IMG 20200813 WA0095

ಪಾವಗಡ: ಆಹಾರ ಕಿಟ್ ವಿತರಿಸಿದ ಶಾಸಕರು…!

DISTRICT NEWS ತುಮಕೂರು

ಆಹಾರ ಕಿಟ್ ವಿತರಿಸಿದ ಶಾಸಕರು….!
ವೈಎನ್ ಹೊಸಕೋಟೆ :  ಕೊರೋ ನಾ  ಸೊಂಕಿನ ಹಿನ್ನೆಲೆ ಯಲ್ಲಿ  ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಗ್ರಿ ಕಿಟ್ ವಿತರಣೆಯನ್ನು ಪಾವಗಡ   ಶಾಸಕ ವೆಂಕಟರಮಣಪ್ಪ ವಿತರಿಸಿದರು

ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ರೇಷನ್
ಕಿಟ್‍ಗಳನ್ನು   ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವಿತರಿಸಲಾಯಿತು.

ನಂತರ ಮಾತನಾಡಿದ ಶಾಸಕರು ಎಲ್ಲರು ಸಾಮಾಜಿಕ ಅಂತರವವನ್ನು ಕಾಪಾಡಿಕೊಳ್ಳಿ,  ಯಾವುದೇ ವ್ಯಕ್ತಿಗಳಿಗೆ ಜ್ವರ, ತಲೆನೋವು,ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಬೇಧಿ ಉಂಟಾದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ವಯಕ್ತಿಕ ಸ್ವಚ್ಛತೆ ಹಾಗೂ ಸುರಕ್ಷತೆಯನ್ನು ಕಾಪಾಡಿಕೊಳ್ಳಿ ಎಂದರು.

ತಾಲೂಕು ಕಾರ್ಮಿಕ ಅಧಿಕಾರಿ ಮಹಾದೇವಯ್ಯ  ಮಾತನಾಡಿ, ಹೋಬಳಿಯ 1400 ಕಾರ್ಮಿಕರನ್ನು ಕಿಟ್
ನೀಡಲಾಗುತ್ತಿದೆ. ಪ್ರತಿ ಕಾರ್ಮಿಕರಿಗೆ 8 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ. ಬೆಳೆ, ಎಣ್ಣೆ, ಗೋಧಿ ಹಿಟ್ಟು, ಉಪ್ಪು, ಸಕ್ಕರೆ
,ಮಸಾಲೆ ಪ್ಯಾಕೆಟ್, ಅವಲಕ್ಕಿ, ಸೇರಿದಂತೆ ಆಹಾರ ಕಿಟ್‍ ಅನ್ನು ವಿತರಿಸಲಾಗುತ್ತಿದೆ   ಎಂದು ತಿಳಿಸಿದರು.

ಗಾಮಪಂಚಾಯಿತಿ ಅಧ್ಯಕ್ಷೆ ಗಂಗಮ್ಮನಾಗರಾಜು, ಉಪಾಧ್ಯಕ್ಷ ಗೋವಿಂದಪ್ಪ.  ಸೇರಿದಂತೆ  ಸ್ಥಳೀಯ   ಮುಖಂಡರು   ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು

ವರದಿ: ಸತೀಶ್ Y N.ಹೊಸಕೋಟೆ.