ಕೊರೋನಾ update: ಪಾವಗಡ ಇಂದು 14 ಸೋಂಕು ಪ್ರಕರಣ.
ಪಾವಗಡ : 5 ಮಕ್ಕಳಿಗೆ ಕೊರೋನಾ .
ಪಾವಗಡ: – ಕೊರೋನಾ ಅಟ್ಟಹಾಸ ತುಮಕೂರು ಜಿಲ್ಲೆ ಯಲ್ಲೂ ಮುಂದುವರೆದಿದೆ. ಇಂದು 24 ಸೋಂಕಿತ ಪ್ರಕರಣಗಳು ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ.ಒಟ್ಟು ಸೋಂಕಿತರ ಸಂಖ್ಯೆ 292 ಏರಿಕೆ ಯಾಗಿದೆ ಎಂದು DHO ನಾಗೇಂದ್ರಪ್ಪ ತಿಳಿಸಿದ್ದಾರೆ.
ಪಾವಗಡ ದಲ್ಲಿ ಕೊರೋನಾ ಸ್ಫೋಟ
ತುಮಕೂರು ಜಿಲ್ಲೆಯಲ್ಲಿ ಇಂದು ಪತ್ತೆಯಾದ 24 ಕೊರೋನಾ ಪ್ರಕರಣಗಳಲ್ಲಿ 14 ಪ್ರಕರಣ ಪಾವಗಡ ತಾಲ್ಲೂಕಿನದ್ದಾಗಿವೆ. ಒಟ್ಟು 47 ಪ್ರಕರಣಗಳಾಗಿವೆ. ಇಲ್ಲಿಯ ವರೆಗೆ 38 ಪ್ರಕರಣಗಳು ಸಕ್ರಿಯವಾಗಿವೆ ಪಾವಗಡ ದಲ್ಲಿ ಇಂದಿನ ಸೋಂಕಿತರಲ್ಲಿ 5 ಮಕ್ಕಳಿರುವುದು ಆತಂಕ ಉಂಟುಮಾಡಿದೆ. ಪಾವಗಡ ಪಟ್ಟಣ, ಕೆಂಚಗಾನಹಳ್ಳಿ, ಮುಗದಾಳ ಬೆಟ್ಟ,ಹೊಸಹಳ್ಳಿ, ವೈ ಎನ್ ಹೊಸ ಕೋಟೆ, ಕ್ಯಾತಗಾನ ಕೆರೆ,ದೇವಲಾಡಿ ಹಳ್ಳಿ, ರೊಪ್ಪ, ಸೋಂಕಿತ ಪ್ರಕರಣಗಳು ವಿವರವನ್ನು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ವೈ ಎನ್ ಹೊಸಕೋಟೆ ಇಂದು 3 ಸೋಂಕಿತ ಪ್ರಕರಣ
ಪಾವಗಡ ತಾಲ್ಲೂಕಿನ 14 ಸೋಂಕಿತ ಪ್ರಕರಣಗಳ್ಳಿ ಇಂದು ವೈ ಎನ್ ಹೊಸಕೋಟೆಯಲ್ಲಿ 3 ಸೋಂಕಿತ ಪ್ರಕರಣಗಳು ಪತ್ತೆ ಯಾಗಿವೆ, ಒಟ್ಟು 4 ಸೋಂಕಿತ ಪ್ರಕರಣಗಳಾಗಿವೆ.
ವೈ ಎನ್ ಹೊಸಕೋಟೆಯ ಇಂದ್ರಬಡಾವಣೆಯಲ್ಲಿ ದಂಪತಿಗೆ ಸೋಂಕು ತಗುಲಿದೆ. ಗಂಡು 40, ಮತ್ತು ಹೆಣ್ಣು 32 ವಯಸ್ಸಾಗಿದೆ. C ಬ್ಲಾಕ್ ನಲ್ಲಿ ವಾಸವಿರುವ 42 ವರ್ಷದ ಪುರುಷನಿಗೂ ಸೋಂಕು ತಗುಲಿದೆ.
ಪಾವಗಡ ತಾಲ್ಲೂಕಿನಲ್ಲಿ ಸೋಂಕು ಹೆಚ್ಚಾಗಲು ಸಾಮಾಜಿಕ ಅಂತರ ಪಾಲಿಸದಿರುವುದು, ಮಾಸ್ಕ ದರಿಸದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ…..