IMG 20240419 WA0028

ಪಾವಗಡ : ನೀರಾವರಿ ಮತ್ತು ನಿರುದ್ಯೋಗ ನಿವಾರಣೆಗೆ ಒತ್ತು…!

DISTRICT NEWS ತುಮಕೂರು

ನೀರಾವರಿ ಮತ್ತು ನಿರುದ್ಯೋಗ ನಿವಾರಣೆಗೆ ಒತ್ತು

ವೈ.ಎನ್.ಹೊಸಕೋಟೆ : ಬರಗಾಲದ ಛಾಯೆ ಆವರಿಸಿರುವ ಪಾವಗಡದಲ್ಲಿ ಮೇವು ನೀರಿನ ಸಮಸ್ಯೆ
ಮತ್ತು ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ನೀರಾವರಿ ಪ್ರಗತಿಗೆ ಒತ್ತು ನೀಡಲಾಗುವುದು ಎಂದು
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು.

ಗ್ರಾಮದಲ್ಲಿ ಬುಧವಾರ ಸಂಜೆ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸುಮಾರು ಐವತ್ತು ಸಾವಿರ ಜನ
ಬೆಂಗಳೂರಿಗೆ ಉದ್ಯೋಗ ಗುಳೆ ಹೋಗುತ್ತಿರುವ ವಿಚಾರ ನೋವಿನ ಸಂಗತಿ. ಮುಂದಿನ
ದಿನಮಾನಗಳಲ್ಲಿ ನೀರಾವರಿ ಒತ್ತು ನೀಡುವುದು, ರೈಲು ಮಾರ್ಗಗಳನ್ನು ಅಭಿವೃದ್ಧಿ ಪಡಿಸುವುದು,
ಯುವಕರಿಗೆ ಕೌಶಲ್ಯ ತರಬೇತಿಗಳನ್ನು ನೀಡಿ ಪ್ರಮಾಣ ಪತ್ರಗಳನ್ನು ನೀಡಿ ಉದ್ಯೋಗ ಸೃಷ್ಟಿ
ಮಾಡುವುದು ನನ್ನ ಮೊದಲ ಆಧ್ಯತೆ ಆಗಿದೆ.
ಚುನಾವಣೆಗೆ ಸಮಯ ಇಲ್ಲದ ಕಾರಣ ಪ್ರತಿಯೊಬ್ಬರು ಮನೆ ಮನೆಗೆ ಹೋಗಿ ತಾವೇ ಮೋದಿ
ಎಂದುಕೊಂಡು ಮತ ಕೇಳಿ ಕಮಲದ ಗುರ್ತಿಗೆ ಬಿಜೆಪಿಗೆ ಮತ ಹಾಕಿಸಬೇಕು. ನಿಮ್ಮ ಅಮೂಲ್ಯ
ಆಶೀರ್ವಾದ ನನಗೆ ನೀಡಬೇಕು ಎಂದರು.

ಜೆಡಿಎಸ್ ನ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ ಮಾತನಾಡಿ, ಬಿಜೆಪಿ ಮತ್ತು ಜೆ.ಡಿ.ಎಸ್. ನಾಯಕರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸರ್ವೆ ಮಾಡಿಸಿದ ನಂತರ ಗೋವಿಂದ ಕಾರಜೋಳರವರಿಗೆ
ಸೀಟು ನೀಡಿದ್ದಾರೆ. ಕಾರಣ ಈ ನಾಯಕ ಆದರೆ ಸುಮಾರು ಎರಡು ಲಕ್ಷ ಅಂತರದಿಂದ ಗೆಲುವು
ಸಾದಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲ ಬಿಜೆಪಿಗೆ ಇದೆ.ಇಪ್ಪತ್ತೆಂಟು ಕ್ಷೇತ್ರಗಳು ಬಿಜೆಪಿ ಗೆಲ್ಲಬೇಕು. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಬೇಕು
ಎಂಬುದು ನಮ್ಮೆಲ್ಲರ ನಿರೀಕ್ಷೆಯಾಗಿದೆ ಎಂದರು. ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಚಂದ್ರಪ್ಪ ಗೆದ್ದರೆ ನಲವತ್ತನೆಯವರೋ ಐವತ್ತನೆಯವರೋ ಆಗುತ್ತಾರೆ.ಆದರೆ ಗೋವಿಂದ ಕಾರಜೋಳ ರವರು ಗೆದ್ದರೆ ನಾಲ್ಕುನೂರಾ ಐದೋ ಹತ್ತನೆಯವರೋ ಆಗುತ್ತಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಯಾವುದೂ ಸರಿಯಾಗಿ ಅನುಷ್ಟಾನವಾಗಿಲ್ಲ. ಜನತೆ ಮೋಸ
ಮಾಡಿದೆ. ಇದಕ್ಕೆ ತಕ್ಕ ಪಾಠ ಜನತೆ ಕಲಿಸಬೇಕು ಎಂದರು.

ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ ಜೆಡಿಎಸ್ ಮತ್ತು ಬಿಜೆಪಿಯನ್ನು ಗೆಲ್ಲಿಸಿ ದೇಶದ ಪ್ರಗತಿಗೆ ಸಹಕರಿಸಿ ಎಂದರು.

ಅಭ್ಯರ್ಥಿ ಗೋವಿಂದ ಕಾರಜೋಳ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.

ಹೋಬಳಿ ಕೇಂದ್ರದ ಮಹಾತ್ಮ ಗಾಂಧಿವೃತ್ತ ಮತ್ತು ಮಹಾತ್ಮ ಗಾಂಧಿ ರಸ್ತೆ ಸೇರಿದಂತೆ ದೊಡ್ಡಹಳ್ಳಿ,ಮರಿದಾಸನಹಳ್ಳಿ ಮತ್ತು ಕೋಡಗುಡ್ಡ ಗ್ರಾಮಗಳಲ್ಲಿ ರೋಡ್ ಶೋ ನಡೆಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ತಿಮ್ಮಾರೆಡ್ಡಿ, ಜಿ.ಟಿ.ಗಿರೀಶ್, ಬಲರಾಮ ರೆಡ್ಡಿ, ಸಾಯಿ ಸುಮನ್, ಜಿ.ಬಿ. ಸತ್ಯನಾರಾಯಣ, ಬಿ.ಹೊಸಹಳ್ಳಿ ನಾಗರಾಜು, ದುಗ್ಗಿ ವೆಂಕಟೇಶ್, ಸತ್ಯನಾರಾಯಣ ಚೌದರಿ,ಯರ್ರಪ್ಪ, ಎ.ಒ.ನಾಗರಾಜು ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

ವರದಿ : ಸತೀಶ್

Leave a Reply

Your email address will not be published. Required fields are marked *