ನೂತನ ತಹಶೀಲ್ದಾರ್ ಕೆ.ಮಂಜುನಾಥ್ ಅಧಿಕಾರ ಸ್ವೀಕಾರದೇ
ದೇವನಹಳ್ಳಿ: ನಗರದ ಮಿನಿವಿಧಾನಸೌಧ ತಹಶೀಲ್ದಾರ್ ಕಚೇರಿಯಲ್ಲಿ ನೂತನ ತಹಶೀಲ್ದಾರ್ ಆಗಿ ಕೆ.ಮಂಜುನಾಥ್ ಅಧಿಕಾರ ಸ್ವೀಕರಿಸಿದರು.
ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈ ಕೆ.ಆರ್.ಪುರಂಗೆ ವರ್ಗಾವಣೆಯಾದ ಸ್ಥಾನಕ್ಕೆ ಸರ್ಕಾರ ತಹಶೀಲ್ದಾರ್ ಆಗಿ ಕೆ.ಮಂಜುನಾಥ್ ಅವರನ್ನು ನೇಮಕ ಮಾಡಿದೆ. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು.
ತಹಶೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಗ್ರಾಪಂ ಚುನಾವಣೆ ಇರುವುದರಿಂದ 20 ಗ್ರಾಪಂಗಳಲ್ಲೂ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರವಹಿಸಲಾಗುತ್ತದೆ. ಶಾಂತಿಯುತ ಚುನಾವಣೆ ನಡೆಯುವಂತೆ ನಿಗಾವಹಿಸಲಾಗುವುದು. ತಾಲೂಕಿನ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು. ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಕರ್ತವ್ಯನಿರ್ವಹಿಸಲಾಗುವುದು. ಯಾವುದೇ ಅಕ್ರಮಗಳಿಗೆ ಮಾನ್ಯತೆ ನೀಡಲಾಗುವುದಿಲ್ಲ. ಪಿಟಿಸಿಎಸ್ ಜಮೀನಿಗೆ ಸಂಬಂಧಿಸಿದಂತೆ ಬಡವರಿಗೆ ನ್ಯಾಯ ಒದಗಿಸಲಾಗುತ್ತದೆ. ಅಕ್ರಮ ಬಡಾವಣೆಗಳು ಕಂಡುಬಂದರೆ, ಕೂಡಲೇ ತೆರವುಗೊಳಿಸಿ ಸರ್ಕಾರಕ್ಕೆ ಉಳಿಸುವ ಕೆಲಸ ಮಾಡಲಾಗುತ್ತದೆ. ನಮ್ಮ ಹಂತದಲ್ಲಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಮೇಲಾಧಿಕಾರಗಳ ಮಟ್ಟದಲ್ಲಿ ಸಮಸ್ಯೆಯನ್ನು ಗಮನಕ್ಕೆ ತಂದು ಬಗೆಹರಿಸಲು ಬಗೆಹರಿಸಲಾಗುವುದು. ಕಳೆದ 20 ದಿನಗಳಿಂದ ಬಿದ್ದ ಮಳೆಯಿಂದ ರಾಗಿ ನೆಲಕಚ್ಚಿರುವ ಹಿನ್ನಲೆಯಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಕಾರ್ಯ ಮಾಡಲಾಗುವುದು. ನಷ್ಟವಾಗಿರುವವರಿಗೆ ಸರ್ಕಾರದ ಹಂತದಲ್ಲಿ ವಿಮೆ ಮೂಲಕ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ವರದಿ: ಲೋಕೇಶ್ B K ( ದೇವನಹಳ್ಳಿ)