಮೆ ಬಂದು ಜನರಲ್ಲಿ ಆಸೆ ತೋರಿಸಿ ಸ್ಪರ್ದಿಸಿ ಗೆದ್ದು ಮಂಗಮಾಯವಾಗುವುದು ಇನ್ನು ಸಹಿ ಬಾರದ ಅದೆಷ್ಟೋ ಅನಕ್ಷರಸ್ಥ ಹೆಬ್ಬೆಟ್ಟುಗಳು ಆಡಳಿತದ ಅರಿವೇಯಿಲ್ಲದೆ ವ್ಯರ್ಥ ಆಯ್ಕೆಯಾಗಿ ಪಂಚಾಯಿತಿ ಅಭಿವೃದ್ದಿಯಲ್ಲಿ ಶೂನ್ಯ ಸಾಧನೆ ಮಾಡುತ್ತಿದ್ದಾರೆ. ಆಗಾಗಿ ಅವಿದ್ಯಾವಂತ ಲಂಚ ಬಾಕರ ಮತ್ತು ರಬ್ಬರ್ ಸ್ಟಾಂಪರ್ಗಳ ಆಯ್ಕೆ ಬದಲಿಗೆ ವಿದ್ಯಾವಂತರನ್ನ ಆಯ್ಕೆ ಮಾಡಿಕೊಂಡರೆ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯ ಎಂಬ ಲೆಕ್ಕಾಚಾರದಲ್ಲಿ ಹಳ್ಳಿ ಮತದಾರ ಪ್ರಭುಗಳಿದ್ದಾರೆ.
ಏನೇ ಆಗಲಿ ಈ ಗ್ರಾಮ ಪಂಚಾಯಿತಿ ಚುನಾವಣೆ ಹಳ್ಳಿಗರಿಗೆ ಪ್ರತಿಷ್ಟೇಯ ಕಣವಾಗಿರೋದ್ರಿಂದ ಗುಂಡು ತುಂಡು ಹಣ ಸೀರೆ ಆಸೆ ತೋರಿಸಿ ಮತದಾರರನ್ನ ಸೋಲಿಸ್ತಾರ ಇಲ್ಲ ಇವೆಲ್ಲ ಆಮಿಷಗಳಿಗೆ ಬಲಿಯಾಗದೆ ಅರ್ಹ ಆಭ್ಯರ್ಥಿಗಳನ್ನ ಮತದಾರರು ಗೆಲ್ಲಿಸ್ತಾರಾ ಕಾದು ನೋಡಬೇಕಿದೆ.
*ವರದಿ :ನವೀನ್ ಕಿಲಾರ್ಲಹಳ್ಳಿ*