ಆಂಧ್ರ ದಲ್ಲಿ ಹಕ್ಕಿ ಜ್ವರ: ತಾಲ್ಲೂಕಿನ ಆಂಧ್ರ ಗಡಿ ಭಾಗದಲ್ಲಿ 2 ಕಡೆ ತಪಾಸಣಾ ಕೇಂದ್ರ ಸ್ಥಾಪನೆ.
ಪಾವಗಡ : ಕರ್ನಾಟಕದ ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಆಂಧ್ರದಲ್ಲಿ ಹಕ್ಕಿಜ್ವರದ ಹಿನ್ನೆಲೆ
ತಾಲ್ಲೂಕಿನ ಆಂಧ್ರದ ಗಡಿಗಳಾದ ನಾಗಲಾಪುರ ಮತ್ತು ದೋಮ್ಮತ ಮರಿ ಯಲ್ಲಿ ಮುನ್ನೆಚ್ಚರಿಕೆ ಕಾರ್ಯಕ್ರಮವಾಗಿ ಪಶು ಇಲಾಖೆ ವತಿಯಿಂದ ಹಕ್ಕಿ ಜ್ವರ ತಪಾಸಣಾ ಕೇಂದ್ರವನ್ನು
ತೆರೆಯಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವರ್ಕೆರಪ್ಪ ಮಾಹಿತಿ ತಿಳಿಸಿದ್ದಾರೆ.
ತಾಲ್ಲೂಕಿನ ಜನರು ಯಾವುದೇ ರೀತಿಯಲ್ಲಿ ಭಯಪಡುವ ಅವಶ್ಯಕತೆ ಇಲ್ಲ,ಈಗಾಗಲೇ ಪ್ರತಿ ಪಂಚಾಯತಿಗಳ ಪಿಡಿಒಗಳಿಗೆ ಮಾಹಿತಿ ನೀಡಲಾಗಿದ್ದು, ಯಾವುದೇ ಗ್ರಾಮಗಳಲ್ಲಿ ಹೆಚ್ಚಿನ ಕೋಳಿಗಳು ಸತ್ತರೆ ಕೂಡಲೆ ಹತ್ತಿರದ ಪಶುಸಂಗೋಪನ ಇಲಾಖೆಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಇಲಾಖೆಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಆಂಧ್ರಪ್ರದೇಶ ಸೇರಿದಂತೆ ಬೇರೆ ಕಡೆಯಿಂದ ಬರುವ ಕೋಳಿ, ಮೊಟ್ಟೆ, ಕೋಳಿ ಆಹಾರ ಸಾಗಣೆ ವಾಹನಗಳನ್ನು ತಪಾಸಣೆ ಮಾಡಲುಬೆಳಗ್ಗೆ 06ರಿಂದ ಸಂಜೆ06 ರ ವರೆಗೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ ಎಂದರು.
ಒಂದು ವೇಳೆ ಹಕ್ಕಿ ಜ್ವರದ ತೀವ್ರತೆ ಹೆಚ್ಚಾದರೆ
24 ಗಂಟೆಗಳಲ್ಲಿಯೂ ಸಹ ತಪಾಸಣೆ ಮಾಡಲು ಸಿಬ್ಬಂದಿಯನ್ನು ನೇಮಿಸುವುದಾಗಿ ತಿಳಿಸಿದರು.
ವರದಿ : ಶ್ರೀನಿವಾಸಲು ಎ