9ee40382 f3e9 49cb 84b7 a0150eefdd5a

ಚಿತ್ರದುರ್ಗ ಲೋಕಸಭೆ : ಕೋಟೆನಾಡಲ್ಲಿ ʻ ಗಂಡಸರು ʼ  ಇಲ್ಲವೇ ….?

National - ಕನ್ನಡ POLATICAL STATE
  • ಜನಾರ್ಧನ ಸ್ವಾಮಿ ಗೆ ಬಿ ಫಾರಂ ನಿರಾಕರಣೆ 
  • ಕೋಟೆನಾಡಲ್ಲಿ ʻ ಗಂಡಸರು ʼ  ಇಲ್ಲವೇ ….?

ಕರ್ನಾಟಕ ರಾಜ್ಯದ ಇತಿಹಾಸ ಪುಟಗಳಲ್ಲಿ ಚಿತ್ರದುರ್ಗ ಕ್ಕೆ ತನ್ನದೆ ಆದ ಸ್ಥಾನವಿದೆ. ಮದಕರಿನಾಯಕ ಆಳ್ವಿಕೆ ಮಾಡಿದ ಗಂಡೆದೆಯ ನಾಡು ವೀರ ವನಿತೆ  ಒನಕೆ ಓಬವ್ವನ ನೆಲೆ ಬೀಡು

ಚಿತ್ರದುರ್ಗ ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ ಚಿತ್ರಕೇತು ಆಳ್ವಿಕೆ ಮಾಡಿದ ಪ್ರದೇಶ. ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ ಚಿತ್ರದುರ್ಗ ಎಂದು ಹೆಸರು ಬರಲು ಕಾರಣವಾಗಿದೆ. ಇಂತಹ ಇತಿಹಾಸ ಪ್ರಸಿದ್ದ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸ್ಥಳೀಯ ಅಭ್ಯರ್ಥಿ ಇಲ್ಲವೆ..? ಇದು ಕೋಟೆ ನಾಡಿನ ಸ್ವಾಭಿಮಾನದ ಪ್ರಶ್ನೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ…!27 chitradurga Copy

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನ ಸಭಾ ಕ್ಷೇತ್ರಗಳಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಗೆ ಸ್ಥಳೀಯ ಅಭ್ಯರ್ಥಿಗಳೆ ಸಿಗುತ್ತಿಲ್ಲ ಯಾಕೆ….? ಕಳೆದ ಹತ್ತು ವರ್ಷದಿಂದ ಬೇರೆ ಜಿಲ್ಲೆಯವರಿಗೆ ಎರಡು ರಾಷ್ಟ್ರೀಯ ಪಕ್ಷಗಳು ಮಣೆ ಹಾಕುತ್ತಿವ ಇದರಿಂದ ಚಿತ್ರದುರ್ಗ ಅಭಿವೃದ್ಧಿ ವಂಚಿತವಾಗಿದೆ ಎಂಬುದು ಇಲ್ಲಿನ ಮತದಾರರ ಮತ್ತು ರಾಷ್ಟೀಯ ಪಕ್ಷಗಳ ಕಾರ್ಯಕರ್ತರ  ಅಳಲು, ಜನರ ನಾಡಿ ಮಿಡಿತಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ನಾವು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ ನೀವು ಮತ ನೀಡಿ ಎಂಬ ದೋರಣೆ ಎಷ್ಷು ಸರಿ….?

ಹೊರಗಡೆಯಿಂದ ( ವಲಸೆ) ಬರುವ ಅಭ್ಯರ್ಥಿಗಳಿಗೆ ಲೋಕಸಭಾ ಕ್ಷೇತ್ರದ ಸಂಪೂರ್ಣ ಪರಿಚಯವಿರುವುದಿಲ್ಲ,ಸ್ಥಳೀಯ ಸಮಸ್ಯೆ ತಿಳಿದಿರುವುದಿಲ್ಲ. ಚುನಾವಣೆ ಸಮಯದಲ್ಲಿ ಕ್ಷೇತ್ರದಲ್ಲಿ ಅಡ್ಡಾಡುತ್ತಾರೆ.ಹೆಚ್ಚು-ಹೆಚ್ಚು ಸಂಪನ್ಮೂಲಗಳನ್ನು ಹೂಡಿಕೆ ಮಾಡುವುದರ ಜೊತೆಗೆ ʻ ನಮೋʼ ಬಲದಿಂದ ಕೆಲವು ಬಾರಿ ಜಾತಿ ಬಲದಿಂದ ಆಯ್ಕೆ ಯಾಗುತ್ತಾರೆ. ಇವರಿಂದ ಕ್ಷೇತ್ರದ ಅಭಿವೃದ್ದಿ ನಿರೀಕ್ಷಿಸುವುದು ತಿರುಕನು ಕನಸು ಕಂಡಂತೆ ಹಾಗುತ್ತೆ.

