H2020060188616

ಭಾರತ ಐದು ವರ್ಷಗಳೊಳಗೆ ಎಲೆಕ್ಟ್ರಿಕ್ ವಾಹನಗಳ ಹಬ್‌ ಹಾಗಲಿದೆ…!

National - ಕನ್ನಡ

ಭಾರತ ಐದು ವರ್ಷಗಳೊಳಗೆ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ತಾಣವಾಗಲಿದೆ : ಕೇಂದ್ರ ರಸ್ತೆ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ

ನವದೆಹಲಿ :- ಭಾರತ ಮುಂದಿನ ಐದು ವರ್ಷಗಳೊಳಗೆ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ತಾಣವಾಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂ.ಎಸ್.ಎಂ.ಇ. ಸಚಿವ ಶ್ರೀ ನಿತಿನ್ ಗಡ್ಕರಿ ವ್ಯಕ್ತಪಡಿಸಿದ್ದಾರೆ. ಎಲ್ಲ ಸಾಧ್ಯ ರಿಯಾಯಿತಿಗಳನ್ನೂ ಈ ವಲಯಕ್ಕೆ ನೀಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ಟಿಯನ್ನು ಶೇ.12ಕ್ಕೆ ಇಳಿಸಿದೆ ಎಂದು ಅವರು ತಿಳಿಸಿದರು.images 1

ಕೋವಿಡ್-19 ನಂತರ ‘ಭಾರತದ ಎಲೆಕ್ಟ್ರಿಕ್ ವಾಹನಗಳ ಮಾರ್ಗದರ್ಶಿ’ ಕುರಿತ ವೆಬಿನರ್ ಉದ್ದೇಶಿಸಿ ಇಂದು ಮಾತನಾಡಿದ ಸಚಿವರು,  ಎಲೆಕ್ಟ್ರಿಕ್ ವಾಹನ ವಲಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ,  ಆದರೆ ಅವುಗಳ ಮಾರಾಟ ಪ್ರಮಾಣ ಹೆಚ್ಚಾದಂತೆ ಪರಿಸ್ಥಿತಿ ಬದಲಾಗುತ್ತದೆ ಎಂದು ತಿಳಿಸಿದರು. ಜಗತ್ತು ಚೈನಾದೊಂದಿಗೆ ವಾಣಿಜ್ಯ ನಡೆಸಲು ಇನ್ನು ಇಚ್ಛಿಸುವುದಿಲ್ಲ ಎಂದ ಅವರು, ಇದು ಭಾರತೀಯ ಕೈಗಾರಿಕೆಗಳಿಗೆ ತಮ್ಮ ವಾಣಿಜ್ಯದಲ್ಲಿ ತಿರುವು ಪಡೆಯಲು ಉತ್ತಮ ಅವಕಾಶ ಎಂದು ತಿಳಿಸಿದರು.

ಪೆಟ್ರೋಲಿಯಂ ಇಂಧನ ಸೀಮಿತ ಪ್ರಮಾಣದಲ್ಲಿ ಲಭ್ಯವಿರುವ ಕಾರಣ ವಿಶ್ವ ಪರ್ಯಾಯ ಮತ್ತು ಅಗ್ಗದ ಇಂಧನದತ್ತ ನೋಡಬೇಕಾಗಿದೆ ಎಂದರು. ಎಲೆಕ್ಟ್ರಿಕ್ ಮತ್ತು ಜೈವಿಕ ಇಂಧನ ಅಳವಡಿಸಿಕೊಳ್ಳಲು ಉತ್ತಮ ಆಯ್ಕೆ ಎಂದರು. ನಂತರ ವಾಹನ ನಾಶಪಡಿಸುವ ನೀತಿಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಇದು ವಾಹನ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುತ್ತದೆ ಎಂದು ಪ್ರತಿಕ್ರಿಯಿಸಿದರು.

ಲಂಡನ್ ಮಾದರಿಯ ಸಾರ್ವಜನಿಕ ಸಾರಿಗೆಯನ್ನು ಸ್ಮರಿಸಿದ ಸಚಿವರು, ಅಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು. ಇದೇ ನಿಲುವನ್ನು ಅಳವಡಿಸಿಕೊಳ್ಳುವುದರಿಂದ ಬಡ ಪ್ರಯಾಣಿಕರಿಗೆ ಮತ್ತು ನಾಗರಿಕ ಆಡಳಿತಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು. ಮುಂಬರುವ  ದೆಹಲಿ – ಮುಂಬೈ ಹಸಿರು ಹೆದ್ದಾರಿ ಕಾರಿಡಾರ್ ಅನ್ನು ಪ್ರಾಯೋಗಿಕ ಯೋಜನೆಯಾಗಿ ಅಭಿವೃದ್ಧಿ ಪಡಿಸುವ ಸೂಚನೆ ನೀಡಿದರು.

ಶ್ರೀ ಗಡ್ಕರಿ ಅವರು ವಾಹನ ವಲಯದ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿ, ಆರ್ಥಿಕ ಬಿಕ್ಕಟ್ಟಿನ ಈ ಸಮಯದಲ್ಲಿ ನಿರಂತರತೆ ಮತ್ತು ಆತ್ಮವಿಶ್ವಾಸದೊಂದಿಗೆ ಅದು ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಕ್ರೋಡೀಕರಿಸಬಹುದು ಎಂದರು. ಪ್ರಧಾನಮಂತ್ರಿಯವರ ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಬೆಂಬಲ ನೀಡಲು ದೇಶೀಯತೆಯಲ್ಲಿ ತೊಡಗುವಂತೆ ಕೈಗಾರಿಕೆಗಳಿಗೆ ಅವರು ಕರೆ ನೀಡಿದರು.