ವಯೋ ವೃದ್ಧರಿಗಾಗಿ “ವಯೋ ವಂದನಾ ಯೋಜನೆ” ಜಾರಿಮಾಡಲಾಗಿದೆ – ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು, ಮಾರ್ಚ್ 06 (ಕರ್ನಾಟಕ ವಾರ್ತೆ):ಆಯುಷ್ ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಯೋ ವಂದನಾ ಯೋಜನೆಯು ಒಂದಾಗಿದ್ದು 70 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗೆ ರೂ.5.00ಲಕ್ಷಗಳ ಮೊತ್ತದ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಸದಸ್ಯರಾದ ವೇದವ್ಯಾಸ ಕಾಮತ್ ಡಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಆಯುμÁ್ಮನ್ ಆರೋಗ್ಯ ಕರ್ನಾಟಕ ಯೋಜನೆಯಡಿ 1650 ಚಿಕಿತ್ಸಾ ವೆಚ್ಚಗಳಲ್ಲಿ 294 ಸಾಮಾನ್ಯ/ಸರಳ ಚಿಕಿತ್ಸಾ ವಿಧಾನಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದು 251 ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸಾ ವಿಧಾನಗಳು, 934 ತೃತೀಯ ಹಂತದ ಚಿಕಿತ್ಸಾ ವಿಧಾನಗಳು ಮತ್ತು 171 ತುರ್ತು ಚಿಕಿತ್ಸಾ ವಿಧಾನಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಪಡೆಯಬಹುದಾಗಿದೆ. ಲಭ್ಯವಿಲ್ಲದ ಚಿಕಿತ್ಸಾ ವಿಧಾನಗಳಿಗೆ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು.
ಆಯುμÁ್ಮನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಹೆಚ್‍ಬಿಪಿ2022 ಪ್ಯಾಕೇಜನ್ನು ಅನುμÁ್ಠನಗೊಳಿಸಲು ಸರ್ಕಾರದ ಪರಿಶೀಲನೆಯಲ್ಲಿರುತ್ತದೆ. ಈ ಪ್ಯಾಕೇಜ್ ಅಡಿ ಒಟ್ಟು 1953 ಚಿಕಿತ್ಸಾ ವಿಧಾನಗಳು ಲಭ್ಯವಾಗಲಿವೆ. ABRK ಯೋಜನೆಯು 1 ಕೋಟಿ 12 ಲಕ್ಷ ಕುಟುಂಬಗಳಿಗಾಗಿ ಇರುವ ಯೋಜನೆಯಾಗಿದ್ದು 60:40 ರನುಸಾರ ಕೇಂದ್ರ ಸರ್ಕಾರದ ಶೇಕಡಾ 60 ರಷ್ಟು ರಾಜ್ಯ ಸರ್ಕಾರದ 40% ಚಿಕಿತ್ಸಾ ವೆಚ್ಚ ಭರಿಸಬೇಕಾಗಿದೆ. ಕೇಂದ್ರ ಸರ್ಕಾರದಿಂದ ಇದೂವರೆಗೆ ಅನುದಾನ ಬಂದಿರುವುದಿಲ್ಲ. ಸದರಿ ಯೋಜನೆಗೆ ವಾರ್ಷಿಕ 68.98ಕೋಟಿ ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಆಯುμÁ್ಮನ್ ಭಾರತ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ ಶೇಕಡಾ 70ರಷ್ಟು ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಈ ಕುರಿತು ಪತ್ರ ಬರೆಯಲಾಗಿದ್ದು ಇದೂವರೆಗೂ ಕೇಂದ್ರ ಸರ್ಕಾರದಿಂದ ಉತ್ತರ ಬಂದಿರುವುದಿಲ್ಲ. ಕೇಂದ್ರದಿಂದ ಉತ್ತರ ಬಂದಮೇಲೆ ಈ ಯೋಜನೆ ಕುರಿತು ವಿಸ್ತಾರವಾಗಿ ತಿಳಿಸಬಹುದಾಗಿದೆ.
ಎಬಿಆರ್‍ಕೆ ಯೋಜನೆ ಹಾಲಿ ಸರಾಗವಾಗಿ ನಡೆಯುತ್ತಿದೆ. 582 ಆಸ್ಪತ್ರೆಗಳು ಎಂಪಾನಲ್ ಆಗಿವೆ. ಕೆಲವು ಕಾಯಿಲೆಗಳು ಇದರಡಿ ಸೇರಿರುವುದಿಲ್ಲ. ಎಂಪಾನಲ್ ಆಗಿರುವ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದ ಬಿಲ್‍ಗಳ ಮೊತ್ತವನ್ನು 30 ದಿನಗಳೊಳಗಾಗಿ ಪಾವತಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಶೀಘ್ರವಾಗಿ ಪಾವತಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು