IMG 20231025 153508 scaled

ವೈ ಎನ್ ಹೊಸಕೋಟೆ ಗ್ರಾ.ಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ…!

DISTRICT NEWS ತುಮಕೂರು

ವೈ ಎನ್ ಹೊಸಕೋಟೆ ಗ್ರಾ.ಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಜೆಡಿ ಎಸ್ ಬೆಂಬಲಿತರ ಆಯ್ಕೆ….!
ವೈ.ಎನ್.ಹೊಸಕೋಟೆ : ಸ್ಥಳೀಯ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸೈಯದ್ ಶಾನವಾಜ್ ಮತ್ತು ಉಪಾಧ್ಯಕ್ಷರಾಗಿ ಆರ್.ಶೋಭ ರವರು ಬುಧವಾರದಂದು ಆಯ್ಕೆಯಾದರು.
2ನೇ ಅವಧಿಯ ಮೀಸಲಾತಿ ಅನ್ವಯ ಅಧ್ಯಕ್ಷಸ್ಥಾನವು ಸಾಮಾನ್ಯ ಮೀಸಲಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನವು ಎಸ್ಸಿ ಮಹಿಳೆ ಮೀಸಲಾತಿಗೆ ನಿಗದಿಯಾಗಿತ್ತು .

ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕೇಶವಮೂರ್ತಿ ಮತ್ತು ಅಕ್ಷರ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸೈಯದ್ ಶಾನವಾಜ್ ಮತ್ತು ಶೋಭ ರವರು ಸ್ಪರ್ಧೆಯಲ್ಲಿ ಉಳಿದಿದ್ದರು.

IMG 20231025 153455


ಒಟ್ಟು 32 ಮತಗಳ ಪೈಕಿ 22 ಮತಗಳನ್ನು ಪಡೆದ ಸೈಯದ್ ಶಾನವಾಜ್ ಅಧ್ಯಕ್ಷರಾಗಿಯೂ ಮತ್ತು 21 ಮತಗಳನ್ನು ಪಡೆದ ಆರ್.ಶೋಭ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ವರದರಾಜು ರವರು ಘೋಷಿಸಿದರು. ಪಿಡಿಒ ಶ್ರೀರಾಮ ನಾಯಕ್, ಕಾರ್ಯದರ್ಶಿಗಳು ಹಾಗೂ ಪಂಚಾಯತಿ ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಡರು.

ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪುರಮೆರವಣಿಗೆ ನಡೆಸಿದರು .

ನೂತನ ಅಧ್ಯಕ್ಷರು . ಮಹಾತ್ಮಾ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಬಿ.ಸತ್ಯನಾರಾಯಣ, ಎ.ಓ.ನಾಗರಾಜು, ಖಯೂಂ, ತಿಪ್ಪೇಸ್ವಾಮಿ, ಓಬಳೇಶ, ಬಾವಸಾಬ್, ಟಿಂಕರ್ ಫಕೃದ್ಧೀನ್, ಗಪೂರ್, ಗೋಪಾಲಕೃಷ್ಣ , ಬಿ.ಎನ್.ನಾಗರಾಜು, ಮುಸ್ಟೂರು ಮಲ್ಲಿ, ಬಷೀರ್ ಸೇರಿದಂತೆ ಗ್ರಾಮಪಂಚಾಯಿತಿಯ ಸದಸ್ಯರು ಇದ್ದರು.