IMG 20240414 WA0006

ಪಾವಗಡ : ಜೆಡಿ.ಎಸ್. ಪಕ್ಷಕ್ಕೆ ಲೋಕಸಭೆಯ ಚುನಾವಣೆಯ ನಂತರ ಭವಿಷ್ಯ ಇರುವುದಿಲ್ಲ….!

DISTRICT NEWS ತುಮಕೂರು

ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನನ್ನು ಗೆಲ್ಲಿಸಿ. ಶಾಸಕ ಹೆಚ್ ವಿ. ವೆಂಕಟೇಶ್

ಜೆ.ಡಿ.ಎಸ್. ಪಕ್ಷಕ್ಕೆ ಲೋಕಸಭೆಯ ಚುನಾವಣೆಯ ನಂತರ ಭವಿಷ್ಯ ಇರುವುದಿಲ್ಲ….

ಪಾವಗಡ : ಮುಂಬರುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನನ್ನು ತಾಲ್ಲೂಕಿನಿಂದ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಶಾಸಕ ಹೆಚ್ ವಿ ವೆಂಕಟೇಶ್ ಕಾರ್ಯಕರ್ತರಿಗೆ ಕರೆ ನೀಡಿದರು.IMG 20240414 WA0000

ಪಟ್ಟಣದ ಎಸ್.ಎಸ್.ಕೆ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ನ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಗಳಿಂದಾಗಿ ಜೆಡಿಎಸ್ ನಲ್ಲಿರುವ ಮುಸ್ಲಿಂ ಬಾಂಧವರು ಸಹ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಚಲಾಯಿಸುತ್ತಾರೆ.
ಜೆ.ಡಿ.ಎಸ್. ಪಕ್ಷಕ್ಕೆ ಲೋಕಸಭೆಯ ಚುನಾವಣೆಯ ನಂತರ ಭವಿಷ್ಯ ಇರುವುದಿಲ್ಲ ಎಂದರು.

ಬಿಜೆಪಿಯವರು ಬಾಯಿ ಬಿಟ್ಟರೆ ಬರೀ ಸುಳ್ಳನೆ ಹೇಳುತ್ತಾರೆ, ಈ ಬಾರಿ ಅವರ ಮೋಸದ ಆಟ ನಡೆಯುವುದಿಲ್ಲ, ಮೋದಿಯವರು ಮಾತನಾಡಿದರೆ ಸಾಕು ಅಚ್ಚೆ ದಿನ್ ಎನ್ನುತ್ತಾರೆ, ನಿಜವಾಗಲೂ ಅಚ್ಚೆ ದಿನ್ ಯಾರಿಗಾಗಿದೆ ಎಂದು ಪ್ರಶ್ನಿಸಿದರು.

ಜಯಚಂದ್ರ

ಕಾರ್ಯಕ್ರಮ ಉದ್ದೇಶಿಸಿ ಜಯಚಂದ್ರ ಮಾತನಾಡಿ ಯಾವುದೇ ಚುನಾವಣೆಯಲ್ಲಿ ಹೇಳಿದ ಭರವಸೆ ಈಡೇರಿಸಿದ ಏಕೈಕ ಪಕ್ಷ ಕಾಂಗ್ರೆಸ್ ಎಂದರು..
ರಾಜ್ಯದಾದ್ಯಂತ ಈಗಾಗಲೇ ಬರ ಪರಿಸ್ಥಿತಿ ಉಂಟಾಗಿದ್ದು ಕಾಂಗ್ರೆಸ್ ನ ಗ್ಯಾರೆಂಟಿ ಗಳಿಂದಾಗಿ ಜನರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.IMG 20240414 WA0013

ಬಿಜೆಪಿ ಪಕ್ಷ ಕೇವಲ ಮಾಧ್ಯಮದಲ್ಲಿ ಪ್ರಚಾರಕ್ಕೆ ಸೀಮಿತವಾಗಿದೆ ಹೊರತು ಜನರ ಕಷ್ಟಗಳಿಗೆ ಅಲ್ಲ ಎಂದರು.
ಬಿಜೆಪಿಯು ಜನರಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬದೆ ಕೋಮುವಾದಿ ಬೀಜಗಳನ್ನು ಬಿತ್ತುತ್ತಿದೆ ಎಂದರು.

ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣ ಸೃಷ್ಟಿಯಾಗಿದೆ. ತಾಲೂಕಿನಲ್ಲಿ ಚಂದ್ರಪ್ಪ ಒಂದು ಲಕ್ಷಕ್ಕಿಂತ ಹೆಚ್ಚಿನ ಮತ ಪಡೆಯುತ್ತಾರೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸಚಿವ ಆಂಜನೇಯಲು ಮಾತನಾಡಿ .
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅವರಿಗೆ ಸರಿಯಾದ ಅಭ್ಯರ್ಥಿ ಸಿಗದೆ ಕ್ಷೇತ್ರವೇ ಪರಿಚಯವಿಲ್ಲದ ಗೋವಿಂದ ಕಾರಜೋಳರವರನ್ನು ಕಣಕ್ಕಿಳಿಸಿದೆ.
ಮತಬಾಂಧವರೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಪ್ಪನವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಮಾತನಾಡಿ,
ಬಿಜೆಪಿ ಪಕ್ಷದವರಿಗೆ ಜನತೆಯ ಬಗ್ಗೆ ಯಾವುದೇ ಕಾಳಜಿ ಇಲ್ಲ ಅವರ ಪ್ರಮುಖ ಅಜೆಂಡವೆಂದರೆ ರಾಮನ ಫೋಟೋ ತೋರಿಸಿ ಮತಗಳನ್ನು ಗಳಿಸುವುದೇ ಆಗಿದೆ ಎಂದರು.
ಆದರೆ ಕಾಂಗ್ರೆಸ್ ಸರ್ವ ಜನಾಂಗದ ಶಾಂತಿಯ ತೋಟವೆಂದು ಇಲ್ಲಿ ಎಲ್ಲರೂ ಸಮಾನರೆಂದರು.

IMG 20240414 WA0003

ಮಾಜಿ ಸಚಿವ ವೆಂಕಟರಮಣಪ್ಪ : ಚಂದ್ರಪ್ಪ ಗೆ ಬೆಂಬಲ

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಮೊದಲು ತಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಂದ್ರಪ್ಪನನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಸಿ ತನ್ನ ಬಳಿ ಮಾತನಾಡಿದರೆಂದು ಅವರ ಮೇಲಿನ ಗೌರವ ಮತ್ತು ಪಕ್ಷದ ಮೇಲಿರುವ ನಿಷ್ಠೆಯಿಂದಾಗಿ ಚಂದ್ರಪ್ಪ ನಿಗೆ ಬೆಂಬಲಿಸಲು ಒಪ್ಪಿದೆನೆಂದು ತಿಳಿಸಿದರು.
ನಾನು ಯಾರಿಗೂ ಭಯ ಪಡುವ ವ್ಯಕ್ತಿಯಲ್ಲ ತಾನು ಭಯಪಡುವುದು ಕೇವಲ ಮತದಾರರಿಗೆ ಮಾತ್ರ ಎಂದರು.
ಈಗ ತಾನು ಚಂದ್ರಪ್ಪನಿಗೆ ಬೆಂಬಲಿಸುವುದಾಗಿ ತಿಳಿಸಿ, ತಮ್ಮ ಮದ್ಯ ಈಗ ಯಾವುದೇ ವೈ ಮನಸು ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.

IMG 20240414 WA0005

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಾಲಿಂಗಯ್ಯ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೇಶ್ ಬಾಬು, ರಾಮಾಂಜಿನಪ್ಪ, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಮಾನಂ ವೆಂಕಟಸ್ವಾಮಿ , ಗುರ್ರಪ್ಪ, ಫತ್ಲು ಸಾಬ್, ರವಿ ಶಂಕರ ರೆಡ್ಡಿ , ಸದಸ್ಯರುಗಳಾದ ರವಿ, ರಾಜೇಶ್, ಮುಖಂಡರುಗಳಾದ ಡಿ.ಮಂಜುನಾಥ್, ಶೇಷಾಗಿರಿ, ,ದಿವಾಕರಪ್ಪ , ಮಹಿಳಾ ಅಧ್ಯಕ್ಷರಾದ ಸುಮಾ ಅನಿಲ್ , ಉಷರಾಣಿ , ಯೂತ್ ಕಾಂಗ್ರೆಸ್ ಅಧ್ಯಕ್ಷ ಸುಜಿತ್, ಸೇರಿ ಇನ್ನೂ ಹಲವಾರು ಮುಖಂಡರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು..
ವರದಿ. ಶ್ರೀನಿವಾಸಲು. A