ಸ್ಥಳೀಯ ಅಭ್ಯರ್ಥಿ  – ಹೊರಗಿನ ಅಭ್ಯರ್ಥಿ

ಸ್ಥಳೀಯ ಅಭ್ಯರ್ಥಿ ಯಾದರೆ ಹುಟ್ಟಿದ ಊರಿನ ಮಣ್ನಿನ ಋಣ ತೀರಸಬೇಕು ಎಂಬ ಹಂಬಲ ಅವರ ಅಂತರಾಳ ದಲ್ಲಿ .ತುಡಿತ ವಿರುತ್ತೆ. ಅದಕ್ಕೆ ಚಿತ್ರದುರ್ಗಲೋಕಸಭಾ ಕ್ಷೇತ್ರದ ಕಳೆದ ಮೂರು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಕ್ಷೇತ್ರದ ಕೊಡುಗೆಗಳ ಬಗೆಗಿನ ಒಂದು ನೋಟ…..

ಜನಾರ್ಧನ ಸ್ವಾಮಿ :  ಮೂಲತ ಚಿತ್ರದುರ್ಗ ಜಿಲ್ಲೆಯ ಹಳ್ಳಿಯಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಯಲ್ಲಿ  ವ್ಯಾಸಾಂಗ ಮಾಡಿದ ಶಿಕ್ಷರ ಸುಪುತ್ರರು ಇವರು. ಮುಂದೆ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಐಐಎಸ್‌ ಸಿ ಉನ್ನತ ವ್ಯಾಸಾಂಗ ಮಾಡಿ ವಿದೇಶ ದಲ್ಲಿ ನೌಕರಿ ಮಾಡುತ್ತಿದ್ದವರು ಸ್ವದೇಶ ಕ್ಕೆ ಬಂದು ನಂತರ 2009 ರ ಲೋಕಸಭಾ ಚುನಾವಣೆಯಲ್ಲಿ  ಚಿತ್ರದುರ್ಗದಿಂದ ಸ್ಪರ್ಧಿಸಿ ಗೆದ್ದರು. ಇವರಿಗೆ ಚಿತ್ರದುರ್ಗ ಜನ್ಮ ನೀಡಿದ ನಾಡು, ನನ್ನ ಊರಿಗೆ ಏನಾದರು ಕೆಲಸ ಮಾಡಬೇಕು ಹುಟ್ಟಿದ ಊರಿನ ಋಣ ತೀರಿಸಬೇಕು ಎಂಬ ಹಂಬಲ ಎಲ್ಲೊ ಒಂದು ಮೂಲೆಯಲ್ಲಿ ಇರುತ್ತದೆ ಎಂಬ ನಂಬಿಕೆ ಇಟ್ಟು  ಜನರು 2009 ರಲ್ಲಿ ಆಯ್ಕೆ ಮಾಡುತ್ತಾರೆ.DSC00660

ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ವಿಜ್ಞಾನ ನಗರಿ ಯನ್ನಾಗಿ ಮಾಡುತ್ತಾರೆ.ಇಲ್ಲಿ ಗಮನಿಸಬೇಕಾದ ಅಂಶ ವೆಂದರೆ ಇವರು ಸಂಸದ ರಾದ ಅವಧಿ ( 2009-2014) ಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯು.ಪಿ.ಎ ಸರ್ಕಾರ ವಿರುತ್ತೆ ಇವರು ಬಿಜೆಪಿ ಸಂಸದರು..

