ಹೆಲ್ಪ್ ಸೊಸೈಟಿ ವತಿಯಿಂದ ಆಟೋ ರಿಕ್ಷಾಗಳಿಗೆ ಸ್ಯಾನಿಟೈಸ್.
ಈ ದಿನ ಹೆಲ್ಪ್ ಸೊಸೈಟಿ ತಂಡದವರು & ಸನ್ ರೈಸ್ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯರು ಒಂದು ಮಹತ್ವದ ಕಾರ್ಯ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.
ಸ್ಯಾನಿಟೈಸ್ ಮಾಡುವ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ರವರು ನಾವು ನಮ್ಮ ತಂಡದವರು ಸನ್ ರೈಸ್ ಆಸ್ಪತ್ರೆಯ ಸಹಕಾರದಿಂದ ಕೋವಿಡ್ ಮಹಾ ರೋಗದ ಬಗ್ಗೆ ಅರಿವು ಮೂಡಿಸಲು ಪಟ್ಟಣದ ಆಟೋ ನಿಲ್ದಾಣಗಳಿಗೆ ತೆರಳಿ ಆಟೋ ಚಾಲಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಎಲ್ಲಾ ಆಟೋಗಳಿಗೆ ಸ್ಯಾನಿಟೈಸ್ ಮಾಡಿ ನಂತರ ಮಾಸ್ಕ್ ನೀಡಲಾಯಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಪದಾಧಿಕಾರಿಯಾದ ರಾಕೇಶ್ ರವರು ದೇಶದ ಎಲ್ಲಾ ಜನರು ಕೋವಿಡ್ ರೋಗದಿಂದ ಭಯ ಭೀತಿಯಿಂದ ಬದುಕುವ ದಿನಗಳು ಬಂದಿವೆ. ನಾವು ಈ ರೋಗ ತಡೆಯಲು ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸ್ ಅನ್ನು ಬಳಸಿ, ತುರ್ತು ಕೆಲಸಗಳು ಇದ್ದಾರೆ ಮಾತ್ರ ಮನೆಯಿಂದ ಹೊರ ಬನ್ನಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸನ್ ರೈಸ್ ಆಸ್ಪತ್ರೆಯ ವೈದ್ಯರಾದ ಡಾ ಶ್ರೀಕಾಂತ್, ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಬೇಕರಿ ನಾಗರಾಜ್, ಜೆಡಿಎಸ್ ರೈತ ಘಟಕದ ಅಧ್ಯಕ್ಷ ಕೆಚ್ಚಗಾನಹಳ್ಳಿ ಗಂಗಾಧರ್ ನಾಯ್ಡು. ಮಾಜಿ ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾದ ಅನಿಲ್ ಕುಮಾರ್, ಪುರಸಭೆ ಸಿಬ್ಬಂದಿ ವರ್ಗದವರಾದ ವೇಣುಗೋಪಾಲ್. ತಿಪ್ಪೇಸ್ವಾಮಿ ಹಾಗೂ ಹರೀಶ್, ಅನಿಲ್ ಕುಮಾರ್, ನರೇಶ್, ಆಟೋ ಚಾಲಕರಾದ ಗುರು, ಪ್ರೇಮ್, ನವೀನ್, ತೇಜು, ರಾಜು. ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.