IMG 20211210 WA0063

ಪಾವಗಡ: ವಿಧಾನಪರಿಷತ್ ಚುನಾವಣೆ ಶಾಂತಿಯುತ ಮತದಾನ….!

DISTRICT NEWS ತುಮಕೂರು

ಶಾಂತಿಯುತವಾದ ರೀತಿಯಲ್ಲಿ ನಡೆದ ವಿಧಾನಪರಿಷತ್ ಚುನಾವಣೆ….

ಪಾವಗಡ ತಾಲೂಕಿನಲ್ಲಿ ವಿಧಾನಪರಿಷತ್ ಚುನಾವಣೆ ಶಾಂತಿಯುತವಾದ ರೀತಿಯಲ್ಲಿ ನಡೆಯಿತು.  ತಾಲೂಕಿನಲ್ಲಿ ಒಟ್ಟು 34 ಗ್ರಾಮಪಂಚಾಯಿತಿಗಳಿಗೆ ಹಾಗೂ ಒಂದು ಪುರಸಭೆಗೆ ಸೇರಿ 578 ಮತದಾರರಿದ್ದು.ಅದರಲ್ಲಿ 258 ಪುರುಷ ಮತದಾರರು 320 ಮಹಿಳಾ ಮತದಾರರು ಇದ್ದರು. ಇಂದು ಸಂಜೆ 4 ಗಂಟೆ ವೇಳೆಗೆ 257 ಪುರುಷ ಮತದಾರರು ಹಾಗೂ 320 ಮಹಿಳಾ ಗ್ರಾಮ ಪಂಚಾಯಿತಿಯ ಸದಸ್ಯರು ತಮ್ಮ ವೋಟು ಹಕ್ಕನ್ನು ವಿನಿಯೋಗಿಸಿಕೊಂಡು.

ವೈ.ಎನ್ ಹೊಸಕೋಟೆ ಹೊಬಳಿ ಯಲ್ಲಿ ಇತ್ತೀಚಿಗೆ ಒಬ್ಬ ಗ್ರಾಮ ಪಂಚಾಯಿತಿ ಪುರುಷ ಸದಸ್ಯ ಅಕಾಲ ಮರಣ ಹೊಂದಿದ್ದರಿಂದ. 258 ಪುರುಷ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಕೇವಲ 257 ಸದಸ್ಯರು ಮತಚಲಾಯಿಸಿದರು.

ಪಾವಗಡದ ಪುರಸಭೆಯಲ್ಲಿ ಶಾಸಕ ವೆಂಕಟರವಣಪ್ಪ ಮೊದಲನೆಯ ಓಟನ್ನು ಚಲಾಯಿಸುವುದರ ಮೂಲಕ ಪುರಸಭೆ ಸದಸ್ಯರಿಗೆ ವೋಟನ್ನು ಹಾಕಲು ಉತ್ತೇಜನ ನೀಡಿದರು…

ಪುರಸಭೆಯಲ್ಲಿ ಮತ ಚಲಾಯಿಸಿದ ನಂತರ ತುಮಕೂರು ಜಿಲ್ಲಾ ಅಲ್ಪಸಂಖ್ಯಾತ ಉಪಾಧ್ಯಕ್ಷರಾದ ಷಾ ಬಾಬು ಮಾತನಾಡುತ್ತಾ ಕಾಂಗ್ರೆಸ್ ವಿಧಾನಪರಿಷತ್ ಅಭ್ಯರ್ಥಿಯಾದ ಆರ್.ರಾಜೇಂದ್ರ ರವರಿಗೆ ಸುಮಾರು 400 ರಿಂದ 450 ಓಟುಗಳು ಬಂದಿರಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು

ಇಂದು ನಡೆದ ಚುನಾವಣೆಯಲ್ಲಿ ಸಂಜೆ 4 ಗಂಟೆ ವೇಳೆಗೆ ಶೇಕಡ 100% ಮಹಿಳಾ ಅಭ್ಯರ್ಥಿಗಳು. ಹಾಗೂ ಶೇಕಡ 99.61% ಪುರುಷ ಅಭ್ಯರ್ಥಿಗಳು ತಮ್ಮ ಓಟಿನ ಹಕ್ಕನ್ನು ಚಲಾಯಿಸಿದರು. ಒಟ್ಟು 99.83% ವೋಟು ಚಲಾವಣೆಯಾಗಿದೆ….

ವಿಧಾನಪರಿಷತ್ ಚುನಾವಣೆಯಲ್ಲಿ ಮತದಾರ ಪ್ರಭು ಯಾರಿಗೆ ಒಲಿದಿದ್ದಾನೆ ಎಂಬುದನ್ನು ತಿಳಿಯಲು ಡಿಸೆಂಬರ್ 14ರ ಫಲಿತಾಂಶದ ವರೆಗೂ ಕಾಯಬೇಕಾಗಿದೆ

ವರದಿ: ಶ್ರೀನಿವಾಸಲು ಎ