ಪಾವಗಡ…ಇಂದು ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ 2022 -23 ನೇ ಸಾಲಿನ ಶಾಲೆಯ ಪ್ರಾರಂಭೋತ್ಸವನ್ನು ವಿಜೃಂಭಣೆಯಿಂದಾಗಿ ಮಾಡಲಾಯಿತು. ಸರ್ಕಾರಿ ಆದರ್ಶ ಶಾಲೆಯಲ್ಲಿ ಇಂದು ಸೋಲಾರ್ ಹೈಟೆಕ್ ಗ್ರಾಂಟ್ ನಡಿ ನವೀಕರಣಗೊಂಡ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಯಿತೆಂದು , ವಿದ್ಯಾರ್ಥಿಗಳು ತುಂಬಾ ಖುಷಿಯಿಂದ ಶಾಲೆಗೆ ಆಗಮಿಸಿದ್ದ ರೆಂದು, ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ ಎಂದು ಮುಖ್ಯಶಿಕ್ಷಕ ಜಿ ವೆಂಕಟೇಶ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು. ( ಪ್ರೌಢಶಾಲಾ ವಿಭಾಗ) ದ ಉಪ ಪ್ರಾಂಶುಪಾಲರಾದ ಓ.ಧನಂಜಯ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಪುಷ್ಪಗುಚ್ಚವನ್ನು ನೀಡುವುದರ ಮೂಲಕ ಸಂತೋಷದಿಂದ ಬರಮಾಡಿಕೊಳ್ಳಲಾಯಿತು. ಅಲ್ಲದೇ ಸರ್ಕಾರದ ವಿನೂತನ ಯೋಜನೆಯಾದ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿ.ಇದರ ಭಾಗವಾದ “ನಲಿಯುತ್ತಾ ಕಲಿ ಕಲಿಯುತ್ತಾ ನಲಿ” ಎಂಬ ಶೀರ್ಷಿಕೆಯಡಿಯಲ್ಲಿ 14 ದಿನಗಳ ವಿಶೇಷ ಕಾರ್ಯಕ್ರಮ ವಾದ ಮಳೆಬಿಲ್ಲು ಯೋಜನೆಯ ಮೊದಲನೇ ದಿನ ಆಟದ ಹಬ್ಬವನ್ನು ಆಚರಿಸಲಾಯಿತು ಎಂದರು. ತಾಲೂಕಿನ ಅರಸಿಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ವಿನೂತನವಾಗಿ ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಗ್ರಾಮೀಣ ಸೊಡಗಿ ನ ಆಟಗಳಾದ ಲಗೋರಿ ಆಟ ಮತ್ತು ಡುಬ್ಬ ಹಾರುವುದು ಅತಲ್-ಪತಲ್ ಎಂಬ ವಿನೂತನ ಗ್ರಾಮ್ಯ ಆಟಗಳನ್ನು ಆಡಿಸುವುದರ ಮೂಲಕ ಮನರಂಜನೆಯನ್ನು ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯರಾದ ರೇಣುಕರಾಜ್.ಜಿ.ಹೆಚ್ .ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗಿರೀಶ್ ಕುಮಾರ್ ,ಸಹಶಿಕ್ಷಕರಾದ ರವಿ.ಎಸ್. ಹನುಮೇಶ್.ಎನ್,ಮೋಹನ್ ಕುಮಾರ್. ಜಿ.ಕೆ, ಅಭಿಷೇಕ್,ಶ್ರೀಮತಿ ವಿಮಲಾ.ಆರ್, ರತ್ನಮ್ಮ. ಆರ್.ಸಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗಳ ಕಚೇರಿ ಸಿಬ್ಬಂದಿಗಳಾದ. ಸಿ ಆರ್ ಪಿ ಗಳು ಮತ್ತು ಬಿ ಆರ್ ಪಿ ಗಳು ಹಾಗೂ ಈ ಸಿ ಓ ಗಳು ಮತ್ತು ಪಿ ಈ ಓ ತಾಲೂಕಿನಾದ್ಯಂತ ತಮಗೆ ನಿಗದಿಪಡಿಸಿರುವ ಹೋಬಳಿಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ವರದಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಿದರು.
ವರದಿ: ಶ್ರೀನಿವಾಸಲು ಎ