ಬ್ಯಾಂಕಗಳಲ್ಲಿ ಕನ್ನಡ ಬಳಕೆಯಾಗಬೇಕು ಎಂಬ ವಿಚಾರವಾಗಿ ಮೂರನೇ ಸುತ್ತಿನ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ನಡೆಸಲಾಯಿತು
ಸಭೆಯ ಅಧ್ಯಕ್ಷತೆಯನ್ನ ವಹಿಸಿದ್ದ ತಾಲೂಕು ವಿಶೇಷ ತಹಶೀಲ್ದಾರ್ ವೆಂಕಟಚಲಪತಿ ಮಾತನಾಡಿ ಬ್ಯಾಂಕುಗಳಲ್ಲಿ ಮೂರೂ ಭಾಷೆಗಳನ್ನ ಬಳಸಬೇಕೆಂದು ಸರ್ಕಾರಗಳು ಇರುತ್ತವೆ. ಅದನ್ನ ಕಡ್ಡಾಯವಾಗಿ ಬ್ಯಾಂಕುಗಳು ಪಾಲಿಸಬೇಕು ಎಂದು ಹೇಳಿದರು ಇಲ್ಲಿನ ನೆಲ ಜಲ ಭಾಷೆ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಿ ಬ್ಯಾಂಕಿನ ಸಿಬ್ಬಂದಿಗೆ ಅನ್ನವನ್ನು ನೀಡುತ್ತಿದೆ ಇಂತಹ ಋಣವನ್ನ ತೀರಿಸುವಂತಹ ಕರ್ತವ್ಯ ಬ್ಯಾಂಕಿನ ಸಿಬ್ಬಂದಿ ಮೇಲಿದೆ ಎಂದು ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಬ್ಯಾಂಕುಗಳಲ್ಲಿ ಕನ್ನಡ ಬೆಳೆದರೆ ರಾಜ್ಯದಲ್ಲಿ ಕನ್ನಡ ಉದ್ಧಾರವಾದಂತೆ ಸರಿ ಬರೀ ಕಾನೂನುಗಳಲ್ಲಿ ಕನ್ನಡವನ್ನು ಉದ್ಧಾರ ಮಾಡಲು ಆಗುವುದಿಲ್ಲ ಕನ್ನಡ ಬೆಳೆಸುವ ಮನಸ್ಸುಗಳು ಇದ್ದರೆ ಮಾತ್ರ ಕನ್ನಡ ಬೆಳೆಯಲು ಸಾಧ್ಯ ಬ್ಯಾಂಕಿನ ಸಿಬ್ಬಂದಿ ಹೊರ ರಾಜ್ಯಗಳಿಂದ ಬಂದು ಕನ್ನಡವನ್ನ ಕಲಿಯದೇ ಇರುವುದು ದುರಾದೃಷ್ಟದ ಸಂಗತಿಯಾಗಿದೆ ಎಂದು ನೋವನ್ನು ವ್ಯಕ್ತಪಡಿಸಿದ್ದರು
ಜಯ ಕರ್ನಾಟಕ ತಾಲೂಕು ಅಧ್ಯಕ್ಷರಾದ ಪ್ರಭಾಕರ್ ರೆಡ್ಡಿ ಮಾತನಾಡಿ ಕನ್ನಡ ಭಾಷೆಯನ್ನು ಉಳಿಸಲು ಕನ್ನಡದ ಸಂಘಟನೆಗಳು ಕಂಕಣ ಕಟ್ಟಿ ನಿಂತಿವೆ ಎಲ್ಲಾ ರೀತಿಯಾದ ತ್ಯಾಗಕ್ಕೂ ಸಿದ್ದರಿರುವ ಹೋರಾಟಗಾರರನ್ನ ಪರೀಕ್ಷೆ ಮಾಡುವ ಗೋಜಿಗೆ ಹೋಗಬಾರದು ಎಂದು ಎಚ್ಚರಿಕೆಯನ್ನು ನೀಡಿದರು.
ಕನ್ನಡ ಜಾಗೃತಿ ವೇದಿಕೆಯ ಗೌರೀಶ್ ಮಾತನಾಡಿ ಬ್ಯಾಂಕುಗಳಲ್ಲಿ ಹಣ ಇದ್ದವನ ಕೆಲಸ ಬಹುಬೇಗನೆ ಮಾಡಿಕೊಡುವ ಸಿಬ್ಬಂದಿ ಜನಸಾಮಾನ್ಯರ ಕೆಲಸವನ್ನು ಮಾಡುತ್ತಿಲ್ಲ ಇದು ಖಂಡನೆಯ ಎಂದರು
ತಾಲೂಕಿನ ಎಸ್ ಬಿ ಐ ,ಎಚ್ ಡಿ ಎಫ್ ಸಿ ,ಪಿ ಎಲ್ ಡಿ , ಬರೋಡ ಬ್ಯಾಂಕ್, ಐ ಡಿ ಬಿ ಎಲ್, ಕರ್ನಾಟಕ ಬ್ಯಾಂಕ್ , ಪಂಜಾಬ್ ಬ್ಯಾಂಕ್ ,ಟಿಎಂಬಿ ಬ್ಯಾಂಕ್ ಮ್ಯಾನೇಜರ್ಗಳು ಸಭೆಯಲ್ಲಿ ಭಾಗವಹಿಸಿದ್ದರು
ಸಭೆಯಲ್ಲಿ ಚಿಕ್ಕಹಾಗಡೆ ಶ್ರೀನಿವಾಸ್ ಅರೇಹಳ್ಳಿ ಮಂಜು ಡಿಎಸ್ಎಸ್ ನಾರಾಯಣಸ್ವಾಮಿ ವಾಟಾಳ್ ಬಳಗ ಸನಾವುಲ್ಲ ಕಾರ್ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಕಸಾಪ ಪದಾಧಿಕಾರಿಗಳಾದ ಎಂ ಗೋವಿಂದರಾಜು ಅಪ್ಸರ್ ಆಲಿ ಆಲಿಖಾನ್ ಲೋಕೇಶ್ ಗೌಡ ಚುಟುಕು ಶಂಕರ್ ಎಂ ಕುಮಾರ್ ಬಳಗಾರನಹಳ್ಳಿ ಕುಮಾರ್ ಟಿಎಸ್ ಮುನಿರಾಜು ಇಲಿಯಾಸ್ ಖಾನ್ ಗುಡ್ಡಹಟ್ಟಿ ರಾಮಸ್ವಾಮಿ ಪುಟ್ಟರಾಜು ನರೇಂದ್ರ ಅನೇಕ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
ವರದಿ : ಹರೀಶ್