- ಪಾವಗಡ ಮಟ್ಕಾ ದಂಧೆಯ ವಿಷಯವನ್ನು ಗೃಹಸಚಿವರ ಗಮನಕ್ಕೆ ತಂದ ಸಪ್ತಸ್ವರ..
- ಕರ್ತವಲೋಪ ಆರೋಪ ದ ಹಿನ್ನೆಲೆಯಲ್ಲಿ ಪಾವಗಡ ಠಾಣೆಯ ಸಿ. ಐ ಲಕ್ಷ್ಮಿಕಾಂತ್ ರವರನ್ನು ಅಮಾನತು
ಪಾವಗಡ… ಹಿಂದುಳಿದ ಪ್ರದೇಶವಾದ ಪಾವಗಡ ತಾಲೂಕಿನಾದ್ಯಂತ ಮಟ್ಕಾದಂದೆ ರಾಜಾರೋಷವಾಗಿ ನಡೆಯುತ್ತಿದ್ದು. ಮಟ್ಕಾ ದಂಧೆಯನ್ನು ತಡೆಯುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಕೂಗು ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುತ್ತಿದೆ.
ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಯಲ್ಲಿತ್ತು,
ಮಟ್ಕಾ ದಂಧೆ ಮತ್ತು ಪೋಲೀಸರ ಲಂಚದ ಆಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಷಯ ವನನ್ನು ಸಪ್ತಸ್ವರ ಪತ್ರಿಕೆ ವತಿಯಿಂದ ಗೃಹ ಸಚಿವ ರು ಹಾಗೂ ತುಮಕೂರುಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ಅವರ ಗಮನಕ್ಕೆ ತರಲಾಯಿತು.
ಗೃಹ ಸಚಿವರ ಪ್ರತಿಕ್ರಿಯೆ :
, ಪಾವಗಡ ಮಟ್ಕಾ ದಂಧೆಯ ವಿಷಯ ನನ್ನ ಗಮನಕ್ಕೂ ಬಂದಿದೆ. ತುಮಕೂರು ಎಸ್ ಪಿ ಅವರೊಂದಿಗೆ ಮಾತನಾಡುತ್ತೇನೆ. ಅವಶ್ಯಕತೆ ಬಿದ್ದರೆ ಬೆಂಗಳೂರಿನಿಂದ ತಂಡವನ್ನು ಕಳುಹಿಸಲಾಗುವುದು. ಈ ಎಲ್ಲಾ ವೈಫಲ್ಯ ಗಳಿಗೆ ಸ್ಥಳೀಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಪ್ತಸ್ವರಕ್ಕೆ ತಿಳಿಸಿದ್ದರು.
ಇಂದ ಐ.ಜಿ.ಪಿ ಚಂದ್ರಶೇಖರ್ ಕರ್ತವ್ಯ ಲೋಪ ಆರೋಪ ದ ಹಿನ್ನೆಲೆಯಲ್ಲಿ ಪಾವಗಡ ಠಾಣೆಯ ಸಿ. ಐ ಲಕ್ಷ್ಮಿಕಾಂತ್ ರವರನ್ನು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.
ವರದಿ: ಶ್ರೀನಿವಾಸಲು ಎ
ಗೃಹ ಸಚಿವರ ಮಾತುಗಳು