ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಿಎಂಟಿಸಿ ಸೇವೆಗಳ ಕಾರ್ಯಾಚರಣೆ ಬಗ್ಗೆ
ಬೆ.ಮ.ಸಾ.ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ, ಹಾಗೂ ಸುರಕ್ಷಿತ ಸೇವೆಯನ್ನು ಒದಗಿಸುವುದು ಪ್ರಮುಖ ಧ್ಯೇಯವಾಗಿರುತ್ತದೆ.
COVID-19 ನಿರ್ಬಂಧಗಳ ಸಡಿಲಿಕೆಯ ನಂತರ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಬೆನ್.ಮ.ಸಾ.ಸಂಸ್ಥೆಯು ಬಸ್ಸುಗಳ ಕಾರ್ಯಾಚರಣೆಯನ್ನು ದಿನಾಂಕ 21.06.2021 ರಿಂದ ಪ್ರಾರಂಭಿಸಿರುತ್ತದೆ.
ರಾಜ್ಯ ಸರ್ಕಾರವು ದಿನಾಂಕ 25-06-2021 ಶುಕ್ರವಾರ ರಾತ್ರಿ 07:00 ರಿಂದ 28-06-2021 ಸೋಮವಾರ ಬೆಳಿಗ್ಗೆ 05:00ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಸದರಿ ಅವಧಿಯಲ್ಲಿ, ದೈನಂದಿನ ವಸ್ತುಗಳಾದ ಹಾಲು,ತರಕಾರಿ,ದಿನಸಿ ಮತ್ತು ಔಷಧಾಲಯ ಇತ್ಯಾಧಿಗಳನ್ನು ಹೊರತುಪಡಿಸಿ, ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಹಾಗೂ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿರುತ್ತದೆ.ಆದುದರಿಂದ, ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯು ಸಹ ಕಡಿಮೆಯಾಗಳಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸಾರಿಗೆ ಸೇವೆಗಳನ್ನು ಕಡಿಮೆಗೊಳಿಸಲಾಗಿದೆ.
ಮೇಲ್ಕಂಡ ಹಿನ್ನೆಲೆಯಲ್ಲಿ, ದಿನಾಂಕ 26&27 ಜೂನ್ 2021 ರಂದು ಸಂಸ್ಥೆಯು ಪ್ರಸ್ತುತ ಕಾರ್ಯಾಚರಣೆಗೊಳಿಸುತ್ತಿರುವ 4000 ಸಾರಿಗೆಗಳಲ್ಲಿ ಶೇ.30 ರಷ್ಟು ಅಂದರೆ 1200 ಸಾರಿಗೆಗಳನ್ನು ಮಾತ್ರ ಕಾರ್ಯಚರಣೆಗೊಳಿಸಲಿದೆ.