ರೈತರಿಗೆ 3% ಬಡ್ಡಿದರದಲ್ಲಿ ಸಾಲ ವಿತರಣೆ ಕಾರ್ಯಕ್ರಮ……… ಪಾವಗಡ ಜ 24: – ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ ರೈತರಿಗೆ ಶೇಕಡ 3% ಬಡ್ಡಿ ದರದಲ್ಲಿ ಸಾಲ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ,ರೈತರ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬ್ಯಾಂಕು ಸ್ಥಾಪನೆಯಾಗಿದ್ದು, ರೈತರು ಈ ಬ್ಯಾಂಕಿನಿಂದ ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆದು ಆರ್ಥಿಕವಾಗಿ ಸದೃಢರಾಗಬೇಕು , ಹಾಗೂ ರೈತರು ವ್ಯವಸಾಯ ಜೊತೆಗೆ ಉಪ ಕಸುಬುಗಳಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹಸು ಸಾಕಾಣಿಕೆ ಮಾಡುವುದರಿಂದ ತಿಂಗಳಿಗೆ ಆದಾಯ ಬರುವಂತೆ ನೋಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಸಹಕಾರ ಕೃಷಿಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಎನ್. ಆರ್, ಅಶ್ವಥ್ ರವರು ಮಾತನಾಡುತ್ತಾ, ರೈತರು ಸಾಲ ಪಡೆದ ನಂತರ ಸರಿಯಾದ ವೇಳೆಗೆ, ಸಾಲ ಮರುಪಾವತಿಸಬೇಕು ಇದರಿಂದ ಇತರೆ ರೈತರಿಗೂ ಅನುಕೂಲವಾಗುತ್ತದೆ ಎಂದರು,
ತಾಲೂಕಿನಲ್ಲಿ 40ಕ್ಕೂ ಹೆಚ್ಚಿನ ಮಂದಿ ರೈತರಿಗೆ ನಾಲ್ಕು ಕೋಟಿ ರೂ ಸಾಲ ನೀಡಲಾಗುತ್ತಿದೆ ಹಾಗೂ ಟ್ರ್ಯಾಕ್ಟರ್, ಕುರಿ ಸಾಕಲು, ದಾಳಿಂಬೆ ಬೆಳೆಯಲು, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಹಳೆಯ ಸಾಲ ಮರು ಪಾವತಿ ಮಾಡಿದ ಕೂಡಲೆ ರೈತರಿಗೆ ಹೆಚ್ಚುವರಿಯಾಗಿ ಮತ್ತೆ ಸಾಲ ಕೊಡಿಸಲಾಗುವುದು. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದು ತಿಳಿಸಿದರು.ನಿರ್ದೇಶಕ ರಂಗಸ್ವಾಮಿ, ಮಹಲಿಂಗಪ್ಪ, ಪೆದ್ದರೆಡ್ಡಿ, ವ್ಯವಸ್ಥಾಪಕ ಮಂಜುನಾಥ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೇಶವಚಂದ್ರದಾಸ್, ಬಾಲಾಜಿ, ಷಾ ಬಾಬು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸುಲು ಎ