ರೈತರ ಮೇಲೆ ಬ್ಯಾಂಕ್ ಅಧಿಕಾರಿಗಳ ದಬ್ಬಾಳಿಕೆ ನಿಲ್ಲಬೇಕು. ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ.
ಪಾವಗಡ : ತಾಲ್ಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿದ್ದು, ರೈತರು ಹಾಕಿದ ಬೆಳೆಗಳು ಕೈಗೆ ಬಾರದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ, ಎಂದು
ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಬ್ಯಾಂಕರ್ ಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರೈತರ ಬೆಳೆಗಳು ಕೈಗೆ ಬಾರದೆ ಸಾಲಬಾಧೆಯನ್ನು ಅನುಭವಿಸುತ್ತಿರುವಾಗ ಕೆಜಿಬಿ ಮತ್ತು ಕರ್ನಾಟಕ ಬ್ಯಾಂಕ್ ಗಳು ರೈತರು ತೆಗೆದುಕೊಂಡ ಬೆಳೆ ಸಾಲದ ವಸೂಲಾತಿ ಪದ್ಧತಿಯ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬೆಳೆ ಸಾಲ ಪಡೆದ ಬ್ಯಾಂಕುಗಳ ಗ್ರಾಹಕರಿಗೆ ಸರ್ಕಾರದಿಂದ ಬರುವ ಯಾವುದೇ ಅನುದಾನವನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿದರು.
ರಾಷ್ಟ್ರೀಕೃತ ಬ್ಯಾಂಕುಗಳಿಗೆ ಒಂದು ಮಾದರಿಯ ಕಾನೂನು ಕರ್ನಾಟಕ ಬ್ಯಾಂಕ್ ಮತ್ತು ಕೆ ಜಿ ಬಿ ಬ್ಯಾಂಕಿಗೆ ಒಂದು ರೀತಿಯ ಕಾನೂನು ಇರುವುದೇ ಎಂದು ಪ್ರಶ್ನಿಸಿದರು.
ಯಾವುದೇ ಬ್ಯಾಂಕ್ ಸರ್ಕಾರದ ಮಾರ್ಗದರ್ಶನ ಮೂಲಕವೇ ಸಾಲ ವಸೂಲಾತಿಗೆ ಮುಂದಾಗ ಬೇಕೇ ವಿನಹ, ತಮ್ಮದೇ ಆದ ರೀತಿಯಲ್ಲಿ ಇರಬಾರದು ಎಂದರು.
ರೈತರು ಸಾಲ ಮರುಪಾವತಿ ಮಾಡಿಲ್ಲವೆಂದರೆ ರೈತರು ಬ್ಯಾಂಕಿಗೆ ಮಾರ್ಟ್ ಗೇಜ್ ಮಾಡಿರುವ ಜಮೀನನ್ನು ಬ್ಯಾಂಕಿನವರು ಮಾರಾಟ ಮಾಡಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.
ಸಭೆಯನ್ನು ಉದ್ದೇಶಿಸಿ ಲೀಡ್ ಬ್ಯಾಂಕ್ ಮ್ಯಾನೇಜರ್ ಚೈತನ್ಯ ರವರು ಮಾತನಾಡಿ.
ಸಾಲ ಮರು ಪಾವತಿಸಿಲ್ಲವೆಂದು ರೈತರಿಗೆ ಸರಕಾರದಿಂದ ಬರುವ ಯಾವುದೇ ಅನುದಾನವನ್ನು ಸಾಲಕ್ಕಾಗಿ ಜಮೆ ಮಾಡಿಕೊಳ್ಳುವ ಪದ್ಧತಿ ಇಲ್ಲವೆಂದರು.
ಒಂದು ವೇಳೆ ರೈತರ ಖಾತೆಯಲ್ಲಿ ತಮ್ಮ ಸ್ವಂತ ಹಣವಿದ್ದರೆ ರೈತರನ್ನು ವಿಚಾರಿಸಿ ಅವರ ಅಪ್ಪಣೆ ಪಡೆದು ಸಾಲಕ್ಕೆ ಜಮೆ ಮಾಡಿಕೊಳ್ಳಬಹುದು ಎಂದರು.
ಪ್ರತಿಯೊಂದು ಹಣಕಾಸಿನ ಸಂಸ್ಥೆಯು ರಿಜಿಸ್ಟ್ರೇಷನ್ ಕಡ್ಡಾಯವಾಗಿ ಆಗಿರಬೇಕು, ಹಾಗೆ ರಿಜಿಸ್ಟ್ರೇಷನ್ ಇಲ್ಲದೆ ನಡೆಯುತ್ತಿರುವ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂದರು.
ಆರ್ ಬಿ ಐ ನ ಸುತ್ತೋಲೆಯ ಪ್ರಕಾರವೇ ಹಣಕಾಸಿನ ವ್ಯವಹಾರ ನಡೆಯುತ್ತದೆ ಎಂದರು.
ಸಾಲ ವಸೂಲಾತಿ ಸಂಬಂಧಪಟ್ಟಂತೆ ಕಾನೂನಿನ ನೀತಿ ನಿಯಮಗಳನ್ನು ಅನುಸರಿಸ ಬೇಕಾಗುತ್ತದೆ ಎಂದರು. ಹಾಗೂ ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವರದರಾಜು, ತಾಲೂಕು ಪಂಚಾಯಿತಿ ಇ. ಓ ಜಾನಕಿ ರಾಮ್, ಎಸ್ ಬಿ ಐ ಮ್ಯಾನೇಜರ್ ಚಂದ್ರಶೇಖರ್, ರೈತ ಸಂಘದ ಕೊಂಡನ್ನ, ನರಸಿಂಹಪ್ಪ, ಕಾಳೇ ನಾಯಕ್, ಜನಾರ್ಧನ್, ಕೃಷ್ಣಾರೆಡ್ಡಿ, ವೆಂಕಟರಂಗಪ್ಪ, ಗೋಪಾಲ್, ಸುಬ್ಬಣ್ಣ,
ಇತರೆ ಬ್ಯಾಂಕುಗಳ ವ್ಯವಸ್ಥಾಪಕರುಗಳು ಹಾಜರಿದ್ದರು