IMG 20240226 WA0008

ಪಾವಗಡ: ಮೂವರು ಮಹಿಳೆಯರ ಸಾವು : ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ

DISTRICT NEWS ತುಮಕೂರು

ಮೂವರು ಮಹಿಳೆಯರ ಸಾವು : ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ– ಆರೋಪ.

ಪಾವಗಡ : ವಿವಿಧ ಶಸ್ತ್ರ ಚಿಕಿತ್ಸೆಗೊಳಗಾದ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಫೆಬ್ರವರಿ 22ರಂದು ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಏಳು ಮಹಿಳೆಯರಿಗೆ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದ್ದು ಆ ಪೈಕಿ 03 ಜನ ಮಹಿಳೆಯರು ಐದು ದಿನಗಳ ಅಂತರದಲ್ಲಿ ಸಾವನಪ್ಪಿರುತ್ತಾರೆ.

ತಾಲ್ಲೂಕಿನ ರಾಜವಂತಿ ಗ್ರಾಮದ ಅಂಜಲಿ (20) ಫೆಬ್ರವರಿ 22ರಂದು ಸಿಸೇರಿಯನ್ ಹೆರಿಗೆ ಚಿಕಿತ್ಸೆಗಾಗಿ ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದು, ಹೆರಿಗೆ ನಂತರ ಆಕೆಯ ಸ್ಥಿತಿ ಗಂಭೀರವಾಗಿ ವಾಣಿ ವಿಳಾಸ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಾಲಿಸದೆ ಫೆಬ್ರವರಿ 24ರಂದು ಮೃತಪಟ್ಟಿರುತ್ತಾರೆ.

ತಾಲ್ಲೂಕಿನ ವೀರ್ಲ ಗೊಂದಿ ಗ್ರಾಮದ ಅನಿತಾ( 30) ಸಂತಾನ ಹಣ ಚಿಕಿತ್ಸೆಗಾಗಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 22ರಂದು ಸಾವನ್ನಪ್ಪಿರುತ್ತಾರೆ.

ತಾಲ್ಲೂಕಿನ ಬ್ಯಾಡನೂರು ಗ್ರಾಮದ ನರಸಮ್ಮ ಎಂಬ ಮಹಿಳೆ (40) ಗರ್ಭಕೋಶದ ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಫೆಬ್ರವರಿ 22ರಂದು ದಾಖಲಾಗಿದ್ದು, ಶಸ್ರ ಚಿಕಿತ್ಸೆ ನಂತರ ಆಕೆಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ರವಾನಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 25ರಂದು ಆಕೆ ಮೃತಪಟ್ಟಿದ್ದಾರೆ.

ಈ ಧಾರಣ ಸಾವುಗಳ ಹಿನ್ನೆಲೆ
ಸೋಮವಾರ ಅಂಜಲಿಯ ಪೋಷಕರು ಬಳ್ಳಾರಿ ರಸ್ತೆ ಮತ್ತು ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ವೈದ್ಯರ ನಿರ್ಲಕ್ಷೆ ಪ್ರಶ್ನಿಸಿ ಪ್ರತಿಭಟನೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಘಟನೆ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳಾದ ತಿರುಪತಯ್ಯ ಪ್ರತಿಕ್ರಿಯಿಸಿ.
ಈ ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಧಾರಣ ಘಟನೆಯಿಂದ ಸಾರ್ವಜನಿಕ ಆಸ್ಪತ್ರೆಯ ಲೋಪ ದೋಷಗಳು ಮತ್ತೊಮ್ಮೆ ಎತ್ತಿ ಹಿಡಿದಂತಾಗಿದೆ ಎಂದು, ಬಡವರ ಬಗ್ಗೆ ನಿರ್ಲಕ್ಷ್ಯ ತೋರಿದ
ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದರು.

ವರದಿ. ಶ್ರೀನಿವಾಸಲು. A