IMG 20220205 WA0087

ಪಾವಗಡ: ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರ ಪದಗ್ರಹಣ…!

DISTRICT NEWS ತುಮಕೂರು

ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ…….    ಪಾವಗಡ.. ಇಂದು ಪಟ್ಟಣದ ಹಳೇ  ಎಸ್. ಎಸ್. ಕೆ ಸಮುದಾಯ ಭವನದಲ್ಲಿ , ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ  ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.                                                ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಕೆ ,ಎಸ್ ಸಿದ್ದಲಿಂಗಪ್ಪ ನೆರವೇರಿಸಿದರು. ನಂತರ ಮಾತನಾಡಿದ ಅವರು ಕನ್ನಡ ನಾಡು, ನುಡಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.                                                ಕರ್ನಾಟಕ ರಾಜ್ಯವನ್ನು ಆಳಿದ ರಾಜಮನೆತನಗಳು ಕನ್ನಡಕ್ಕೆ ನೀಡಿದ ಸ್ಥಾನಮಾನಗಳು ಚರಿತ್ರೆ ಪುಟಗಳಲ್ಲಿ  ಇಂದಿಗೂ ಜೀವಂತವಾಗಿದೆ ಎಂದರು ಕರ್ನಾಟಕದ ಏಕೀಕರಣ ಚಳುವಳಿಯಲ್ಲಿ ಅನೇಕ ಕನ್ನಡ ವೀರ ಶ್ರಮದ ಫಲವಾಗಿದೆ,ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ತರುವ ನಿಟ್ಟಿನಲ್ಲಿ ಅನೇಕರು ಶ್ರಮಿಸಿದ್ದಾರೆ,

ಕರ್ನಾಟಕ ಸರ್ಕಾರ ಕನ್ನಡದ ಅಭಿವೃದ್ಧಿಗಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್.ಮೂಲಕ ಕನ್ನಡಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಕನ್ನಡ ಸಾಹಿತ್ಯ ಪರಿಷತ್  ಕನ್ನಡದ ನೆಲ-ಜಲ ಭಾಷೆಯನ್ನು ಉಳಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ ಎಂದರು.                                      ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವನ್ನು ಮೊದಲು ಮೈಸೂರಿನ ರಾಜರೇ ವಹಿಸಿಕೊಳ್ಳುತ್ತಿದ್ದರು, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವುದರಲ್ಲಿ ಅನೇಕ ಗಣ್ಯರ ಪಾತ್ರವಿದೆ ಎಂದರು. ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಮಾನವ ಸಂಪನ್ಮೂಲ ಇಲಾಖೆಯನ್ನು  ಬಳಸಿಕೊಂಡು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತದೆ ಎಂದರು. ಗಡಿನಾಡು ಆದಂತಹ ಪಾವಗಡದಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವಂತೆ ಮಾಡುವ ಕಾರ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಜವಾಬ್ದಾರಿಯಾಗಿದೆ ಎಂದರು. ನಡೆ ಕನ್ನಡ, ನುಡಿ ಕನ್ನಡ, ಮನ ಕನ್ನಡವಾಗಬೇಕು, ಎಂದರು.               ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ. ಎಸ್ ಸಿದ್ದಲಿಂಗಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಉಪನ್ಯಾಸಕ ಡಿಎಂ ಯೋಗೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ, ಆರ್.ಟಿ ಖಾನ್, ಕೆ ರಾಮಾಂಜಿ, ನಿವೃತ್ತ ಶಿಕ್ಷಕ ರಾಮಾಂಜನ ರೆಡ್ಡಿ, ಅಂತರಗಂಗೆ ಶಂಕರಪ್ಪ, ಕಾರ ನಾಗಪ್ಪ, ಚನ್ನಬಸವಣ್ಣ, ನಾರಾಯಣಪ್ಪ, ಪ್ರಭಾಕರ್, ವಿಶ್ವನಾಥ್ ಇತರರು ಭಾಗವಹಿಸಿದ್ದರು.

ವರದಿ: ಶ್ರೀನಿವಾಸುಲು ಎ