IMG 20210622 063155

ನಮ್ಮ ನಾಡು ಕಂಡ ಶ್ರೇಷ್ಠ ಕವಿ ಡಾ: ಸಿದ್ಧಲಿಂಗಯ್ಯ….!

Genaral STATE

ನಮ್ಮ ನಾಡು ಕಂಡ ಶ್ರೇಷ್ಠ ಕವಿ ಡಾ: ಸಿದ್ಧಲಿಂಗಯ್ಯ: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ( ಕರ್ನಾಟಕ ವಾರ್ತೆ ) :ಡಾ: ಸಿದ್ಧಲಿಂಗಯ್ಯ ಅವರು  ನಮ್ಮ ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು.  ದಲಿತರ ನೋವನ್ನು  ಸಮರ್ಥಕವಾಗಿ  ಅಕ್ಷರ ರೂಪಕ್ಕೆ ಇಳಿಸಿ, ಅವರನ್ನು ಜಾಗೃತಿಗೊಳಿಸಿದವರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಇಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವಂಗತ ಕವಿ ಚಿಂತಕ ಮತ್ತು ಮಾಜಿ ವಿಧಾನಪರಿಷತ್ ಸದಸ್ಯ ಡಾ. ಸಿದ್ಧಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಡಾ: ಸಿದ್ಧಲಿಂಗಯ್ಯನವರು, ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು,ಅಣ್ಣ ಬಸವಣ್ಣವರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋದ ಎಲ್ಲಾ ಕಡೆ ಸಿದ್ಧಲಿಂಗಯ್ಯನವರು ಮಾತನಾಡುತ್ತಾರೆ ಅಂದರೆ ಎಲ್ಲರೂ ಕಿವಿಕೊಟ್ಟು ಕೇಳುವ ರೀತಯಲ್ಲಿ ಅವರ ವಿಚಾರಧಾರೆಗಳನ್ನ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದಂತೆ ಧೀಮಂತ ವ್ಯಕ್ತಿ ಡಾ:ಸಿದ್ಧಲಿಂಗಯ್ಯನವರು ಎಂದರು.
ಅವರ ನನ್ನ ಸಂಬಂಧ ಬಹಳ ನಿಕಟವಾಗಿದ್ದು, ಬಹಳ ಸಂದರ್ಭಗಳಲ್ಲಿ  ಅನೇಕ ರೀತಗಳಲ್ಲಿ ಚರ್ಚೆ ಮಾಡಿ ಮಾರ್ಗದರ್ಶನ ಮಾಡುತ್ತಿದ್ದರು.  ಅಂತಹ ವ್ಯಕ್ತಿಯನ್ನು ಕಳೆದುಕೊಂಡು ನಮ್ಮ ಕುಟುಂಬದ ಒಬ್ಬ ಸದಸ್ಯರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ಭಾವನೆ ನನಗೆ ಮಾತ್ರವಲ್ಲ, ಇಲ್ಲಿ ಕುಳಿತಂತ ಎಲ್ಲರಿಗೂ ಇದೆ ಎಂದು ಭಾವಿಸುತ್ತೇನೆ.. ಡಾ: ಸಿದ್ದಲಿಂಗಯ್ಯನವರು ಮಾಡಿದಂತಹ ಕೆಲಸ ಅವರು ಕವನ ರೂಪದಲ್ಲಿ ನಾಡಿಗೆ ಕೊಟ್ಟಂತ ಕೊಡುಗೆ ಭವಿಷ್ಯ:   ಜೀವನದುದ್ದಕ್ಕೂ ನಾವು ನೆನಪಿನಲ್ಲಿಡುವಂತ ಕೆಲಸವನ್ನು ಅವರು ಮಾಡಿ ಹೋಗಿದ್ದಾರೆ
ಸಾವಿರಾರು ನದಿಗಳು, ಕಪ್ಪುಗಾಡಿನ ಹಾಡು  ಮೊದಲಾದ  ಕಾವ್ಯ ಸಂಕಲನಗಳ ಮೂಲಕ ದಲಿತ ಚಳುವಳಿಗೆ ಹೊಸ ವೇಗ ಮತ್ತು ಹೊಸ ಸ್ಪರ್ಷ ನೀಡಿದವರು .  ಮೂರು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ  ತಮ್ಮ ಶಿಷ್ಯ ವರ್ಗವನ್ನು ಬೆಳೆಸಿದ ಗುರುಗಳು ಅವರು.  ಕಾವ್ಯ ,ನಾಟP,À ಪ್ರಬಂಧ,ವಿಮರ್ಶೆ, ಸಂಶೋಧನೆ, ಆತ್ಮ ಚರಿತ್ರೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೆ ಆದಂತಹ ಚಾಪುಮೂಡಿಸಿದ ಪ್ರತಿಭಾಶಾಲಿ ವ್ಯಕ್ತಿ ನಮ್ಮ ಸಿದ್ಧಲಿಂಗಯ್ಯನವರು.