ಚಿತ್ರದುರ್ಗ ಮತ್ತು ರಾಜ್ಯದ ರಾಜಧಾನಿ ಬೆಂಗಳೂರು ನಡುವೆ ನೇರ ರೈಲ್ವೆ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು DRDO, BARC, ISRO, ಮತ್ತು IISc ನ ಹೊಸ ಕ್ಯಾಂಪಸ್ ಅನ್ನು ಚಳ್ಳಕೆರೆಯಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇವರನ್ನು ಆಯ್ಕೆ ಮಾಡಿದ ಕೋಟೆ ನಾಡಿನ ಜನರ ನಂಬಿಕೆ ಹುಸಿ ಯಾಗುವುದಿಲ್ಲ

ಬಿ 2012 ರಲ್ಲಿ, ಬಿಎಸ್ ಯಡಿಯೂರಪ್ಪ ಮತ್ತು ಬಿ.ಶ್ರೀರಾಮುಲು ಅವರು ಬಿಜೆಪಿಯನ್ನು ತೊರೆದರು, ಕೆಜೆಪಿ ಮತ್ತು ಬಿಎಸ್ಆರ್ ಪಕ್ಷಗಳನ್ನು ರಚಿಸಿದರು, ಇದು 2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗಮನಾರ್ಹ ಚುನಾವಣಾ ಹಿನ್ನಡೆಗೆ ಕಾರಣವಾಯಿತು

ಸೋಲಲು ಕಾರಣ :

2012 ರಲ್ಲಿ, ಬಿಎಸ್ ಯಡಿಯೂರಪ್ಪ ಮತ್ತು ಬಿ.ಶ್ರೀರಾಮುಲು ಅವರು ಬಿಜೆಪಿಯನ್ನು ತೊರೆದರು, ಕೆಜೆಪಿ ಮತ್ತು ಬಿಎಸ್ಆರ್ ಪಕ್ಷಗಳನ್ನು ರಚಿಸುತ್ತಾರೆ

ಬಿಜೆಪಿಯ ಜನಾರ್ದನ ಸ್ವಾಮಿಯವರ ಅಭಿವೃದ್ಧಿಯ ಪ್ರಯತ್ನಗಳ ಹೊರತಾಗಿಯೂ, ರಾಜಕೀಯದಲ್ಲಿ ಆದ ಬದಲಾವಣೆ ಗಳ ಪರಿಣಾಮ ದಿಂದ ಚಿತ್ರದುರ್ಗದಿಂದ 2014 ರಲ್ಲಿ ಅವರ ಲೋಕಸಭಾ ಚುನಾವಣೆಯಲ್ಲಿ ಸ್ವಾಮಿಯವರ ಸೋಲಿಗೆ ಕಾರಣವಾಗುತ್ತದೆ.20121021 140305

ಜನಾರ್ಧನ ಸ್ವಾಮಿ ಗೆ ಬಿ ಫಾರಂ ನಿರಾಕರಣೆ :

2024 ರಚುನಾವಣೆ ಗೆ ಜನಾರ್ಧನ ಸ್ವಾಮಿಯವರಿಗೆ ಬಿಜೆಪಿ ಪಕ್ಷ ಟಿಕೆಟ್‌ ನಿರಾಕರಣೆಗೆ ಕಾರಣ ಅವರ ಬಳಿ ಇಂದಿನ ಚುನಾವನಾ ವ್ಯವಸ್ಥೆ ಗೆ ಬೇಕಾದ ಸಂಪನ್ಮೂಲಗಳ ( ಹಣ) ಕೊರತೆ ಮತ್ತು ಜಾತಿ ಯ ಮೇಲಾಟದಲ್ಲಿ ಇವರಿಗೆ ಭಿ ಫಾರಂ ತಪ್ಪಿದೆ. ಅವರು ಒಬ್ಬ ಸಾಪ್ಟವೇರ್‌ ಇಂಜನಿಯರ್‌ ಪ್ರಾಮಾಣಿಕ ವ್ಯಕ್ತಿ. ಬೇರೆ ರಾಜಕಾರಣಿಗಳ ರೀತಿ ಬ್ರಷ್ಟಾಚಾರ ದ ಆರೋಪಗಳಿಲ್ಲ, ರಿಯಲ್‌ ಎಸ್ಟೇಟ್‌ ದಂಧೆ ಮಾಡಿಲ್ಲ ಎನ್ನುತ್ತಾರೆ ಕ್ಷೇತ್ರದ ಮತದಾರರು

