ಪಾವಗಡ: ಕಡ್ಡಾಯವಾಗಿ ಮಾಸ್ಕ್ ಧರಿಸಿ . ಸಾರ್ವಜನಿಕರು ಮಾಸ್ಕ್ ಧರಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹೇಳಿದರು.ಪುರಸಭೆ ವತಿಯಿಂದ ಕೊರೊನಾ ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಮಾತನಾಡಿದರು.
‘ಅಂಗಡಿಗಳ ಮಾಲೀಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಸಹಕಾರ ನೀಡಿದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ. ಜನರು ಜಾಗೃತರಾಗಬೇಕು’ ಎಂದರು.ಕೋರೊನಾ 2ನೇ ಅಲೆ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಅರ್ಚನಾ ಅವರು ಪುರಸಭಾ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ ಹೂವಿನ ವ್ಯಾಪಾರ ತರಕಾರಿ ವ್ಯಾಪಾರಸ್ಥರಿಗೆ ಹರಿವು ಮೂಡಿಸಿದರು ಭೇಟಿ ನೀಡಿದರು.
ಜನಸಮೂಹ ಕಡಿಮೆಯಿತ್ತಾದರೂ ಸಾಮಾಜಿಕ ಅಂತರವಿಲ್ಲದಿರುವುದು ಮತ್ತು ಕೆಲ ಮಂದಿ ಮಾಸ್ಕ್ ಧರಿಸದಿರುವುದು ಕಂಡುಬಂತು ಮಾಸ್ಕ್ ಧರಿಸದರವರಿಗೆ 250 ರು. ದಂಡ ವಿಧಿಸಿ ಕೋವಿಡ್ ನಿಯಮ ಪಾಲನೆ ಕುರಿತು ನಿರ್ಲಕ್ಷ್ಯ ವಹಿಸಿದ್ದಿದ್ದಾರೆ ವ್ಯಾಪಾರ ಮಾಡುವವರಿಗೆ 1000 ರು. ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು
ನಂತರ ವರದಿಗಾರ ಜೋತೆ ಮಾತನಾಡಿ ತರಕಾರಿ ಹೂವಿನ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಆರ್ ಎಂ ಸಿ ಯಲ್ಲಿ ವ್ಯಾಪಾರ ಮಾಡಲಿ, ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂದರು .
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ವೇಣುಗೋಪಾಲ್ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.
ಬುಲೆಟ್ ವೀರಸೇನಯಾದವ್