IMG 20220916 WA0028

ಪಾವಗಡ:ಬೂದಿಬೆಟ್ಟ ಗ್ರಾಮಪಂಚಾಯತಿ ಕಚೇರಿ ಸ್ಪೋಟಿಸಲು ಯತ್ನ  …?

CRIME Genaral STATE

ಬೂದಿಬೆಟ್ಟ ಗ್ರಾಮದಲ್ಲಿ ಸ್ಪೋಟದ ಸದ್ದು  : ದಿಗ್ಬ್ರಾಂತಗೊಂಡ ಜನತೆ

ಪಾವಗಡ/ ವೈ.ಎನ್.ಹೊಸಕೋಟೆ : ಗುರುವಾರ ರಾತ್ರಿ ಸುಮಾರು 9.30 ರ ಸಮಯದಲ್ಲಿ ಕೋಟಗುಡ್ಡ-ವೈ.ಎನ್.ಹೊಸಕೋಟೆ ಮುಖ್ಯರಸ್ತೆಯಲ್ಲಿರುವ ಬೂದಿಬೆಟ್ಟ ಗ್ರಾಮಪಂಚಾಯಿತಿಯ ಕಾರ್ಯಾಲಯದಲ್ಲಿ ಸ್ಪೋಟ ದ ಶಬ್ದ ಕೇಳಿ ಬಂದಿದೆ. ಸ್ಫೋಟದ ಶಬ್ದಕ್ಕೆ ಜನತೆ ಕೆಲ ಕ್ಷಣ ಆತಂಕಕ್ಕೆ ಒಳಗಾದರಂತೆ.

IMG 20220916 WA0042

ಗ್ರಾಮಪಂಚಾಯಿತಿಯ ಕಾರ್ಯಾಲಯದ ಗೋಡೆಗಳು ಬಿರುಕು ಬಿಟ್ಟಿದೆ  .ಎರಡು ಕುರ್ಚಿಗಳು ಸುಟ್ಟಿವೆ ಕಾರ್ಯಾಲಯದ ಕಿಟಕಿಯನ್ನು ಕಿತ್ತು ಒಳಹೋಗಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಸ್ಪೋಟವನ್ನು ನಡೆಸಿದವರು ಪಂಚಾಯಿತಿಯಲ್ಲಿ ಕಡತಗಳನ್ನು ಸುಡಲೋ, ರಾಜಕೀಯ ವೈಮನಸ್ಯದಿಂದಲೋ ಅಥವಾ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕೆ ಯನ್ನು ಸಾರ್ವಜನಿಕರು  ವ್ಯಕ್ತಪಡಿಸಿದ್ದಾರೆ.

IMG 20220916 WA0052

ಕೆಲವೇ ದಿನಗಳ ಹಿಂದೆ ಗ್ರಾಮದಲ್ಲಿ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿ ಸುಡಲಾಗಿದ್ದು, ಘಟನೆ ಮಾಸುವ ಮುನ್ನವೇ ಸ್ಪೋಟ ಸಂಭವಿಸಿದೆ.

ಘಟನೆ ತಿಳಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒ ಪೊಲೀಸ್ ಠಾಣೆಗೆ ದೂರು ನೀಡಿದ್ದು , ಸಿ.ಐ. ಕಾಂತರೆಡ್ಡಿ , ಎಸ್ಐ ಅರ್ಜುನ್ ಗೌಡ, ತಾಲೂಕು ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

IMG 20220916 WA0050

ತಾಲ್ಲೂಕು ಪಂಚಾಯತಿ ಇ ಒ ಪ್ರತಿಕ್ರಿಯೆ…
ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಶಿವರಾಜಯ್ಯ ವರು ಸಪ್ತಸ್ವರ  ಪ್ರತಿಕ್ರಿಯೆ ನೀಡಿದರು: ಯಾರೋ ಕಿಡಿಗೇಡಿಗಳು ಕಿಟಕಿ ಬಾಗಿಲುಗಳನ್ನು ಮುರಿದು ಒಳಗೆ ಹೋಗಿ ಎರಡು ಚೇರ್ ಗಳನ್ನು ಸುಟ್ಟು ಹಾಕಿದ್ದು ಗೋಡೆಗಳು ಬಿರುಕು ಬಿಟ್ಟಿದೆ ಎಂದು, ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿಲಾಗಿದೆ, ಉದ್ದೇಶ ಪೂರಕವಾಗಿ ಮಾಡಿರಬಹುದೆಂಬ ಸಂಶಯವಿದೆ ಎಂದರು.

IMG 20220916 WA0068

ಪಾವಗಡ ಗ್ರಾಮಾಂತರ ವೃತ್ತ- ಸರ್ಕಲ್ ಇನ್ಸ್‌ಪೆಕ್ಟರ್ ಪ್ರತಿಕ್ರಿಯೆ

ಘಟನೆಗೆ ಸಂಬಂಧಿಸಿದಂತೆ ಸಿ ಐ ಕಾಂತ ರೆಡ್ಡಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯಬೇಕಿದೆ, ಪಂಚಾಯಿತಿ ಕಚೇರಿಯಲ್ಲಿ ಎರಡು ಚೇರ್ ಗಳು ಸುಟ್ಟು ಹೋಗಿವೆ, ಗ್ರಾಮ ಪಂಚಾಯತಿಯ ಗೋಡೆ ಬಿರುಕು ಬಿಟ್ಟಿದೆ , ನಾಳೆ ಬೆಂಗಳೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಬಂದು ತನಿಖೆ ಮಾಡುವುದರಿಂದ ವಿವರಗಳು ಲಭ್ಯವಾಗುವ ಸಾಧ್ಯತೆ ಇದೆ, ನಂತರ ಘಟನೆಯ ಸಂಪೂರ್ಣ  ವಿವರ ನೀಡಲಾಗುವುದು ಎಂದರು.

