1607844336624 12dhlp1 scaled

ಗ್ರಾಮ ಪೈಟ್: ದೊಡ್ಡಪ್ಪನಹಳ್ಳಿ ಗ್ರಾಮವನ್ನು ಮಾದರಿ ಮಾಡಲು ಪಣ ತೊಟ್ಟ- ಸೋಮಶೇಖರ್

DISTRICT NEWS ಬೆಂಗಳೂರು
ಗ್ರಾಮಗಳು ಅಭಿವೃದ್ಧಿ ಕಾಣಲು ಶ್ರಮಿಸಲಾಗುತ್ತದೆ: ಗ್ರಾಪಂ ಮಾಜಿ ಸದಸ್ಯ ಸೋಮಶೇಖರ್
ದೇವನಹಳ್ಳಿ: ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ದೊಡ್ಡಪ್ಪನಹಳ್ಳಿ ಗ್ರಾಮವನ್ನು ಮಾದರಿಯನ್ನಾಗಿ ಮಾಡಲು ಎಲ್ಲಾ ರೀತಿಯಲ್ಲಿ ಶ್ರಮಿಸಲಾಗುತ್ತದೆ ಎಂದು ಗ್ರಾಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಮಶೇಖರ್ ತಿಳಿಸಿದರು.
ತಾಲೂಕಿನ ಕನ್ನಮಂಗಲ ಗ್ರಾಪಂನಲ್ಲಿ ದೊಡ್ಡಪ್ಪನಹಳ್ಳಿ ಮತಕ್ಷೇತ್ರದಿಂದ ಚುನಾವಣಾಧಿಕಾರಿ ಮುನಿರಾಜ್ ಅವರಿಗೆ ನಾಮಪತ್ರ ಸಲ್ಲಿಸಿ ಮಾತನಾಡಿದರು. ಗ್ರಾಮ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತದೆ. ಕಳೆದ 5 ವರ್ಷದ ಅವಧಿಯಲ್ಲಿ ಗ್ರಾಪಂ ಸದಸ್ಯನಾಗಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಗ್ರಾಮಕ್ಕೆ ಮಾಡಿದ್ದೇನೆ. ಮತ್ತೇ 5 ವರ್ಷ ಜನ ನಮ್ಮನ್ನು ಆಯ್ಕೆ ಮಾಡಿದರೆ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. 5 ವರ್ಷದ ಅವಧಿಯಲ್ಲಿ ಮಾಡಿರುವ ಜನಪರ ಕಾರ್ಯಗಳನ್ನು ಜನರ ಮುಂದೆ ಇಡಲಾಗುವುದು ಎಂದರು.
ಕನ್ನಮಂಗಲ ಗ್ರಾಪಂನಲ್ಲಿ ಕನ್ನಮಂಗಲ ಪಾಳ್ಯದ ಮತ ಕ್ಷೇತ್ರದಿಂದ ಅಭ್ಯರ್ಥಿ ಪಿ.ನಾಗೇಶ್ ಚುನಾವಣಾಧಿಕಾರಿ ಮುನಿರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ಕಳೆದ 5 ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದರೆ, ಗ್ರಾಮದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಸಾಮಾನ್ಯ ಮಹಿಳಾ ಸ್ಥಾನಕ್ಕೆ ಅಭ್ಯರ್ಥಿ ಮೋಸಿನ್‍ತಾಜ್ ನಾಮಪತ್ರವನ್ನು ಸಲ್ಲಿಸಿದರು.
ಈ ವೇಳೆಯಲ್ಲಿ ಮನು, ಆಸೀಫ್ ಹೆಕ್ಬಾಲ್, ಟ್ರಾಕ್ಟರ್ ನಾರಾಯಣಪ್ಪ, ನಾಸೀರ್ ಅಹಮದ್, ಗೋಪಾಲ್, ಲಕ್ಷ್ಮೀಕಾಂತ್, ನರಸಿಂಹಮೂರ್ತಿ,  ವಕೀಲ ಚಂದ್ರಶೇಖರ್ ಮತ್ತಿತರರು ಇದ್ದರು.
ವರದಿ: ಲೋಕೇಶ್ B K ( ದೇವನಹಳ್ಳಿ)