IMG 20210622 063218
ಸಾಹಿತ್ಯ ಕ್ಷೇತ್ರದ ಸಾಧನೆಗೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಸರ್ಕಾರ ಇವರನ್ನು  ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಇನ್ನು ಇವರ ಸೇವೆ ಗಣನೀಯವಾಗಿತ್ತು ಎಂದು ಈಗ ತಾನೆ  ಗೋವಿಂದಕಾರಜೋಳ ಅವರು ಸ್ಮರಣೆ ಮಾಡಿದ್ದಾರೆ. ಎರಡು ಬಾರಿ  ವಿಧಾನಪರಿಷತ್ತಿನ ಸದಸ್ಯರಾಗಿ, ವಿಧಾನಪರಿಷತ್ತಿನಲ್ಲಿ  ಅವರು ಮಾತನಾಡುತ್ತಿದ್ದ ಮಾತುಗಳು ಈ ನಾಡಿನ ಸರ್ವಜನಾಂಗದ ಅಭಿವೃದ್ಧಿಗಾಗಿ  ನಾಡಿನಲ್ಲಿ ಧರ್ಮ ಪ್ರಜ್ಞೆ, ರಾಷ್ಟ್ರ ಪ್ರಜ್ಚೆ, ಸಮಾಜ ಪ್ರಜ್ಞೆ ಮೂಡಿಸುವಂತ ಅವರಹೇಳಿಕೆಗಳು, ಲೇಖನಗಳು ಯಾರೂ ಮರೆಯಲು ಸಾಧ್ಯವಿಲ್ಲ.
ಇಂತಹ ಮೇರುನುಡಿ ಸರಳ ಸಜ್ಜನಿಕೆಯ ಡಾ: ಸಿದ್ಧಲಿಂಗಯ್ಯನವರ ಹಾಸಸ್ಯ ಪ್ರಜ್ಞೆ ಉಲ್ಲೇಖನಾರ್ಹ ಇಂತಹ ಶ್ರೇಷ್ಠ ಸಾಧಕನ ಮರಣ ನಮ್ಮ ನಾಡಿಗೆ ತುಂಬಲಾರದ ನಷ್ಟವಾಗಿದೆ . ಅವರ ಜೀವಿತಾವಧಿಯ ಕೊನೆಯಲ್ಲಿ ರಚಿಸಿದ ಬೋಧಿವೃಕ್ಷದ ಕೆಳಗೆ ಕವನ ಸಂಕಲನ ಬಿಡುಗಡೆ ಮಾಡುವ ಅವಕಾಶ ದೊರೆತಿದೆ . ಈ ಕೃತಿಯನ್ನು ನನಗೆ ರಚಿಸಿದ್ದಾರೆ ಎಂದು ತಿಳಿದು ಮನ ತುಂಬಿ ಬಂದಿದೆÉ.
ಅವರು ಬದುಕಿದ್ದಾಗ ಈ ಕವನ ಸಂಕಲನ ಬಿಡುಗೆಯಾಗಿದ್ದರೆ ನಾವೆಲ್ಲರೂ ಎಷ್ಟು ಸಂತೋಪಡುತ್ತಿದ್ದೆವು ಭಗವಂತನ ಇಚ್ಚೆ ಬೇರೆ ಇತ್ತು . ಇವತ್ತು ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಅವರ ಕುಟುಂಬ ದವರಿಗೆ, ಶಿಷ್ಯವರ್ಗಕ್ಕೆ  ಅಭಿಮಾನಿಗಳಿಗೆ ಅವರ ಅಗಳಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿಎಂದು ದೇವರಲ್ಲಿ ಪ್ರಾರ್ಥಣೆ ಮಾಡಿ, ಅವರ ಸ್ಮರಣೆ  ನಿರಂತರವಾಗಿ ಜನರಲ್ಲಿರುವಂತೆ ಏನು ಕಾರ್ಯ ಮಾಡಬೇಕು ಎನ್ನುವ ಬಗ್ಗೆ ಹಿರಿಯರಲ್ಲಿ ಚರ್ಚೆ ಮಾಡಿ, ಒಂದು ತೀಮಾನಕ್ಕೆ ಬಂದು ಅವರ ಒಂದು ನೆನಪನ್ನು  ಚಿರಸಂರಣಿಯವಾಗಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಸತಿ ಸಚಿವ ವಿ.ಸೋಮಣ್ಣ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಶಾಸಕ ಮುನಿರತ್ನ, ಅವರ ಮಗಳು ಮಾನಸ ಸಿದ್ಧಲಿಂಗಯ್ಯ ಅವರು