ಆನೇಕಲ್: ಬೀದಿ ಬದಿ ವ್ಯಾಪಾರಿಗಳನ್ನು ಬೀದಿಪಾಲು ಮಾಡಿರುವ ಅದಿಕಾರಿಗಳ ದೋರಣೆ ಖಂಡಿಸಿ ಆರ್.ಪಿ.ಐ. ಮತ್ತು ಎಸ್.ಎಸ್.ಡಿ ಹಾಗೂ ಡಿಎಸ್‌ಎಸ್ ಪ್ರತಿಭಟನೆ ನಡೆಸಿದರು
ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ದೊಡ್ಡ ತೋಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲಾದ್ರಿ ರಸ್ತೆಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಬೀದಿಪಾಲು ಮಾಡಿರುವ ಅದಿಕಾರಿಗಳ ವಿರುದ್ದ ಕಾನೂನಿನ ಶಿಸ್ತು ಕ್ರಮ ಜರುಗಿಸಲು ಹಾಗೂ ಈ ಹಿಂದೆ ವ್ಯಾಪಾರ ಮಾಡುತ್ತಿದ್ದ ಜಾಗದಲ್ಲಿಯೇ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡುವಂತೆ ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಮತ್ತು ಸಮತಾ ಸೈನಿಕ ದಳ ಮತ್ತು ದಲಿತ ಸಂಘರ್ಷ ಸೇನೆ ಹಾಗೂ ಬೆಂಗಳೂರು ನಗರ ರಸ್ತೆ ಬದಿ ವ್ಯಾಪಾರಿಗಳ ಸಂಘದ ಸಹಯೋಗದಲ್ಲಿ ನೀಲಾದ್ರಿ ರಸ್ತೆಯಿಂದ ದೊಡ್ಡ ತೋಗೂರು ಗ್ರಾಮ ಪಂಚಾಯಿತಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇನ್ನು ಇದೇ ಸಂಧರ್ಭದಲ್ಲಿ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ರಾಷ್ಠೀಯ ಉಪಾಧ್ಯಕ್ಷರಾದ ಡಾ|| ಎಂ. ವೆಂಕಟಸ್ವಾಮಿ ರವರು ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ದಲಿತ ಸಂಘರ್ಷ ಸೇನೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಗೋಪಾಲ್ ರವರು ವಹಿಸಿದ್ದರು.
ಪ್ರತಿಭಟನೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾದ ಬೆಂಗಳೂರು ನಗg ಜಿಲ್ಲಾಧ್ಯಕ್ಷ ಆರ್.ಚಂದ್ರಶೇಖರ್. ಹೋರಾಟಗಾರ ವೆಂಕಿ, ಕೇಶವನ್, ರವಿಕುಮಾರ್, ಬ್ಯಾಟರಾಜ್, ಮರಿಯಪ್ಪ. ಪೀಟರ್, ಆನೇಕಲ್ ರಾಜಪ್ಪ, ಮುನಿರಾಜು, ಬಿಂಗೀಪುರ ಮಂಜು, ಸೋಮಶೇಖರ್, ಶೀನಪ್ಪ, ರಮಾದೇವಿ, ಸರಳಾ, ನಾಗರತ್ಮ, ಸಲ್ಮಾ, ಸುಧಾ, ಚಲಘಟ್ಟ ಮುನಿರಾಜು, ನಾಗೇಶ್, ಗೋಪಾಲ್, ಕೆಂಚೆಯ್ಯ ಮತ್ತು ಹೋರಾಟಗಾರರು ಮತ್ತು ಬೀದಿ ಬದಿ ವ್ಯಾಪಾರಿಗಳು ಭಾಗವಹಿಸಿದ್ದರು.