IMG 20220916 WA0047

ಇದೇ ಸಂದರ್ಭದಲ್ಲಿ‌ ವಿವಿಧ‌ ಮಾಧ್ಯಮ ವರದಿಗಳ ಪ್ರಸಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

ವೆಂಕಟೇಶ್‍ನಾಯ್ದು  ಡಿಎಸ್‍ಪಿ, ಮಧುಗಿರಿ

ಸ್ಪೋಟದ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ತಜ್ಞರನ್ನು ಸ್ಥಳಕ್ಕೆ ಕರೆಯಿಸುವ ವ್ಯವಸ್ಥೆ ಆಗಿದೆ.

IMG 20220916 WA0027

ಪಿಡಿಒ ಪ್ರತಿಕ್ರಿಯೆ

ನಾನು ಕರ್ತವ್ಯಕ್ಕೆ ಹಾಜರಾಗಿ 12 ದಿನ ಕಳೆದಿದೆ. ಈ ಹಿಂದೆ ಇದ್ದ ಪಿಡಿಓ ರವರ ಅಥವಾ ಇಲ್ಲಿನ ಕಛೇರಿಯ ಕಾರ್ಯಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಛೇರಿಯಲ್ಲಿ ಗುರುವಾರ ರಾತ್ರಿ ಸ್ಪೋಟ ಸಂಭವಿಸಿದ್ದು, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಮತ್ತು ವೈ.ಎನ್.ಹೊಸಕೋಟೆ ಪೋಲಿಸ್ ಠಾಣೆ ಗೆ ದೂರು ನೀಡಿದ್ದೇನೆ. ಕಛೇರಿಯ ಗೋಡೆಗಳು ಹೊಡೆದಿರುವುದರಿಂದ ಅದರಡಿ ಕೆಲಸ ಮಾಡಲು ಸಾಧ್ಯವಿಲ್ಲದಂತಿದೆ.
ಮುದ್ದುರಾಜ್, ಪಿಡಿಓ, ಬೂದಿಬೆಟ್ಟ ಗ್ರಾಮಪಂಚಾಯಿತಿ

ಜಿಲ್ಲಾಪಂಚಾಯತಿ

ಜಿಲ್ಲಾಪಂಚಾಯತಿ ಸಿಇಒ ಡಾ. ವಿಧ್ಯಾಕುಮಾರಿ ಅವರು ಪಾವಗಡ ತಾಲ್ಲೂಕು‌ಪಂಚಾಯತಿ ಇಒ  ಶಿವರಾಜಯ್ಯ ಅವರಿಂದ ಘಟನೆ ಸಂಪೂರ್ಣ ಮಾಹಿತಿಯನ್ನು‌ ಪಡೆದು ಕೊಂಡಿದ್ದಾರೆ         ಎರಡು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ ಮತ್ತು‌ ಗೋಡೆಗಳು ಬಿರಕು ಬಿಟ್ಟಿದೆ, ಪಂಚಾಯತಿಯ ಯಾವುದೇ ದಾಖಲೆಗಳಿಗೆ ಹಾನಿಯಾಗಿಲ್ಲ ಎಂಬ ವಿಷಯವನ್ನು‌  ಸಿಇಒ ಅವರಿಗೆ  ತಿಳಿಸಿದ್ದಾರಂತೆ.

ಅಗತ್ಯ ಕ್ರಮ ವಹಿಸುವಂತೆ ಸಿಇಒ ಅವರು ಇಒ ಅವರಿಗೆ  ಸೂಚಿಸಿದ್ದಾರೆ ಎಂದು ಡಿಸ್‌ ಅಥಿಕ್  ಅವರು‌ ಸಪ್ತಸ್ವರಕ್ಕೆ ತಿಳಿಸಿದ್ದಾರೆ.

ಗ್ರಾಮಪಂಚಾಯಿತಿಯಲ್ಲಿ ಸುಮಾರು ಒಂದು ವರ್ಷದಿಂದ ನಿವೇಶನ ಖಾತೆಗಳ ಬಗ್ಗೆ ( ಇ – ಸ್ವತ್ತು) ಜನ ಅಲೆಯುತ್ತಿದ್ದು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದವರೆಗೆ ಪಿರ್ಯಾದುಗಳನ್ನು ಮಾಡಿದ್ದರು ಎನ್ನಲಾಗಿದೆ.

ಗ್ರಾಮ ಪಂಚಾಯತಿ  ಕಾರ್ಯವೈಪಲ್ಯ ಸಹಿಸಲಾಗದವರು ಈ ರೀತಿ ಕೃತ್ಯ ನಡೆಸಿರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವರದಿ: ಶ್ರೀನಿವಾಸಲು ಎ- ಪಾವಗಡ

ರಾಮಚಂದ್ರ- ವೈಎನ್ ಎಚ್