PUC 1

ಪಾವಗಡ: ಪಿ ಯು ಸಿ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

DISTRICT NEWS ತುಮಕೂರು

ಪಾವಗಡ :- ಕೋವಿಡ್‌  ಲಾಕ್‌ ಡೌನ್‌  ಹಿನ್ನೆಲೆಯಲ್ಲಿ ಮುಂದೂಡಿದ್ದ ದ್ವಿತೀಯ ಪಿಯುಸಿ ಯ ಇಂಗ್ಲೀಷ್‌ ಪರೀಕ್ಷೆ ಇಂದು ಪಾವಗಡ ತಾಲ್ಲೂಕಿನಾದ್ಯಂತ ನಡೆಯಿತು,

ಮಕ್ಕಳ ಆರೋಗ್ಯ ದೃಷ್ಠಿಯಿಂದ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಪರೀಕ್ಷೆ ಬರೆಯಲು ಬಂದ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಕುಡಿಯುವ ನೀರನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ತಹಶೀಲ್ದಾರ್ ರವರಾದ ಶ್ರೀ ವರದರಾಜು ರವರು, ಪ್ರಾಂಶುಪಾಲರಾದ ಶ್ರೀ ಬಸವಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ದಗಂಗಯ್ಯ ರವರು ಹಾಗೂ ಪೂಜ್ಯ ಸ್ವಾಮಿ ಜಪಾನಂದಜೀ ರವರು ಹಾಜರಿದ್ದರು

PUC 9

ರೆಡ್‍ಕ್ರಾಸ್ ಸಂಸ್ಥೆಯ ಸ್ವಯಂಸೇವಕರುಗಳು ಶ್ರೀ ವಿಶಾಲ್ ಪ್ರಜ್ವಲ್ ರವರ ನೇತೃತ್ವದಲ್ಲಿ ಹಾಗೂ ಸ್ವಾಮಿ ವಿವೇಕಾನಂದ ತಂಡದವರಾದ ಶ್ರೀ ಪ್ರಕಾಶ್, ಶ್ರೀ ಅನಿಲ್ ಮತ್ತು ಸಂಗಡಿಗರು ಸಹಕಾರ ನೀಡಿದರು.