ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ಗಮನ ಮಹಿಳಾ ಸಮೂಹ ವತಿಯಿಂದ ಗಡಿನಾಡ ಗ್ರಾಮಗಳಲ್ಲಿ ಸಾಹಿತ್ಯ ಮತ್ತು ಕೃಷಿ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು
ಕಾರ್ಯಕ್ರಮದ ಉದ್ಘಾಟನೆಯನ್ನು ವಣಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಚೈತ್ರ ಬಾಬು ನೆರವೇರಿಸಿದರು
ಗ್ರಾಮ ಪಂಚಾಯತಿ ಸದಸ್ಯರಾದ ಚೈತ್ರ ಹೋರಾಟಗಾರ್ತಿ ಮಮತಾ ಯಜಮಾನ್ ನೆರಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಜಯಕುಮಾರಿ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಇದ್ದರು
ವಣಕನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಚೈತ್ರ ಮಾತನಾಡಿ ಜಗದ ಮೊದಲು ಕೃಷಿ ಮಾಡಿದವರು ಹೆಣ್ಣು ಆದರೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು
ಆಧುನಿಕ ಸಮಾಜದಲ್ಲಿ ಕೃಷಿ ಕುಟುಂಬಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವುದು ಅನಾಗರಿಕ ಪ್ರಪಂಚದ ಸಾಕ್ಷಿಯಾಗಿದೆ ಎಂದು ಹೇಳಿದೆ
ನೆರಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಜಯಕುಮಾರಿ ಮಾತನಾಡಿ ಸಾಹಿತ್ಯ ಹುಟ್ಟಿದ್ದೆ ಮಹಿಳೆಯಿಂದ – ಕೃಷಿಯಿಂದ ಅಂತಹ ಕೃಷಿಯನ್ನು ವಿಜ್ಞಾನದ ನೆಪದಲ್ಲಿ ವಿಷವಾಗಿ ಪರಿವರ್ತನೆ ಮಾಡಿದ್ದೇವೆ ಪೋಷಕರಿಗೆ ವಿದ್ಯೆ ಪ್ರತಿಷ್ಠೆಯ ಕಣವಾಗಿದೆ ಎಂದು ಹೇಳಿದರೆ
ಹೋರಾಟಗಾರ್ತಿ ಮಮತಾ ಯಜಮಾನ್ ಮಾತನಾಡಿ ನೋವುಗಳಲ್ಲಿ ರಾಗಗಳನ್ನು ಕಂಡುಕೊಂಡ ಹಳ್ಳಿಗಾಡಿನ ರೈತ ಮಹಿಳೆ ಶ್ರೇಷ್ಠವಾಗಿ ಕಾಣುತ್ತಾಳೆ ಕುಟುಂಬವನ್ನು, ದೇಶವನ್ನು, ಸಾಹಿತ್ಯವನ್ನು ಅವಳೇ ರಕ್ಷಣೆ ಮಾಡಬೇಕು ಗಂಡನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕಲೆಯನ್ನು ಕರಗತ ಮಾಡಿಕೊಂಡರೆ ಸ್ವರ್ಗದ ವಾತಾವರಣವನ್ನು ಕಂಡಂತಾಗುತ್ತದೆ ಎಂದು ಹೇಳಿದರು
ಕಸಾಪ ಅದ್ಯಕ್ಷ ಆದೂರು ಪ್ರಕಾಶ್ ಮಾತನಾಡಿ ಹಳ್ಳಿಗಳಲ್ಲಿ ಸಾಹಿತ್ಯ ಮತ್ತು ಕೃಷಿಯ ವಾತಾವರಣ ಹೆಚ್ಚಾದಂತೆ ಮನುಷ್ಯ ಸಂಬಂಧಗಳು ವೃದ್ಧಿಯಾಗುತ್ತವೆ ಯಾವ ಆಸ್ಪತ್ರೆ ನ್ಯಾಯಾಲಯಗಳ ಅಗತ್ಯವಿರುವುದಿಲ್ಲ ಪರಸ್ಪರ ಸಂಬಂಧಗಳು ವೃದ್ಧಿಯಾಗಬೇಕಾದರೆ ಕಲೆ ಸಂಸ್ಕೃತಿ ಹಬ್ಬ ಹುಣ್ಣಿಮೆ ಹೆಚ್ಚಾದರೆ ಮಾತ್ರ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಮಹಾದೇವಿ ಮಿಥುನ್ ಭರತ್ ದಿವ್ಯಶ್ರೀ ನಾಗರತ್ನ ಸುಧಾ ಭಾರತಿ ವಿನೋದ ಚೂಡೇಶ್ ನಾರಾಯಣಮ್ಮ ದೀಪ ಪ್ರೇಮ ನಿರ್ಮಲ ಇಲಿಯಾಸ್ ಖಾನ್ ಕನಮನಹಳ್ಳಿ ಕುಮಾರ್ ಲತಾ ವರ್ಷ ಕಸಾಪ ಅಪ್ಸರ್ ಆಲಿಖಾನ್ ಡಾ ನಾಗರಾಜ್ ಟಿಎಸ್ ಮುನಿರಾಜು ಚುಟುಕು ಶಂಕರ್ ನಾಗಶ್ರೀ ಹಾಗೂ ಗ್ರಾಮಸ್ಥರು ಹಾಜರಿದ್ದರು.