ಕೇಂದ್ರ ಸರ್ಕಾರದ ವಕೀಲರ ವಿಧೇಯಕ 2025 ತಿದ್ದುಪಡಿ ವಿರೋಧಿಸಿ. ವಕೀಲರ ಪ್ರತಿಭಟನೆ.
ಪಾವಗಡ: ಕೇಂದ್ರ ಸರ್ಕಾರ ವಕೀಲರ ವಿಧೇಯಕಕ್ಕೆ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ವಕೀಲರು ನ್ಯಾಯಾಲಯದ ಕಾರ್ಯಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ತಾಲ್ಲೂಕು ವಕೀಲ ಸಂಘದ ವತಿಯಿಂದ
ತಹಶೀಲ್ದಾರ್ ವರದರಾಜುರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ವಕೀಲರ ವಿಧೇಯಕ ಕಾಯ್ದೆ ತಿದ್ದುಪಡಿ 2025 ಮಂಡಿಸಲು ತೀರ್ಮಾನಿಸಿದ್ದು ಇದು ಮುಂದಿನ ದಿನಗಳಲ್ಲಿ ವಕೀಲ ವೃತ್ತಿಗೆ ಮಾರಕವಾಗಲಿದ್ದು.ಕೇಂ ದ್ರ ಸರ್ಕಾರದ ವಕೀಲರ ವಿಧೇಯ ಕಕ್ಕೆ ತಿದ್ದುಪಡಿ ಮಾಡಿದರೆ ವಕೀಲರ ಹಿತರಕ್ಷಣೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ವಿಧೇಯಕ ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ
ವಕೀಲರ ಸಂಘದ ಅಧ್ಯಕ್ಷ ಶೇಷಾನಂದನ್, ಪ್ರಧಾನ ಕಾರ್ಯದರ್ಶಿ ಎಚ್ ಎ ಪ್ರಭಾಕರ್, ಉಪಾಧ್ಯಕ್ಷ ಹನುಮಂತರಾಯುಡು, ವಕೀಲ ಜಯಸಿಂಹ ಕೆ. ಆರ್
ಎ ಎಸ್ ರಘುನಂದನ್, ಎಚ್ ಮಾರುತಿ, ಚನ್ನಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸಲು ಎ