ಹತ್ತನೇ ತರಗತಿಯಲ್ಲಿ ಅನುತ್ತಿರ್ಣರಾದ 70 ಮಕ್ಕಳಿಗೆ 15 ದಿನಗಳಿಂದ ಪೂರಕ ಪರೀಕ್ಷೆಗೆ ಸಿದ್ಧತೆಯನ್ನು ಕೈಕೊಂಡಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಪ್ರೇರೆಪಿಸಲಾಗಿದೆ ಎಂದು ರಾಜಲಾಂಛನ ಸಂಸ್ಥೆಯ ಅಧ್ಯಕ್ಷ ತೆಲಗರಹಳ್ಳಿ ಗಣೇಶ್ ಹೇಳಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ ಸಿದ್ಧತಾ ಶಿಬಿರದಲ್ಲಿ ಪಾಠ ಬೋಧಿಸಿದ ವಿವಿಧ ಶಾಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ಸ್‌ಪೆಕ್ಟರ್ ಎಲ್.ವೈ. ರಾಜೇಶ್ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಯಾವ ವಿಷಯದಲ್ಲಿ ಎಷ್ಟು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಅವರ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಪರೀಕ್ಷೆಗೆ ಸಿದ್ಧತೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಕಾಲೇಜು ಮೆಟ್ಟಿಲು ಹತ್ತಿದರೆ ಅದೆ ನಮ್ಮ ಸಂಸ್ಥೆಗೆ ಸಲ್ಲುವ ಗೌರವ ಎಂದರು. ಶಿಕ್ಷಕ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆಸಕ್ತಿ ಇರುತ್ತದೆ.
ವಿದ್ಯಾರ್ಥಿಗಳಿಗಾಗಿ ಸಂಸ್ಥೆಯ ಮೂಲಕ ಉತ್ತಮ ಪೂರ್ವ ಸಿದ್ಧಾತೆ ನಡೆಯಲಿರುವ ಪೂರಕ ಪರೀಕ್ಷೆಗೆ ಬೇಕಾದ ಸಿದ್ಧತೆ ಬಗ್ಗೆ ತಿಳಿಸಿದ್ದು ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ಪರೀಕ್ಷೆ ನಿಭಾಯಿಸಬೇಕು. ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗಿದೆ. ಎಸ್ಸೆಸೆಲ್ಸಿಯಲ್ಲಿ ಅನುತ್ತೀರ್ಣಾರಾದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಂಸ್ಥೆಯ ಸದಸ್ಯರು ಕೆಲಸ ಕಾರ್ಯ ಬದಿಗೊತ್ತಿ 20 ದಿನಗಳಿ೦ದ ನಿರಂತರವಾಗಿ ಪಠ್ಯ ಬೋಧನೆಯಲ್ಲಿ ತೊಡಗಿ ದ್ದಾರೆ. ನಡೆಯಲಿರುವ ಪರೀಕ್ಷೆಯಲ್ಲಿ ಎಲ್ಲರೂ ತೇರ್ಗಡೆಯಾಗಬೇಕು. ಎಂದು ಹಾರೈಸಿದರು. ತೆಲಗರಹಳ್ಳಿ ಗಣೇಶ್ ಮಾತನಾಡಿ, ಅನ್ನದಾನ ಮಾಡಿದರೆ ಒಂದು ದಿನ ಹೊಟ್ಟೆ ತುಂಬಿಸಬಹುದು. ಆದರೆ ಅಕ್ಷರದಾನ ಮಾಡಿದರೆ ಅವರ ಜೀವನದುದ್ದಕ್ಕು ಊಟ ಮಾಡಬಹುದು.
ತಿಮ್ಮರಾಯಸ್ವಾಮಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ (ವಾಸು), ಶ್ರೀವಾಣಿ ಪ್ರಿನ್ಸಿಪಾಲ್ ಚಂದ್ರಶೇಖರ್, ಸರಸ್ವತಿ ವಿದ್ಯಾಮಂದಿರದ ಮುಖ್ಯ ಶಿಕ್ಷಕಿ ಭಾಗ್ಯ ಶ್ರೀನಿವಾಸ್, ಶಿಕ್ಷಕರಾದ ಪಲಲಿತಾ, ಅನಿತಾ, ರವಿಚಂದ್ರ, ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಆನೇಕಲ್ ವೃತ್ತ ನೀರಿಕ್ಷಕ ಮಹಾನಂದ್ ರಾಜಲಾಂಛನ ಸಂಸ್ಥೆಯ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಮಂಜುನಾಥ್, ನಂದಿ, ಜಿಗಣಿ ಘಟಕದ ಅಧ್ಯಕ್ಷ ತೆಲಗರಹಳ್ಳಿ ಗಣೇಶ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ವರದಿ : ಹರೀಶ್…