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಪೂರ್ಣ ಪರಿಚಯವಿರುವ ಒಬ್ಬ ದಕ್ಷ ರಾಜಕಾರಣಿ. ಕೇಸರಿ ಪಕ್ಷ ಕ್ಕೆ ನಿಜಕ್ಕೂ ಕೋಟೆನಾಡಿನ ಅಭಿವೃದ್ಧಿ ಬೇಕಾಗಿಲ್ಲ ಈ ಕ್ಷೇತ್ರದಲ್ಲಿ ಪಾವಗಡ ತಾಲ್ಲೂಕಿನ ರೀತಿ ಹಿಂದುಳಿದ- ಬರದ ನಾಡುಗಳಿವೆ ಬಿಜೆಪಿ ಗೆ ಅಭಿವೃದ್ಧಿ ಯ ಇರಾದೆ ಇದ್ದಿದ್ದರೆ ಕಾರಜೋಳ ಅವರನ್ನು ಅಭ್ಯರ್ಥಿ ಮಾಡುತ್ತಿರಲಿಲ್ಲ ಎಂಬ ಕೂಗು ಕ್ಷೇತ್ರ ದಲ್ಲಿ ಕೇಳಿ ಬರುತ್ತಿದೆ.

ಬಿಜೆಪಿ ಪಕ್ಷ ಚುನಾವಣಾ ಬಾಂಡ್‌ ಗಳ ಮೂಲಕ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದೆ. ಇಂತಹ ಸಜ್ಜನ ರಾಜಕಾರಣಿಗೆ ಬಿಜೆಪಿ ಪಕ್ಷ ಸಂಪನ್ಮೂಲಗಳನ್ನು ನೀಡಿ ಬೆಂಬಲಿಸಬಹುದಿತ್ತು. ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಬಿ ಎನ್‌ ಚಂದ್ರಪ್ಪ  ( 2014-2019) – ಕಾಂಗ್ರೆಸ್‌ ಪಕ್ಷ

ಚಂದ್ರಪ್ಪ ಅವರು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ  ಗ್ರಾಮದವರು ಅವರು 1986 ರಿಂದ 1991 ರವರೆಗೆ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಾರೆ ಮತ್ತು ನಂತರ 1991 ರಿಂದ 1992 ರವರೆಗೆ ಚಿಕ್ಕಮಂಗಳೂರಉ ಜಿಲ್ಲಾ ಪರಿಷತ್‌ ನ  ಉಪಾಧ್ಯರಾಗಿ ಕೆಲಸ ಮಾಡುತ್ತಾರೆ, ಚಂದ್ರಪ್ಪ ಅವರು 2001 ರಿಂದ 2003 ರ ಅವಧಿಯಲ್ಲಿ ಎಸ್‌ಎಂ ಕೃಷ್ಣ ಆಡಳಿತದಲ್ಲಿ ಲಿಡ್ಕರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.IMG 20240414 WA0003

2014 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜನಾರ್ಧನ ಸ್ವಾಮಿಯವರನು ಮಣಿಸಿ 16 ನೇ ಲೋಕಸಭೆ ಗೆ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಸಾರ್ವಜನಿಕರಿಂದ ಸಿಕ್ಕ ಮಾಹಿತಿ ಪ್ರಕಾರ ಇವರ ಅಧಿಕಾರ ದ ಅವದಿಯಲ್ಲಿ ಸಂಸದ ರ ನಿಧಿಯಲ್ಲಿ  ಹಲವು ಕಾಮಗಾರಿಗಳನ್ನು ಮಾಡಿರುವ ಅಂಶಗಳನ್ನು ಬಿಟ್ಟರೆ ಮೇಲ್ನೋಟಕ್ಕೆ ಯಾವ ಕೆಲಸಗಳು ಕಂಡು ಬರುತ್ತಿಲ್ಲ. ಅವರ ಸಾಧನೆಗಳ ವಿವರ ಪಡೆಯಲು ಸಪ್ತಸ್ವರ ಪತ್ರಿಕೆಯಿಂದ ಹಲವಾರು ಬಾರಿ ಫೊನ್‌ ಮೂಲಕ ಸಂಪರ್ಕ ಕ್ಕೆ ಪ್ರಯತ್ನಿಸಿದರು ಪ್ರಯೋಜನವಾಗಿಲ್ಲ.

