ಪಟ್ಟಣದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆ ಅಭಿವೃದ್ಧಿಪಡಿಸಿ :ಹೆಲ್ಪ್ ಸೊಸೈಟಿ
ಪಾವಗಡ : ಪಟ್ಟಣದ ಶ್ರೀ ಶನಿಮಹಾತ್ಮಾ ದೇವಸ್ಥಾನ ಹಿಂಭಾಗದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯನ್ನುಅಭಿವೃದ್ಧಿ ಗೊಳಿಸಲು ಸರ್ಕಾರ ಚಿಂತನೆ ಮಾಡುವ ಅಗತ್ಯವಿದೆಯೆಂದು ಪಾವಗಡ ಮಾಜಿ ಪುರಸಭೆ ಅಧ್ಯಕ್ಷ ಮಾನಂ ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.
ಪಾವಗಡ ಹೆಲ್ಪ್ ಸೊಸೈಟಿ ವತಿಯಿಂದ ಪಟ್ಟಣದ ಶ್ರೀ ಶನಿಮಹಾತ್ಮಾ ದೇವಸ್ಥಾನ ಹಿಂಭಾಗದ ತುಂಬಾ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡುವ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮಾತನಾಡಿ ಪಟ್ಟಣದ ಮದ್ಯಭಾಗದಲ್ಲಿ ಇರುವಂತ ಈ ಸರ್ಕಾರಿ ಶಾಲೆ 75 ನೇ ಸ್ವಾತಂತ್ರ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಇಂದಿಗೂ ಸಹ ಹೆಂಚಿನ ಕೊಠಡಿಗಳಲ್ಲಿ ಪ್ರಾಣ ಭಯದಿಂದ ಬಡ ಮಕ್ಕಳು ಪಾಠ ಪ್ರವಚನ ಕೇಳುವಂತ ಶೋಚನಿಯ ಸ್ಥಿತಿಯೂ ನೋಡುಗರ ಮೈಜು ಮ್ಮೆನಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬಿ ಆರ್ ಸಿ ಪವನ್ ಕುಮಾರ್ ರೆಡ್ಡಿ, ಸಿ ಆರ್ ಪಿ ಓಬಳಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜ್, ಶಾಲಾ ಮುಖ್ಯೋಪಾಧ್ಯಾಯ ಮಾರುತೀಶ್ , ಶಾಲಾ ಸಿಬ್ಬಂದಿ, ಅಡುಗೆ ಸಿಬ್ಬಂದಿ ಹಾಜರಿದ್ದರು,
ವರದಿ: ಶ್ರೀನಿವಾಸಲು ಎ