ಎ ನಾರಾಯಣ ಸ್ವಾಮಿ  (2019 – 2024)

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿಗೆ ಸೇರಿದ  ಎ ನಾರಾಯಣ ಸ್ವಾಮಿ ಯವರು 2019 ರ ಲೋಕಸಭಾ ಚುನಾವಣೆಯಲ್ಲಿ  ಕ್ಷೇತ್ರ ದಲ್ಲಿ ಮತದಾರರಿಗೆ ಪರಿಚಯವಿಲ್ಲದಿದ್ದರು ನರೇಂದ್ರ ಮೋದಿ ನಾಮ ಬಲದಿಂದ ಸಂಸತ್‌ ಗೆ ಆಯ್ಕೆಯಾಗುತ್ತಾರೆ, ನಂತರ ಕೇಂದ್ರ ಸಚಿವರು ಆಗುತ್ತಾರೆ ಆದರೆ ಕ್ಷೇತ್ರ ಕ್ಕೆ ಇವರ ಅಭಿವೃದ್ಧಿ ಮಾತ್ರ ಶೂನ್ಯ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಇವರ ಲೋಕಸಭಾ ಕ್ಷೇತ್ರದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ಪ್ರವೇಶ ನಿರಾಕರಿಸಿದ್ದು ವಿವಾದವಾಗಿತ್ತು. ನಂತರ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಅಭಿವೃದ್ದಿ ಪಡಿಸುತ್ತೇನೆ ಎಂದು ಹೇಳಿ ಹೋಗುತ್ತಾರಂತೆ ಆದರೆ ಇಲ್ಲಿಯ ವರೆಗು ಪೆನ್ನಮ್ಮನ ಹಳ್ಳಿ ಯಾವ ಅಭಿವೃದ್ದಿ ಕಂಡಿಲ್ಲ. ಕಳೆದ ವರ್ಷದ  ಬಜೆಟ್‌ ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ಹಣ ಪ್ರಕಟಿಸುತ್ತಾರೆ ಅದರೆ ಇಲ್ಲಿಯ ವರೆಗು ಒಂದು ರೂಪಾಯಿ ಹಣ ಬಿಡುಗಡೆಯಾಗಿಲ್ಲ ಎಂಬ ಮಾತುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಚಿತ್ರದುರ್ಗದ ಬಹಳ ವರ್ಷದ ಕನಸಿನ ಯೋಜನೆಗೆ ಕೇಂದ್ರ ಸಚಿವರಾದ ಎ ನಾರಾಯಣ ಸ್ವಾಮಿ ಪ್ರಯತ್ನಮಾಡಿಲ್ಲ ಎಂಬ ಕ್ಷೇತ್ರದಲ್ಲಿ ಕೇಳಿಬರುತ್ತಿವೆ, ಕೇಂದ್ರ ಸಚಿವರಾದರು ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕ್ಕೆ ಯಾವುದೇ ಪ್ರಯೋಜನವಿಲ್ಲ.

ಇವರಿಗೆ 2024 ಚುನಾವಣೆಗೆ ಬಿಜೆಪಿ ಟಿಕೆಟ್‌ ನೀಡದೆ ಬಿಜಾಪುರ ಜಿಲ್ಲೆಯಿಂದ ಗೋವಿಂದ ಕಾರಜೋಳ ಎಂಬ ಮಾಜಿ ಸಚಿವರನ್ನು ಕರೆತಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯನ್ನಾಗಿ ಮಾಡಿದೆ.ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಸ್ವಾಮಿ ಯನ್ನು ಗೆಲ್ಲಿಸಿದ ಚಿತ್ರದುರ್ಗ ಮತದಾರರು ಯಾವುದೇ ಅಭಿವೃದ್ಧಿ ಕಂಡಿಲ್ಲ.

  ಕಾರಜೋಳ : ಸೋತ ಅಭ್ಯರ್ಥಿಗೆ ಟಿಕೆಟ್‌ 

2023 ರ ವಿಧಾನ ಸಭಾ ಚುನಾವಣೆಯಲ್ಲಿ  ವಿಜಾಪುರ ಜಿಲ್ಲೆಯ ಮುಧೋಳ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಕಂಡ ಮಾಜಿ ಉಪ ಮುಖ್ಯಮಂತ್ರಿ  ಹಾಗೂ ಮಾಜಿ ಸಚಿವರಾದ ಗೋವಿಂದ ಕಾರಜೋಳ ರಿಗೆ ಬಿಜೆಪಿ ೨2024 ಲೋಕಸಭಾ ಚುನಾವಣೆ ಗೆ ಬಿ ಫಾರಂ ಕೊಟ್ಟಿದೆ.ವಿಜಾಪುರ ಜಿಲ್ಲೆಯ ಮುಧೋಳ ಕ್ಷೇತ್ರದ ಜನ ಕಾರಜೋಳ ರನ್ನು ತಿರಸ್ಕಾರ ಮಾಡಿ ಮನೆ ಗೆ ಕಳುಹಿಸಿದ್ದಾರೆ. ಸಚಿವರಾಗಿದ್ದೆ ತಮ್ಮ ಸ್ವಂತ ಕ್ಷೇತ್ರದಲ್ಲಿ ಮತದಾರರ ಮನಸ್ಸು ಗೆಲ್ಲಲು ಆಗಿಲ್ಲ. ಚಿತ್ರದುರ್ಗ ದ ಸಮಸ್ಯೆ ಹೇಳಿಕೊಂಡು ಮಧೋಳಕ್ಕೆ ಹೋಗಬೇಕಾದ ಸಮಸ್ಯೆ ಬರುತ್ತಾ..? ಆನೇಕಲ್‌ ವ್ಯಕ್ತಿಯಿಂದ ಅಭಿವೃದ್ಧಿ ಕಂಡಿದ್ದು ಆಯ್ತು…..!  IMG 20240407 WA0002

ಚಿತ್ರದುರ್ಗ ಲೋಕಸಭಾ ಕ್ಷೇತ್ರ ದ ಪರಿಚಯವಿಲ್ಲದ ಒಮ್ಮೆಯೂ ಕ್ಷೇತ್ರದಲ್ಲಿ ಅಡ್ಡಾಡದ, ಕ್ಷೇತ್ರದ ಮೂಲಭೂತ ಸಮಸ್ಯೆ ತಿಳಿಯದ ವಿಜಾಪುರ ಜಿಲ್ಲೆಯ ಗೋವಿಂದ ಕಾರಜೋಳ ಅವರಿಗೆ ಟಿಕೆಟ್‌ ನೀಡಿದೆ. ಕಳೆದ ಚುನಾವಣೆಯಲ್ಲೂ ಆನೇಕಲ್‌ ನಾರಾಯಣ ಸ್ವಾಮಿ ಅಭ್ಯರ್ಥಿ ಮಾಡುವ ಮೂಲಕ ಬಿಜೆಪಿ ಪಕ್ಷ ಚಿತ್ರದುರ್ಗ ಅಭಿವೃದ್ದಿಗೆ ತಡೆಯೊಡ್ಡಿದೆ. ಕಳೆದ ಹತ್ತು ವರ್ಷದಿಂದ ಕ್ಷೇತ್ರ ಅಭಿವೃದ್ದಿ ಕಂಡಿಲ್ಲ ಆದ್ದರಿಂದ  ಈ ಬಾರಿ ಕ್ಷೇತ್ರದಲ್ಲಿ ಸ್ಥಳಿಯ ಅಭ್ಯರ್ಥಿ- ಸ್ವಾಭಿಮಾನದ ಕೂಗು ಕೇಳಿ ಬಂದಿತ್ತು ಆದರೆ  ಮತದಾರರ ದ್ವನಿ ಗೆ ಬೆಲೆಯೆ ನೀಡದ ರಾಷ್ಟ್ರೀಯ ಪಕ್ಷಗಳು ಹೊರಗಡೆ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಪ್ಪ ನವರು

ಮೋದಿ ಎಂಬ ನಾಮ ಬಲದಿಂದ ಗೆದ್ದು ಬರುತ್ತಾರ ಇಲ್ಲವಾ…?  ಅಂತಿಮವಾಗಿ ಮತದಾರ ತೀರ್ಪಿಗಾಗಿ ಜೂನ್‌ ವರಗೆ ಕಾಯಬೇಕು

 

Leave a Reply

Your email address will not be published. Required fields are marked *